ಆರೋಗ್ಯ ರಕ್ಷಣೆಗೆ ಸಹಕಾರಿ : ತರಬೇತುದಾರ ಶ್ರೀನಿವಾಸ್ ಶೆಟ್ಟಿ

yoga
ಕುಡಿಬೈಲ್ ಕುಚ್ಚೂರು ಶಾಂತಿನಿಕೇತನ ಸಭಾಂಗಣದಲ್ಲಿ ಯೋಗ ತರಬೇತುದಾರ ಶ್ರೀನಿವಾಸ್ ಶೆಟ್ಟಿ ಮಾರ್ಗದರ್ಶನದಲ್ಲಿ ಯೋಗಾಸನ
Published on

ಹೆಬ್ರಿ: ಯೋಗದಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಆರೋಗ್ಯ ಕಾಪಾಡಲು ಯೋಗ ಉಪಯೋಗಕಾರಿ. ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಯೋಗ ಮಾಡಿದರೆ ಉತ್ತಮ ದೈಹಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಯೋಗ ತರಬೇತುದಾರ ಶ್ರೀನಿವಾಸ್ ಶೆಟ್ಟಿ ಹೇಳಿದರು.

ಕುಡಿಬೈಲ್ ಕುಚ್ಚೂರು ಶಾಂತಿನಿಕೇತನ ಯುವವೃಂದ ಹಾಗೂ ನೆಹರು ಯುವಕೇಂದ್ರ ಉಡುಪಿ ಸಹಯೋಗದಲ್ಲಿ ಶಾಂತಿನಿಕೇತನ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್, ವಿದ್ಯಾರ್ಥಿ ಘಟಕ ಅಧ್ಯಕ್ಷೆ ಸೌಜನ್ಯಾ, ಆಡಳಿತ ಮಂಡಳಿ ಸದಸ್ಯರಾದ ರಾಜಶ್ರೀ, ಕಲಾವತಿ, ವಿದ್ಯಾರ್ಥಿ ಘಟಕದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net