ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತರಳಬಾಳು ಅಗ್ರಗಣ್ಯ taralabalu matt

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣನೆ
ಸಿರಿಗೆರೆಯ ಶ್ರೀಮಠದ ಆವರಣದಲ್ಲಿ ಗುರುವಾರ ನಡೆದ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 35ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.
ಸಿರಿಗೆರೆಯ ಶ್ರೀಮಠದ ಆವರಣದಲ್ಲಿ ಗುರುವಾರ ನಡೆದ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 35ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.
Published on: 

ಚಿತ್ರದುರ್ಗ: ನ್ಯಾಯ, ಧರ್ಮ, ನೀರು ಈ ಮೂರು ಮುಖ್ಯವೆಂಬ ತತ್ತ್ವ-ಸಿದ್ಧಾಂತಕ್ಕೆ ಬದ್ಧವಾಗಿರುವ ತರಳಬಾಳು ಬೃಹನ್ಮಠ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ, ಶೈಕ್ಷಣಿಕ ಕ್ರಾಂತಿಯಲ್ಲೂ ಮುಂಚೂಣಿಯಲ್ಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದರು. taralabalu matt
ಸಿರಿಗೆರೆಯ ಶ್ರೀಮಠದ ಆವರಣದಲ್ಲಿ ಗುರುವಾರ ನಡೆದ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 35ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆರೆಗಳಿಗೆ ನೀರುಣಿಸುವ ಹಾಗೂ ರೈತರು ಬದುಕು ಕಟ್ಟಿಕೊಳ್ಳಲು ಹೋರಾಡುವ ರಾಜ್ಯದ ಏಕೈಕ ಮಠವೆಂದರೆ ಅದು ಸಿರಿಗೆರೆ ಬೃಹನ್ಮಠ. ನೀರಿನ ವಿಚಾರವಾಗಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೆಚ್ಚು ಕಾಳಜಿ ಹೊಂದಿದ್ದಾರೆ ಎಂದರು.
ಸರ್ಕಾರದಿಂದ ಮಾಡಲಾಗದ ಕಾರ್ಯವನ್ನು ನಾಡಿನ ಹಲವು ಮಠಗಳು ಮಾಡುತ್ತಿವೆ. ಅದರಲ್ಲಿ ತರಳಬಾಳು ಮಠ ಅಗ್ರಗಣ್ಯವಾಗಿ ನಿಲ್ಲುತ್ತದೆ. ಸದ್ಧರ್ಮ ನ್ಯಾಯಪೀಠದ ಮೂಲಕ ಜನರಿಗೆ ನ್ಯಾಯ ಒದಗಿಸುತ್ತಿದೆ. ಧರ್ಮ ಮಾರ್ಗದಲ್ಲಿ ಭಕ್ತರನ್ನು ಕೊಂಡೊಯ್ಯುತ್ತಿದೆ ಎಂದರು.
ರಾಜ್ಯದಲ್ಲಿ 45 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಶ್ರೀಮಠದ ಸಂಸ್ಥೆಗಳಲ್ಲೇ 50 ಸಾವಿರ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಬದುಕಿನ ಸಾಮಾನ್ಯ ವಸ್ತುಗಳಿಗೂ ಆಧ್ಯಾತ್ಮಿಕ ಅರ್ಥ ನೀಡುವ ಸಂಸ್ಕೃತಿ ನಮ್ಮದು. ಧರ್ಮವನ್ನು ಮನುಷ್ಯ ಬಿಟ್ಟರೂ, ಅದು ನಮ್ಮನ್ನು ಎಂದಿಗೂ ಬಿಡುವುದಿಲ್ಲ. ಜನನದಿಂದ ಮರಣದವರೆಗೂ ಧರ್ಮ ಮತ್ತು ಸಂಸ್ಕೃತಿಯ ಆಚರಣೆಗಳು ಬೆಸೆದುಕೊಂಡಿವೆ ಎಂದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಟಿ. ರಘುಮೂರ್ತಿ, ಕೆ.ಎಸ್. ಬಸವಂತಪ್ಪ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಶಾಸಕರಾದ ಡಾ.ಎಂ. ಚಂದ್ರಪ್ಪ, ಯು.ಟಿ. ಬಣಕಾರ್, ಶಿವಗಂಗಾ ಬಸವರಾಜ್, ಡಿ.ಜಿ. ಶಾಂತನಗೌಡ, ಎಚ್.ಡಿ. ತಮ್ಮಯ್ಯ, ಬಿ. ದೇವೇಂದ್ರಪ್ಪ, ಚಿಕ್ಕಮಗಳೂರಿನ ಎಂಎಲ್‌ಸಿ ಸಿ.ಟಿ. ರವಿ, ಸಿರಿಗೆರೆ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ನಿಗಮ, ಮಂಡಳಿ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್, ಪಿ. ರಘು ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net