ಮೋದಿ ಕೈಯಲ್ಲಿ ದೇಶ ಸುರಕ್ಷಿತ

ಬೆಲೆ ಏರಿಕೆಯ ಲೂಟಿ ರಾಜ್ಯ ಸರ್ಕಾರವಿದು
ಚಿತ್ರದುರ್ಗದಲ್ಲಿ ಬಿಜೆಪಿ ಆಯೋಜಿಸಿದ್ದ ಸೇವಾಜ್ಯೋತಿ ಯಾತ್ರೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಚಾಲನೆ ನೀಡಿದರು. ಶಾಸಕ ಡಾ.ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್. ನವೀನ್, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಇದ್ದರು.
ಚಿತ್ರದುರ್ಗದಲ್ಲಿ ಬಿಜೆಪಿ ಆಯೋಜಿಸಿದ್ದ ಸೇವಾಜ್ಯೋತಿ ಯಾತ್ರೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಚಾಲನೆ ನೀಡಿದರು. ಶಾಸಕ ಡಾ.ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್. ನವೀನ್, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಇದ್ದರು.
Published on: 

ಚಿತ್ರದುರ್ಗ

ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲದೇ ವಿಶ್ವದ ಯಾವುದೇ ಪ್ರಮುಖ ವಿಚಾರಗಳು ನಿರ್ಧಾರವಾಗುತ್ತಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ಮೋದಿ ಅವರ ೨೫ ವರ್ಷದ ಜನಸೇವೆ ಆಡಳಿತ ಪಥದ ಅಂಗವಾಗಿ ಬಿಜೆಪಿ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸೇವಾ ಜ್ಯೋತಿಯಾತ್ರೆ ಹಾಗೂ ವಿಕಸಿತ ಭಾರತ ಸಂಕಲ್ಪ ವರ್ಚ್ಯುವಲ್ ಸಭೆಯ ಬಳಿಕ, ನಗರದಲ್ಲಿ ಆಯೋಜಿಸಿದ್ದ ಸೇವಾ ಜ್ಯೋತಿಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಗುಜರಾತ್ ಮುಖ್ಯಮಂತ್ರಿಯಾಗಿ ಕಳಂಕರಹಿತ ಆಡಳಿತ ನೀಡಿದ್ದಾರೆ. ಮೂರನೇ ಬಾರಿಗೆ ಪ್ರಧಾನಿ ಆಗಿರುವ ಮೋದಿ ಅವರಿಂದಾಗಿ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣವಾಗಿದೆ. ಆರ್ಥಿಕ ಸುಧಾರಣೆಯೊಂದಿಗೆ ದೇಶ ಸುರಕ್ಷಿತವಾಗಿದೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್ ಅವರು ವಿಕಸಿತ ಭಾರತ ಸಂಕಲ್ಪ-೨೦೪೭ರ ಪ್ರತಿಜ್ಞಾವಿಽ ಬೋಽಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಶಾಸಕ ಡಾ.ಎಂ. ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿ.ಎಚ್. ಮೋಹನ್, ವೆಂಕಟೇಶ್ ಯಾದವ್, ಎ. ಮುರಳಿ, ರಾಜಣ್ಣ, ಅನಿಲ್‌ಕುಮಾರ್, ಡಾ. ಮಂಜುನಾಥ್, ಜೆಡಿಎಸ್‌ನ ಹನುಮಂತರಾಯ ಮತ್ತಿತರ ಪ್ರಮುಖರು ಇದ್ದರು.

ಮಹರ್ಷಿ ವಾಲ್ಮೀಕಿ ಭವನದಿಂದ ಆರಂಭವಾದ ಸೇವಾ ಜ್ಯೋತಿ ಯಾತ್ರೆ ಮದಕರಿ ನಾಯಕ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತದ ಮೂಲಕ ಮರಳಿ ಮಹರ್ಷಿ ವಾಲ್ಮೀಕಿ ಭವನ ಸೇರಿತು. ಬಳಿಕ ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಪ್ರಮುಖರ ಸಭೆ ನಡೆಯಿತು.

ಪ್ರಬಲ ರಾಷ್ಟçವಾಗಿ ಭಾರತ

ಮೋದಿ ಆಡಳಿತದಿಂದ ಜಾಗತಿಕ ಮಟ್ಟದಲ್ಲಿ ಭಾರತ ಪ್ರಬಲ ರಾಷ್ಟçವಾಗಿ ಗುರುತಿಸಿಕೊಂಡಿದೆ. ಭಾರತದ ಸಮ್ಮತಿ ಇಲ್ಲದೆ ಪ್ರಪಂಚ ಯಾವುದೇ ಸಮಸ್ಯೆಗಳು ಇತ್ಯರ್ಥ ಅಸಾಧ್ಯ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಆರ್. ಅಶೋಕ್ ಹೇಳಿದರು.

