ಹುಲಿ ದಾಳಿಗೆ ಹಸು ಬಲಿ

tiger-007
Published on

ಗೋಣಿಕೊಪ್ಪ: ಟಿ.ಶೆಟ್ಟಿಗೇರಿಯಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಶನಿವಾರ ಹುಲಿ ದಾಳಿ ನಡೆಸಿ ಕೊಂದುಹಾಕಿದೆ.

ಗ್ರಾಮದ ಕಾಡ್ಯಾಮಾಡ ಬಿ. ಸುಮನ್ ಅವರು ಹಸುವನ್ನು ಎಂದಿನಂತೆ ತೋಟದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ಹುಲಿ ದಾಳಿ ನಡೆಸಿದೆ. ಸ್ಥಳಕ್ಕೆ ರೈತಸಂಘದ ಪ್ರಮುಖರು ಭೇಟಿ ನೀಡಿ ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net