

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ನಗರದ ಮಣಪ್ಪುರಂ ರಿತಿ ಜ್ಯುವೆರ‍್ಸ್ನಲ್ಲಿ ಮಂಗಳವಾರ ಬಾಲಗೋಪಾಲರದ್ದೇ ಕಲರವ. ಮುದ್ದಾದ ಪುಟಾಣಿಗಳ ಹೂ ನಗೆ, ಹಾವಭಾವಗಳು, ತುಂಟತನ ನಂದಕಿಶೋರ, ನವನೀತ ಚೋರ ಬಾಲಕೃಷ್ಣನ ಲೀಲೆಗಳನ್ನೇ ನೆನಪಿಸುವಂತಿದ್ದವು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕನ್ನಡದ ನಂ.೧ ದಿನಪತ್ರಿಕೆ ವಿಜಯವಾಣಿ ಸಾರಥ್ಯದಲ್ಲಿ ಮಣಪ್ಪುರಂ ರಿತಿ ಜ್ಯುವೆರ‍್ಸ್, ಎಸ್‌ಇಎ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಬಿ.ಎಸ್.ಚನ್ನಬಸಪ್ಪ ಎಕ್ಸ್ಕ್ಲೂಸಿವ್ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ವೇಷ -ೆÇÃಟೋ ಸ್ಪರ್ಧಾ ವಿಜೇತ ಚಿಣ್ಣರಿಗೆ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಮಕ್ಕಳು ಹಾಗೂ ಪಾಲಕರು ಆಗಮಿಸಿದ್ದರು. ಮಕ್ಕಳೊಂದಿಗೆ ಬಹುಮಾನ ಪಡೆಯುವಾಗ ಅವರ ಖುಷಿಗೆ ಪಾರವೇ ಇರಲಿಲ್ಲ.
ಇಂತಹ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಿಗೆ ಸಂಸ್ಕೃತಿ ಪರಿಚಯಿಸುವ `ವಿಜಯವಾಣಿ' ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಯಿತು. ಪತ್ರಿಕೆಯ ಸಮಾಜಮುಖಿ ಕಾರ್ಯಗಳು, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳನ್ನು ಓದುಗರಿಗೆ ಉಣಬಡಿಸುತ್ತಿರುವ ಕುರಿತು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇತರೆ ಪತ್ರಿಕೆಗಳಿಗಿಂತ ಹೇಗೆ ವಿಭಿನ್ನ ಎಂಬುದನ್ನು ತಮ್ಮದೇ ಆದ ಮಾತುಗಳಲ್ಲಿ ಬಣ್ಣಿಸಿದರು.
ಎಸ್‌ಆರ್‌ಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, ವಿಜಯ ಸಂಕೇಶ್ವರ ಅವರು ಸ್ಥಾಪಿಸಿದ ವಿಜಯವಾಣಿ ಪತ್ರಿಕೆ ವಿನೂತನ ಕಾರ್ಯಕ್ರಮಗಳೊಂದಿಗೆ ಓದುಗರ ಮೆಚ್ಚುಗೆ ಗಳಿಸಿ ನಂ. ೧ ಸ್ಥಾನದಲ್ಲಿದೆ ಎಂದು ಬಣ್ಣಿಸಿದರು.
ಗ್ರಾಹಕರಿಗೆ, ಓದುಗರಿಗೆ ಸಹಕಾರಿಯಾಗುವ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವುದು ಉತ್ತಮ ಬೆಳವಣಿಗೆ. ವಿಆರ್‌ಎಲ್ ಸಂಸ್ಥೆ ದೇಶದಾದ್ಯಂತ ೬ ಸಾವಿರ ಲಾರಿಗಳ ಮೂಲಕ ಟ್ರಾನ್ಸ್ಪೋರ್ಟ್ನಲ್ಲಿ ಬಹುದೊಡ್ಡ ಹೆಸರು ಮಾಡಿದೆ ಎಂದು ಶ್ಲಾಘಿಸಿದರು.
