ನಾಲ್ಕು ಲಕ್ಷ ಮೀನು ಮರಿ ಬಿತ್ತನೆ

Kampli Fish
ಕಂಪ್ಲಿ ಬಳಿಯ ತುಂಗಭದ್ರಾ ನದಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳ ಬಿಡಲಾಯಿತು. ಇಲಾಖೆಯ ವಲಯ ಜಂಟಿ ನಿರ್ದೇಶಕ ಜಿ.ಎಸ್.ಷಡಾಕ್ಷರಿ, ಉಪನಿರ್ದೇಶಕ ಶಿವಣ್ಣ, ಎಡಿ ಚಂದ್ರಶೇಖರ್, ಕಂಪ್ಲಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ಚಿನ್ನರಾಜು ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ 2021-22ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರರ ಅನುಕೂಲಕ್ಕಾಗಿ 4 ಲಕ್ಷ ಮೀನು ಮರಿಗಳ ಬಿತ್ತನೆ ಮಾಡಲಾಗಿದೆ ಎಂದು ಬಳ್ಳಾರಿ ಮೀನುಗಾರಿಕೆ ಇಲಾಖೆ ವಲಯ ಜಂಟಿ ನಿರ್ದೇಶಕ ಜಿ.ಎಸ್.ಷಡಾಕ್ಷರಿ ಹೇಳಿದರು.

ಇಲ್ಲಿನ ಕೋಟೆಯ ತುಂಗಭದ್ರಾ ನದಿಗೆ ಶನಿವಾರ ರಾವು, ಕಟ್ಲಾ, ಸಾಮಾನ್ಯಗೆಂಡೆ, ಕಾಮನ್‌ಕರ್ಪು, ಗ್ಲಾಸ್ ಕರ್ಪು ಬಲಿತ ಮೀನು ಮರಿಗಳನ್ನು ಬಿಟ್ಟು ಮಾತನಾಡಿದರು.

ಮೀನುಗಾರಿಕೆ ವಲಯ ಸುಧಾರಣೆಗೆ ಇಲಾಖೆ ಹಲವು ಸೌಲಭ್ಯಗಳನ್ನು ಒದಗಿಸಿದೆ. ಕಂಪ್ಲಿಯಲ್ಲಿ ಡಿಎಂಎಫ್ ಅನುದಾನದಡಿ ಮೀನು ಹರಾಜು ಕಟ್ಟೆ ನಿರ್ಮಿಸಿಕೊಡಲಾಗುವುದು. ನಿವೇಶನ ಹೊಂದಿದ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶಿವಣ್ಣ, ಸಹಾಯಕ ನಿರ್ದೇಶಕ ಚಂದ್ರಶೇಖರ್, ಕಂಪ್ಲಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ಚಿನ್ನರಾಜು, ಪದಾಧಿಕಾರಿಗಳಾದ ಕೆ.ಷಣ್ಮುಗಮ್, ಎಸ್.ಆರ್.ನಾಗೇಶ್, ಅದ್ದಪ್ಪ ವಿರೂಪಾಕ್ಷಿ, ರಾಜಾ, ಗಟ್ಟೆಪ್ಪ, ವೀರಭದ್ರ, ಪಂಪಾಪತಿ, ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net