ಎಲ್ಲ ದೇಶಗಳು ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತವನ್ನು ನೋಡುವಂತಾಗಿದೆ. ಇಂಥ ಭಾರತಕ್ಕೆ ಹೊರಗಿನವರಿಗಿಂತ ಒಳಗಿನ ಶತ್ರುಗಳು ಧಕ್ಕೆ ತರುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಕ್ಸಲಿಸಂ ಮಟ್ಟ ಹಾಕಿದ್ದಾರೆ. ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ ಎಂದರು.

ಸAವಿಧಾನಾತ್ಮಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಕೆಂಗಣ್ಣು

ಸAವಿಧಾನಾತ್ಮಕ ಸಂಸ್ಥೆಗಳ ಮೇಲೆ ಅಪನಂಬಿಕೆ ಬರುವಂತೆ ಕಾಂಗ್ರೆಸ್ ವರ್ತಿಸುತ್ತಾ ದೇಶದ ಭದ್ರತೆಗೆ ಆತಂಕ ಉಂಟು ಮಾಡುತ್ತಿದೆ. ಕೇಂದ್ರದ ಸಾಧನೆ, ಮೋದಿ ನಾಯಕತ್ವ ಅರಗಿಸಿಕೊಳ್ಳಲಾಗದೆ ರಾಷ್ಟಿçÃಯ ಚುನಾವಣಾ ಆಯೋಗ ಮತ್ತಿತರ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಸುಪ್ರೀಂಕೋರ್ಟ್ ಅನ್ನು ಪ್ರಶ್ನಿಸುವಂಥ ನಡೆ ಪ್ರದರ್ಶಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಹರಿಹಾಯ್ದರು.

ಸಿದ್ದರಾಮಯ್ಯ, ಈಗಿನ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ನಿರಂತರ ಬೆಲೆಗಳನ್ನು ಏರಿಸಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಹಾಲಿಗೆ ೮ ರೂ.ಸಬ್ಸಿಡಿ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದ ಕಾಂಗ್ರೆಸ್ ಈಗ ಹಾಲಿನ, ಬಸ್ಸಿನ ದರ ಏರಿಸಲು ಮುಂದಾಗಿದೆ. ಹೈನುಗಾರರಿಗೆ ಸಬ್ಸಿಡಿ ಹಣ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ ಎಂದು ಟೀಕಿಸಿದರು.

ತೆರಿಗೆ ಹಣ ಲೂಟಿ

ತೆರಿಗೆ, ಬೆಲೆ ಏರಿಕೆ ಮೂಲಕ ಸಾವಿರಾರು ಕೋಟಿ ರೂ. ಸಂಗ್ರಹಿಸಿರುವ ಸರ್ಕಾರ ಅದನ್ನು ಜನಕಲ್ಯಾಣಕ್ಕೆ ಬಳಸದೆ ಲೂಟಿ ಮಾಡುತ್ತಿದೆ. ತೆರಿಗೆ ರೂಪದಲ್ಲಿ ಪ್ರತಿ ಕುಟುಂಬದಿAದ ೬ ಸಾವಿರ ರೂ. ಸಂಗ್ರಹಿಸುತ್ತಿರುವ ಕಾಂಗ್ರೆಸ್, ಮಹಿಳೆಯರಿಗೆ ೨೦೦೦ ರೂ. ಕೊಟ್ಟು ಉಳಿದ ೪ ಸಾವಿರ ರೂ.ಗಳನ್ನು ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್‌ನವರು ಹಂಚಿಕೊಳ್ಳುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು.

ನಿಯಮಾನುಸಾರ ಎಸ್‌ಐಆರ್ ನಡೆಯುತ್ತಿದ್ದರೂ ಕಾಂಗ್ರೆಸ್ ಸುಳ್ಳು ವದಂತಿ ಹಬ್ಬಿಸುತ್ತಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಕಾಣಲಿದೆ. ೨೦೨೮ರಲ್ಲಿ ಕರ್ನಾಟಕ, ತೆಲಂಗಾಣದಲ್ಲಿ ಹಾಗೂ ೨೦೨೯ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಅಽಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.

ಮೋದಿ ಭಾಷಣ ಬೂತ್‌ಗಳಲ್ಲಿ ಮರು ಪ್ರಸಾರ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮೋದಿ ಅವರು ಮಾಡಿದ ಭಾಷಣವನ್ನು ಪ್ರತಿ ಬೂತ್ ಮಟ್ಟದಲ್ಲಿ ಮರು ಪ್ರಸಾರ ಮಾಡುವ ಮೂಲಕ ಅವರ ಸಂದೇಶವನ್ನು ಎಲ್ಲ ಕಾರ್ಯಕರ್ತರಿಗೂ ತಲುಪಿಸಬೇಕಿದೆ.
ಎಂಎಲ್‌ಸಿ ಕೆ.ಎಸ್. ನವೀನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net