ನಮ್ಮ ಸಂಸ್ಥೆಯಲ್ಲಿ ಜನ್ಮಾಷ್ಟಮಿ ಅಂಗವಾಗಿ ೧,೧೮೬ ವಿದ್ಯಾರ್ಥಿಗಳಿಂದ ನಡೆದ ಸಾಮೂಹಿಕ ಭಗವದ್ಗೀತೆ ಶ್ಲೋಕ ಇಂಡಿಯಾ ಬುಕ್ ಆ-ï ರೆಕಾರ್ಡ್ಗೆ ಸೇರಿದೆ. ಅಲ್ಲದೆ, ಏಷ್ಯಾ ಬುಕ್ ಆ-ï ರೆಕಾರ್ಡ್ ಮನ್ನಣೆ ಪಡೆದಿದೆ. ಉಡುಪಿ ಮಠದಲ್ಲೂ ಇಂತಹ ಕಾರ್ಯಕ್ರಮ ನಡೆದಿಲ್ಲ. ಬಸವಕುಮಾರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಎನ್.ಡಿ. ಶಾಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ೭ ಸಾವಿರ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂರು ಹಂತಗಳಲ್ಲಿ ಪರಿಶೀಲಿಸಿ, ಎಐ ಚಿತ್ರಗಳನ್ನು ಹೊರಗಿಟ್ಟು ನೈಜ -ÉÇÃಟೋಗಳಿಗೆ ಆದ್ಯತೆ ನೀಡಿ, ತೀರ್ಪುಗಾರರು ಅಂತಿಮವಾಗಿ ವಿಜೇತರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ವಿಜಯವಾಣಿ ಆರಂಭದಿAದಲೂ ಹೊಸ ಆವಿಷ್ಕಾರದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಕಾರಣ ರಾಜ್ಯದ ಜನರು ನಂ. ೧ ಸ್ಥಾನದಲ್ಲಿ ಇಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ಎಬಿಸಿ ವರದಿಯೂ ಇದನ್ನು ಬಹಿರಂಗಪಡಿಸಿದೆ ಎಂದರು.
ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖ್ಯ ಉಪಸಂಪಾದಕ ಹರ್ಷ ಪುರೋಹಿತ, ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ, ಅಡ್ಮಿನ್ ಮ್ಯಾನೇಜರ್ ನಾಗರಾಜ್ ಪಿ.ಒ. ವರದಿಗಾರ ಕೆ.ಎಸ್. ಪ್ರಣವಕುಮಾರ್, ಚಿತ್ರದುರ್ಗ ಪ್ರಸಾರಾಂಗ ವಿಭಾಗದ ಶುಭಾಕರ್, ಛಾಯಾಚಿತ್ರಗ್ರಾಹಕ ವರದರಾಜ್ ಯಾದವ್, ಕೊಟ್ರೇಶ್ ಇತರರಿದ್ದರು.
ಪಾಲಕರ ಶ್ರಮ ಮೆಚ್ಚುವಂತದ್ದು
ಮುದ್ದು ಕೃಷ್ಣನ ತುಂಟಾಟಗಳನ್ನು ಮಕ್ಕಳ ವೇಷಭೂಷಣದೊಂದಿಗೆ ನೋಡುವುದೇ ಸಂತಸದ ಸಂಗತಿ. ವಿಜೇತರಾದ ಮಕ್ಕಳು, ಅವರನ್ನು ಆ ರೀತಿ ಸಿದ್ಧಗೊಳಿಸಿದ ಪಾಲಕರ ಶ್ರಮ ಮೆಚ್ಚುವಂತದ್ದು ಎಂದು ಸಿöÃರೋಗ ತಜ್ಞ ಡಾ. ರವಿಕುಮಾರ್ ಹೇಳಿದರು. ಧರ್ಮ ಸ್ಥಾಪನೆಗಾಗಿ ಶ್ರೀಕೃಷ್ಣ ಪರಮಾತ್ಮ ತೋರಿದ ಹಲವು ಲೀಲೆಗಳು ಮಾದರಿಯಾಗಿವೆ. ಸಂಸ್ಕೃತಿ-ಸAಸ್ಕಾರ ಪರಿಚಯಿಸುವ ಕೆಲಸ ವಿಜಯವಾಣಿ ಪತ್ರಿಕೆಯೂ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಗುಣಮಟ್ಟಕ್ಕೆ ಆದ್ಯತೆ
