

ಪ್ರಮುಖ ಮುಖ್ಯಾಂಶಗಳು
ಮೊಳಕಾಲ್ಮೂರು:ನಿತ್ಯಅಡುಗೆಗೆ ಬೇಕಾಗುವ ಕೊತ್ತಂಬರಿಸೊಪ್ಪಿನ ಬೆಲೆ ತೀವ್ರವಾಗಿಕುಸಿದಿರುವುದರಿಂದ ಬೆಳೆಗಾರರುತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೇವಲಒಂದು ರೂಪಾಯಿಗೆ ಒಂದು ಕಟ್ಟನ್ನುಮಾರಲಾಗದ ಪರಿಸ್ಥಿತಿ ಬಂದೊದಗಿದ್ದು,ಬೆಳೆಗಳನ್ನುತಿಪ್ಪೆಗೆ ಅಥವಾ ದನಕರುಗಳ ಮೇವಿಗೆಹಾಕುವ ದುಸ್ಥಿತಿ ಎದುರಾಗಿದೆ.coriander
ಕಳೆದತಿಂಗಳು ಒಂದು ಕಟ್ಟು ಕೊತ್ತಂಬರಿಸೊಪ್ಪಿಗೆ ₹10ರಿಂದ₹15 ದರದೊರೆತಿತ್ತು.ಇದರಿಂದಉತ್ತೇಜಿತರಾದ ಮೊಳಕಾಲ್ಮೂರುತಾಲೂಕಿನ ತಿಪ್ಪೀರಯ್ಯನಹಟ್ಟಿ,ಎದ್ದಲಬೊಮ್ಮಯ್ಯನಹಟ್ಟಿ,ಪುಡುಗೋಸಿತಿಮ್ಮಯ್ಯನಹಟ್ಟಿ,ಮರ್ಲಹಳ್ಳಿಹಾಗೂ ಆಂಧ್ರದ ಪೈತೋಟ ಸೇರಿ ಅನೇಕಗ್ರಾಮಗಳ ರೈತರು ಈ ಬಾರಿ ಹೆಚ್ಚಿನಪ್ರಮಾಣದಲ್ಲಿ (1/4ಎಕರೆಯಿಂದ 1ಎಕರೆವರೆಗೆ)ಕೊತ್ತಂಬರಿಯನ್ನುಬೆಳೆದಿದ್ದಾರೆ.ನೀರು,ಗೊಬ್ಬರನೀಡಿ ಚೆನ್ನಾಗಿ ಆರೈಕೆ ಮಾಡಿದಪರಿಣಾಮ,ಈ ಬಾರಿಇಳುವರಿಯು ಅತಿ ಹೆಚ್ಚಾಗಿದೆ.
ಬಂಡವಾಳವೂಸಿಗದೆ ಕಷ್ಟ:ಮೊಳಕಾಲ್ಮೂರುಮತ್ತು ಆಂಧ್ರದ ರಾಯದುರ್ಗದಮಾರುಕಟ್ಟೆಗಳಿಗೆ ಪ್ರತಿದಿನಮೂಟೆಗಟ್ಟಲೆ ಕೊತ್ತಂಬರಿ ಸೊಪ್ಪುಆವಕವಾಗುತ್ತಿದೆ.ಇದನ್ನೇನೆಪ ಮಾಡಿಕೊಂಡ ವ್ಯಾಪಾರಸ್ಥರುದರವನ್ನು ತೀವ್ರವಾಗಿ ಇಳಿಸಿದ್ದಾರೆ.ಪ್ರಸ್ತುತ,ಒಂದುಕಟ್ಟಿಗೆ ಕೇವಲ ₹1ದರನೀಡಲಾಗುತ್ತಿದೆ.ಕೆಲವೊಮ್ಮೆಇದು 50ಪೈಸೆಗೂಕುಸಿಯುವ ಅಪಾಯವಿದೆ.
ನಷ್ಟದಲೆಕ್ಕಾಚಾರ:ಒಂದುಕಟ್ಟು ಕೇವಲ ಒಂದು ರೂಪಾಯಿಗೆಮಾರಾಟವಾಗುತ್ತಿದ್ದರೂ,ಇದನ್ನೇಕೊಂಡುಕೊಳ್ಳುವ ವ್ಯಾಪಾರಸ್ಥರುಗ್ರಾಹಕರಿಗೆ ಒಂದು ಕಟ್ಟನ್ನು₹5 ಕ್ಕೆಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.ಆದರೆ,ಬೆಳೆದರೈತರಿಗೆ ಮಾತ್ರ ತೀವ್ರ ನಷ್ಟವಾಗುತ್ತಿದೆ.
ಖರ್ಚು ವೆಚ್ಚಗಳು: ಅರ್ಧ ಎಕರೆ ಕೊತ್ತಂಬರಿ ಬೆಳೆಯಲು ಬೀಜ ಮತ್ತು ಗೊಬ್ಬರಕ್ಕೆ ಸುಮಾರು ₹15,000 ರಿಂದ ₹20,000 ವರೆಗೆ ಖರ್ಚು ಬರುತ್ತದೆ.
ಸೀಡ್ಸ್ ಪ್ಯಾಕೇಟ್ (2 ಕೆಜಿ) ಬೆಲೆ ₹650.
ನಾಟಿ ಬೀಜದ ಬೆಲೆ ಕೆಜಿಗೆ ₹135 (ಅರ್ಧ ಎಕರೆಗೆ 18-20 ಕೆಜಿ ಬೀಜ ಬೇಕು).
ಬಿತ್ತನೆ ಮಾಡಿದ 30 ದಿನಗಳಲ್ಲಿ ಕಟಾವಿಗೆ ಬರುವ ಈ ಬೆಳೆಗೆ ರೈತನ ಕೂಲಿ ಲೆಕ್ಕ ಹಾಕಿದರೆ, ಒಟ್ಟಾರೆ ಖರ್ಚು ₹30,000 ದಾಟುತ್ತದೆ.
ಪ್ರಸ್ತುತದೊರೆಯುತ್ತಿರುವ ಅತ್ಯಲ್ಪಬೆಲೆಯಿಂದಾಗಿ,ರೈತರಿಗೆತಾವು ಹಾಕಿದ ಬಂಡವಾಳವೂ ಕೈ ಸೇರುವುದುಕಷ್ಟವಾಗಿದೆ."ಯಾಕಪ್ಪಾಬೇಕು ಈ ಸಹವಾಸ"ಎಂದುರೈತರು ಬೇಸರ ವ್ಯಕ್ತಪಡಿಸಿದ್ದಾರೆ.