ತನು, ಮನ ಶುದ್ಧಿಗೆ ಶಿವಯೋಗ ಸಹಕಾರಿ

ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಎಸ್. ಜಾನಕಿ, ಎಚ್. ಹನುಮಂತಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಡಾ. ಬಸವಕುಮಾರ ಸ್ವಾಮೀಜಿ, ಡಾ.ಕೆ.ಬಿ. ಗುಡಸಿ, ಗಾಯತ್ರಿ ಶಿವರಾಂ, ಎಸ್. ಷಣ್ಮುಖಪ್ಪ, ಗುರುಮೂರ್ತಿ, ನಾಗರಾಜ ಸಂಗಂ ಇತರರಿದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಎಸ್. ಜಾನಕಿ, ಎಚ್. ಹನುಮಂತಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಡಾ. ಬಸವಕುಮಾರ ಸ್ವಾಮೀಜಿ, ಡಾ.ಕೆ.ಬಿ. ಗುಡಸಿ, ಗಾಯತ್ರಿ ಶಿವರಾಂ, ಎಸ್. ಷಣ್ಮುಖಪ್ಪ, ಗುರುಮೂರ್ತಿ, ನಾಗರಾಜ ಸಂಗಂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಬಸವಕುಮಾರ ಸ್ವಾಮೀಜಿ ಅಭಿಪ್ರಾಯ
  • ಎಸ್.ಜಾನಕಿ, ಹನುಮಂತಪ್ಪ ನುಡಿನಮನ
  • ಇಷ್ಟಲಿಂಗ ಪೂಜೆ, ಶಿವಯೋಗ ಪ್ರಾತ್ಯಕ್ಷಿಕೆ

ಚಿತ್ರದುರ್ಗ:

ಮೋಡ ಮುಸುಕಿದ ವಾತಾವರಣ, ಆಷಾಢ ಗಾಳಿ, ಹಕ್ಕಿಗಳ ಚಿಲಿಪಿಲಿ ಕಲರವ, ಸಸಿ ನೆಡುವ, ಗಿಡಗಳಿಗೆ ಪಾತಿ ಮಾಡುವ ಶ್ರಮದಾನದೊಂದಿಗೆ ಜರುಗಿದ ಗಾನ ನಮನ ನೆರೆದಿದ್ದವರನ್ನು ಭಾವಯಾನಕ್ಕೆ ಕರೆದೊಯ್ದಂತೆ ಭಾಸವಾಯಿತು.