ಬಾಲಗೋಪಾಲ ತುಂಬ ಉತ್ತಮ ಕಾರ್ಯಕ್ರಮ. ಪತ್ರಿಕೆ ಸಮಾಜಮುಖಿಯಾಗಿದ್ದು, ನಮ್ಮ ಸಂಸ್ಥೆಯೊAದಿಗೂ ಉತ್ತಮ ಸಹಕಾರ ಹೊಂದಿದೆ ಎಂದು ಜ್ಯುವೆರ‍್ಸ್ನ ಸೇಲ್ಸ್ ಅಂಡ್ ಮಾರ್ಕೆಟಿಂಗ್‌ನ ರಾಜ್ಯ ಮುಖ್ಯಸ್ಥ ಎಂ.ಪೆರುಮಾಳ್ ಸಂತಸ ವ್ಯಕ್ತಪಡಿಸಿದರು. ಕೇರಳದ ಕುಗ್ರಾಮದಲ್ಲಿ ಆರಂಭವಾದ ಮಣಪ್ಪುರಂ ರಿತಿ ಜ್ಯುವೆರ‍್ಸ್ ೫ ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ೩೦ ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಕರ್ನಾಟಕದಲ್ಲಿ ೯ ಸೇರಿ ದೇಶದಲ್ಲಿ ಒಟ್ಟು ೧೬ ಪ್ಯಾನ್ ಇಂಡಿಯಾ ಶಾಖೆ ಇವೆ ಎಂದು ತಿಳಿಸಿದರು. ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಿದ್ದು, ಆಭರಣಗಳು ಸ್ವತಃ ನಮ್ಮ ಕಂಪನಿಯಲ್ಲೇ ತಯಾರಾಗುವ ಕಾರಣ ಮೇಕಿಂಗ್ ಚಾರ್ಜ್ ಕೂಡ ಕಡಿಮೆ ಎಂದರು.
ದೇವರನ್ನು ಕಾಣುವ ಭಾಗ್ಯ
ವಿಜಯವಾಣಿ ಪತ್ರಿಕೆ ಕೃಷ್ಣ ಜನ್ಮಾಷ್ಟಮಿಗೆ ಬಾಲಗೋಪಾಲ ಸ್ಪರ್ಧೆ ಆಯೋಜಿಸುವ ಮೂಲಕ ದೇವರನ್ನು ಮಕ್ಕಳ ರೂಪದಲ್ಲಿ ನೋಡುವ ಭಾಗ್ಯವನ್ನು ಕರುಣಿಸಿದೆ ಎಂದು ಮಣಪ್ಪುರಂ ರಿತಿ ಜ್ಯುವೆರ‍್ಸ್ನ ಚಿತ್ರದುರ್ಗ ಶಾಖೆ ವ್ಯವಸ್ಥಾಪಕ ರೇವಣಯ್ಯ ಹೇಳಿದರು.
ಮಹಿಳಾ ದಿನಾಚರಣೆ ಕಾರ್ಯಕ್ರಮದ ಮೂಲಕ ಪತ್ರಿಕೆ ನಮಗೆ ವೇದಿಕೆ ಕಲ್ಪಿಸಿದ್ದರಿಂದ ಇಡೀ ಜಿಲ್ಲೆಯಲ್ಲೇ ಹೆಸರಾಗಲು ಕಾರಣವಾಯಿತು. ಪತ್ರಿಕೆ ಓದುಗರ ಮೆಚ್ಚುಗೆಗೂ ಪಾತ್ರವಾಗಿದೆ. ಉತ್ತಮ ಸುದ್ದಿಗಳನ್ನು ಪ್ರಕಟಿಸಿ, ಅರಿವು ಮೂಡಿಸುವುದರೊಂದಿಗೆ ಸಮಾಜಮುಖಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಅದೇ ಹಾದಿಯಲ್ಲಿ ನಾವೂ ಸಹ ಸಿಎಸ್‌ಆರ್ ಅನುದಾನ ಬಳಸಿ ಅನೇಕ ಜನಪರ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
೧೦೦ ಬಡ ವಿದ್ಯಾರ್ಥಿಗಳಿಗೆ ಬೈಸಿಕಲ್
ಪ್ರಚಾರದ ಹೊರತಾಗಿ ಸಿಎಸ್‌ಆರ್ ಅನುದಾನ ಸದ್ಬಳಕೆಯಾಗುವ ನಿಟ್ಟಿನಲ್ಲಿ ಬಡವರಿಗೆ, ನಿರ್ಗತಿಕರಿಗೆ ನೆರವಾಗುವಂತಹ ಕಾರ್ಯಕ್ರಮ ರೂಪಿಸುವಂತೆ ಬಿ.ಎ. ಲಿಂಗಾರೆಡ್ಡಿ ಸಲಹೆ ನೀಡಿದರು.
