ಕೇಂದ್ರದ ಆಯವ್ಯಯದ ಬಗ್ಗೆ ಪ್ರತಿಕ್ರಿಯೆ, ಬಡವರ-ಮಧ್ಯಮ ವರ್ಗದವರ ಬಜೆಟ್ ಎಂದ ಸಂಸದ ರಮೇಶ ಜಿಗಜಿಣಗಿ

ramesh jigajinagi
Published on

ವಿಜಯಪುರ: ಒಟ್ಟು 8 ಬಾರಿ ಆಯವ್ಯಯ ಮಂಡಿಸುವ ಮೂಲಕ ದಾಖಲೆ ಬರೆದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2025-26ನೇ ಸಾಲಿನ ಬಜೆಟ್ ಬಡವರ ಹಾಗೂ ಮಧ್ಯಮ ವರ್ಗದ ಪರವಾದ ಬಜೆಟ್ ಆಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ.

ಮಧ್ಯಮ ವರ್ಗದ ಬಹುನಿರೀಕ್ಷಿತ ಆದಾಯ ತೆರಿಗೆ ರಿಯಾಯಿತಿಗೆ ಸ್ಪಂದಿಸಿರುವ ನಿರ್ಮಲಾ ಸೀತಾರಾಮನ್ ವಾರ್ಷಿಕ 12 ಲಕ್ಷ ರೂ.ಗಳವರೆಗೆ ಆದಾಯಕ್ಕೆ ತೆರಿಗೆ ರಿಯಾಯಿತಿ ನೀಡಿದ್ದಾರೆ. ಮಾತ್ರವಲ್ಲಿ ದಲಿತ ಹಾಗೂ ಮಹಿಳೆಯರಿಗೆ 2 ಕೋಟಿ ರೂ.ಗಳವರೆಗೆ ಸ್ಯೂರಿಟಿ ಇಲ್ಲದೇ ಸಾಲ ವ್ಯವಸ್ಥೆ ನೀಡಿದ್ದು, ಪರಿಶಿಷ್ಟರು ಹಾಗೂ ಮಹಿಳೆಯರ ಕುರಿತ ಕಾಳಜಿಗೆ ಕೈಗನ್ನಡಿಯಾಗಿದೆ ಎಂದಿದ್ದಾರೆ.

ರಕ್ಷಣಾ ಇಲಾಖೆ, ಗ್ರಾಮೀಣಾಭಿವೃದ್ಧಿ, ಕೃಷಿ, ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ, ವಾಣಿಜ್ಯ ಮತ್ತು ಕೈಗಾರಿಕೆ ಹೀಗೆ ಅನೇಕ ಕ್ಷೇತ್ರಗಳಿಗೆ ಬಂಪರ್ ಅನುದಾನ ನೀಡಿದ್ದಾರೆ. ಜೀವ ರಕ್ಷಕ ಔಷಧಗಳ ಬೆಲೆ ಇಳಿಕೆಗೊಳಿಸಲು ಸಹಕಾರಿಯಾಗಿದೆ. ಭವಿಷ್ಯದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯ ದೃಷ್ಠಿಕೋನದಿಂದ ಇದೊಂದು ಮಹತ್ವದ ಬಜೆಟ್ ಆಗಿದೆ ಎಂದು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net