ಸೀಬಾರದ ಗುರುಪಾದ ಮುರುಘರಾಜೇಂದ್ರ ಸ್ವಾಮೀಜಿ ಅವರ ವನದಲ್ಲಿ ಭಾನುವಾರ ಗಾನಕೋಗಿಲೆ ಡಾ.ಎಸ್. ಜಾನಕಿ, ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಕಂಡ ದೃಶ್ಯಗಳಿವು.
ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ, ಶಿವಯೋಗ ಪ್ರಾತ್ಯಕ್ಷಿಕೆ ಕೂಡ ನಡೆಯಿತು.
ನಂತರ ಸ್ವಾಮೀಜಿ ಮಾತನಾಡಿ, ಈ ನಾಡಿಗೆ ಅನುಪಮ ಸೇವೆ ಸಲ್ಲಿಸಿದ ಶ್ರೇಷ್ಠ ಗಾಯಕಿ ಎಸ್. ಜಾನಕಿ ಜನಮಾನಸದಲ್ಲಿ ಸದಾ ಚಿರಸ್ಥಾಯಿಯಾಗಿದ್ದಾರೆ. ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಅವರ ಒಡನಾಡಿ ಹನುಮಂತಪ್ಪ ಅವರು ಈ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.
ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಬಸವಾದಿ ಶಿವಶರಣರ ನಡೆ ನುಡಿಗಳು, ಅವರ ವಚನಗಳಲ್ಲಿ ಮಾನವನನ್ನು ಮಹದೇವನ ನ್ನಾಗಿಸುವ ತತ್ವಾಗಳು, ಉದಾತ್ತ ಮೌಲ್ಯಗಳು ಅಡಕವಾಗಿವೆ. ತನು, ಮನ ಶುದ್ಧಿಗೆ ಕೆಲವರು ದೇಗುಲಗಳಿಗೆ ಹೋಗುತ್ತಾರೆ. ಶಿವಯೋಗ ಸಾಧನೆಯಿಂದಲೂ ಇದು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಶಿವ ಎಂದರೆ ಶುಭ ಅಥವಾ ಮಂಗಳಕರ. ಆತನನ್ನು ಧ್ಯಾನಿಸುವುದರಿಂದ ಮನಸ್ಸು ಹತೋಟಿಗೆ ಬರಲಿದೆ. ಸದ್ಗುಣ, ಸದ್ವರ್ತನೆ, ವಿನಯ ಪ್ರಾಪ್ತಿಯಾಗಲಿದೆ. ಬಸವಾದಿ ಶರಣರಂತೆ ಸರ್ವ ಕಾಲಕ್ಕೂ ಎಲ್ಲರೂ ಜಾತಿ, ಮತ ಲಿಂಗಭೇದವಿಲ್ಲದೆ ಬಾಳಬೇಕೆಂದು ಕಿವಿಮಾತು ಹೇಳಿದರು.
ಎಸ್ಸೆನ್ ಸ್ಮಾರಕ ಟ್ರಸ್ಟ್ನ ಎಸ್. ಷಣ್ಮುಖಪ್ಪ ಮಾತನಾಡಿ, ಹನುಮಂತಪ್ಪ ಅವರು ಚಿತ್ರದುರ್ಗ-ರಾಯದುರ್ಗ ರೈಲುಮಾರ್ಗ, ಅಂಬೇಡ್ಕರ್-ಮದಕರಿನಾಯಕ ಪ್ರತಿಮೆ ನಿರ್ಮಾಣ, ನೀರಾವರಿ ಹೋರಾಟ ಸೇರಿ ಅವರ ರಾಜಕೀಯ ಜೀವನದಲ್ಲಿ ಅನೇಕ ಬಡವರಿಗೆ ಉದ್ಯೋಗಾವಕಾಶ ಕೊಡಿಸುವಲ್ಲಿ ನೆರವಾಗಿದ್ದಾರೆ. ಟ್ರಸ್ಟ್ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.
ಶಾರದಾ ಬ್ರಾಸ್‌ಬ್ಯಾಂಡ್‌ನ ಸಂಸ್ಥಾಪಕ ಎಸ್.ವಿ. ಗುರುಮೂರ್ತಿ ಮಾತನಾಡಿ, ಕಲಾವಿದರಿಗೆ ಸಾವಿಲ್ಲ. ಜಾನಕಮ್ಮ ಅವರು ಕೋಟ್ಯಂತರ ಮಂದಿಯ ಮನದಲ್ಲಿ ನೆಲೆಯಾಗಿದ್ದಾರೆ. ೪೮ ಸಾವಿರ ಗೀತೆಗಳನ್ನು ಹಾಡಿದ್ದಾರೆಂದರೆ ಸಾಮಾನ್ಯದ ಮಾತಲ್ಲ. ಅವರು ಗಾನಗಂಗೆ, ಸರಸ್ವತಿ ಎಂದರೆ ತಪ್ಪಗಲಾರದು ಎಂದು ಬಣ್ಣಿಸಿದರು.
ಇದೇ ವೇಳೆ ಪತ್ರಕರ್ತ ಕೆ.ಪಿ. ಓಂಕಾರಮೂರ್ತಿ, ಮುಖ್ಯಶಿಕ್ಷಕ ಗೊಂಚಿಗಾರ್, ನಿವೃತ್ತ ಪ್ರಾಚಾರ್ಯ ಡಾ.ಎಸ್.ಎಚ್.ಪಂಚಾ ಕ್ಷರಿ, ನಾಗಭೂಷಣ ದಂಪತಿಯನ್ನು ಸನ್ಮಾನಿಸಲಾಯಿತು. ಗಾಯಕರು ಎಸ್. ಜಾನಕಿ ಅವರ ಹಲವು ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಎಸ್‌ಜೆಎಂ ವಿವಿ ಕುಲಪತಿ ಡಾ.ಕೆ.ಬಿ. ಗುಡಸಿ, ಗಾಯತ್ರಿ ಶಿವರಾಂ, ನಾಗರಾಜ ಸಂಗಂ, ಗಂಗಾಧರಪ್ಪ, ಮಲ್ಲಿಕಾರ್ಜುನಪ್ಪ, ಗೌಳಿರುದ್ರಪ್ಪ, ಉಮೇಶ್, ಗುತ್ತಿನಾಡು ಪ್ರಕಾಶ್, ತಿಪ್ಪೇಸ್ವಾಮಿ, ಪ್ರಸನ್ನಕುಮಾರ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಮಂಜು ನಾಥ್, ಬಸವರಾಜ್, ಶಿವಯೋಗಿ, ಉಮೇಶ್ ಪತ್ತಾರ್, ಎನ್. ಹರ್ಷಿತಾ, ಲತಾ, ಆರ್. ವಿಜಯಲಕ್ಷಿ÷್ಮÃ, ಮಹಾಂತೇಶ್ ನಿಟುವಳ್ಳಿ, ವಿವಿಧ ಮಠಾಽÃಶರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net