ಅದಕ್ಕೆ ಸ್ಪಂದಿಸಿದ ಎಂ.ಪೆರುಮಾಳ್, ೧೦೦ ಬಡ ವಿದ್ಯಾರ್ಥಿಗಳಿಗೆ ಬೈಸಿಕಲ್, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗುವುದು ಎಂದು ಘೋಷಿಸಿದರು.
===
ಬಹುಮಾನ ವಿಜೇತರು
ಚಿತ್ರದುರ್ಗದ ಎ. ಅಧ್ಯಾನ್ ಪ್ರಥಮ, ಚಳ್ಳಕೆರೆಯ ರಿಷಭ್ ಭಾರದ್ವಾಜ್ ದ್ವಿತೀಯ, ಎನ್. ದೀಕ್ಷಿತ್, ನಕ್ಷಿತ್ ತೃತೀಯ ಬಹುಮಾನ ಮುಡಿಗೇರಿಸಿಕೊಂಡರು. ಇನ್ನುಳಿದ ೧೫ ಪುಟಾಣಿಗಳಿಗೆ ಸಮಾಧಾನಕರ, ಮೆಚ್ಚುಗೆಯ ಬಹುಮಾನ ವಿತರಿಸಲಾಯಿತು.
===
(ಸಿಟಿಡಿ ಶ್ರೀಕೃಷ್ಣ ೧)
ಚಿತ್ರದುರ್ಗದ ಮಣಪ್ಪುರಂ ರಿತಿ ಜ್ಯುವೆರ‍್ಸ್ನಲ್ಲಿ ವಿಜಯವಾಣಿ ಮಂಗಳವಾರ ಶ್ರೀ ಕೃಷ್ಣ ವೇಷ -ÉÇÃಟೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಬಿ.ಎ. ಲಿಂಗಾರೆಡ್ಡಿ ಉದ್ಘಾಟಿಸಿದರು. ಎಂ. ಪೆರುಮಾಳ್, ಡಾ. ರವಿಕುಮಾರ್, ಎನ್.ಡಿ. ಶಾಂತಕುಮಾರ್, ರೇವಣ್ಣಯ್ಯ ಇತರರಿದ್ದರು.
ಕೋಟ್
ನಾವು ಸ್ಪರ್ಧೆಯ ಕೊನೆಯ ದಿನ ಮಗುವಿನ ಫೋಟೋವನ್ನು ವಿಜಯವಾಣಿಗೆ ಕಳುಹಿಸಿದ್ದೆವು. ಕರೆ ಮಾಡಿ ತಿಳಿಸಿದಾಗ ಯಾವ ಬಹುಮಾನ ಬಂದಿರಬಹುದೆAಬ ಕುತೂಹಲವಿತ್ತು. ಇಂದು ಬೆಳಗ್ಗೆ ಪತ್ರಿಕೆ ಓದಿದಾಗ ನನ್ನ ಮಗನಿಗೆ ಮೊದಲ ಬಹುಮಾನ ಬಂದಿರುವುದು ತಿಳಿದು ತುಂಬ ಖುಷಿಯಾಯಿತು. ಪತ್ರಿಕೆ ಮಕ್ಕಳಿಗಾಗಿ ಸ್ಪರ್ಧೆ ಆಯೋಜಿಸಿದ್ದು ಶ್ಲಾಘನೀಯ.
| ಅಭಿಲಾಷ್, ಚಿತ್ರದುರ್ಗ
ನನ್ನ ಮಗನಿಗೆ ದ್ವಿತೀಯ ಬಹುಮಾನ ಬಂದಿರುವುದು ಇಂದು ಬೆಳಗ್ಗೆ ಗೊತ್ತಾಯಿತು. ಜನ ಸಾಮಾನ್ಯರನ್ನು ಒಳಗೊಳ್ಳುವ ಇಂಥ ಸ್ಪರ್ಧೆ ಆಯೋಜಿಸುವ ಮೂಲಕ ವಿಜಯವಾಣಿ ಪತ್ರಿಕೆ ಉತ್ತಮ ಕೆಲಸ ಮಾಡಿದೆ. ಪತ್ರಿಕೆಯ ಜನಪರ ಕಾಳಜಿಗೆ ಧನ್ಯವಾದಗಳು.
| ಸಂಧ್ಯಾ, ಚಳ್ಳಕೆರೆ.