೧೩ರಿಂದ ಶರಣ ಸಂಸ್ಕೃತಿ ಉತ್ಸವ

ಮೇಳೈಸಲಿವೆ ಕೃಷಿ, ಸಾಹಿತ್ಯ, ಜನಪದ, ಸಾಂಸ್ಕೃತಿಕ ಕಾರ್ಯಕ್ರಮ
ಚಿತ್ರದುರ್ಗದಲ್ಲಿ ಜರುಗಲಿರುವ ಶರಣ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಬಸವಕುಮಾರ ಸ್ವಾಮೀಜಿ, ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಜಿ.ಎಸ್. ಮಂಜುನಾಥ್, ಡಾ.ಕೆ.ಬಿ. ಗುಡಸಿ ಮತ್ತಿತರರು ಇದ್ದರು.
ಚಿತ್ರದುರ್ಗದಲ್ಲಿ ಜರುಗಲಿರುವ ಶರಣ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಬಸವಕುಮಾರ ಸ್ವಾಮೀಜಿ, ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಜಿ.ಎಸ್. ಮಂಜುನಾಥ್, ಡಾ.ಕೆ.ಬಿ. ಗುಡಸಿ ಮತ್ತಿತರರು ಇದ್ದರು.
Published on: 

ನಾನಾ ಮಠಾಽÃಶರ ಸಾನ್ನಿಧ್ಯ| ಸಚಿವರು, ಗಣ್ಯರು, ಪತ್ರಕರ್ತರು ಭಾಗಿ

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಅ.೧೩ರಿಂದ ೨೨ರವರೆಗೆ ಶ್ರೀಮಠದ ಆವರಣದಲ್ಲಿ ಜರುಗಲಿದೆ . ಮಧ್ಯ ಕರ್ನಾಟಕದ ದಸರಾ ಖ್ಯಾತಿಯ ಈ ಉತ್ಸವ ನಾಡಿನ ನಾನಾ ಮಠಾಽÃಶರ ಸಾನ್ನಿಧ್ಯ-ಸಮ್ಮುಖದಲ್ಲಿ ಜರುಗಲಿದೆ .

ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಉತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಹೇಳಿದರು

೧೩ರಿಂದ ೨೨ರವರೆಗೆ ನಿತ್ಯ ಬೆಳಗ್ಗೆ ೫.೩೦ರಿಂದ ಯೋಗ ಗುರು ಚನ್ನಬಸವಣ್ಣ ಅವರಿಂದ ಯೋಗ ಶಿಬಿರ. ಅಂದು ವಚನ ಕಂಠಪಾಠ, ಬಸವಾದಿ ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಗಳಿರುತ್ತವೆ. ೧೪ರಿಂದ ೨೨ರವರೆಗೆ ನಿತ್ಯ ಬೆಳಗ್ಗೆ ೭.೩೦ಕ್ಕೆ ಸಹಜ ಶಿವಯೋಗ. ಅಂದು ಬೆಳಗ್ಗೆ ೭.೩೦ಕ್ಕೆ ಬಸವಧರ್ಮ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ. ೧೪ರಂದು ಎಸ್‌ಜೆಎಂ ವಿದ್ಯಾಪೀಠ, ಎಸ್ ಜೆಎಂ ವಿವಿ ಅಽÃನ ಸಮೂಹ ಶಿಕ್ಷಣ ಸಂಸ್ಥೆಗಳ ಜಮುರಾ ಕ್ರೀಡಾಕೂಟ ನಡೆಯಲಿದೆ. ರಂಗೋಲಿ, ಸಿರಿಧಾನ್ಯಗಳ ಅಡುಗೆ ಸ್ಪರ್ಧೆಗಳು,

೧೫ರಂದು ಬಸವಾದಿ ಶಿವಶರಣರ ಚಿತ್ರ ಬಿಡಿಸುವ ಸ್ಪರ್ಧೆ. ಮಹಿಳಾ ಕ್ರೀಡಾಕೂಟ. ವಚನಕಮ್ಮಟ ಪರೀಕ್ಷೆ ರ‍್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ, ಜಮುರಾ ಕ್ರೀಡಾಕೂಟದ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಮಾಜಿ ಸಚಿವ ಎಚ್.ಆಂಜನೇಯ ಇನ್ನಿತರ ಪ್ರ ಮುಖರು ಪಾಲ್ಗೊಳ್ಳಲಿದ್ದಾರೆ. ಸಂಜೆ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಗೀತ ನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

೧೬ರಂದು ಬೆಳಗ್ಗೆ ೧೧ಕ್ಕೆ ನಡೆಯುವ ಕೃಷಿ ಮೇಳದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಮಗ್ರ ನೀರಾವರಿ ಪರಿಕಲ್ಪನೆ-ತ್ವರಿತ ಅನುಷ್ಠಾನದಲ್ಲಿ ಜನಪ್ರತಿನಿಽಗಳ ಹೊಣೆಗಾರಿಕೆ ಕುರಿತ ವಿಚಾರ ಸಂಕಿರಣವಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಉದ್ಘಾಟಿಸುವರು. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ರೈತ ಧುರೀಣರು, ಗಣ್ಯರು ಭಾಗವಹಿಸಲಿದ್ದಾರೆ. ಮೇಳದ ಅಂಗವಾಗಿ ಕೃಷಿ, ಕೈಗಾರಿಕೆ ವಸ್ತು ಪ್ರದರ್ಶನ ಹಾಗೂ ಜೋಡೆತ್ತುಗಳ ಸ್ಪರ್ಧೆ ಮತ್ತು ಸಾಕು ಪ್ರಾಣಿಗಳ ಪ್ರದರ್ಶನವಿದೆ.

ಅಂದು ಸಂಜೆ ೬ಕ್ಕೆ ಮುರಿಗಿ ಶಾಂತವೀರ ಸ್ವಾಮೀಜಿ ಕುರಿತ ಸಮಗ್ರ ಕೃತಿ ಚಿನ್ಮೂಲಾದ್ರಿ ಚಿದ್ಧನ, ಅಥಣಿ ಮುರುಘೇಂದ್ರ ಶಿವಯೋಗಿಗಳ ಕುರಿತ ಲೋಕ ಜಂಗಮ, ಶ್ರೀ ಜಯವಿಭವ ಶ್ರೀಗಳ ಕುರಿತಾದ ಚಿನ್ಮೂಲಾದ್ರಿಯ ಚಿನ್ಮಯ ಕೃತಿಗಳನ್ನು ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾ. ಶಿವರಾಜ ವಿ. ಪಾಟೀಲ್ ಬಿಡುಗಡೆ ಮಾಡಲಿದ್ದಾರೆ. ನಾನಾ ಕುಲಪತಿಗಳು, ಗಣ್ಯರು ಉಪಸ್ಥಿತರಿರುವರು.

--ಬಾಕ್ಸ್--

ವಚನ ಝೇಂಕಾರ

ಸಂವಿಧಾನ ಆಶಯಗಳನ್ನು ಒಳಗೊಂಡಿರುವ ವಚನಗಳ ಸಾಮೂಹಿಕ ಗಾಯನ ವಚನ ಝೇಂಕಾರ ಕಾರ್ಯಕ್ರಮ ೧೭ರಂದು ಬೆಳಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. ೧೦ ಸಾವಿರ ಜನರು ೩೨ ವಚನಗಳನ್ನು ಹಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಡಾ.ಪಿ.ಎಸ್. ಶಂಕರ್ ಅವರ ಕತ್ತಲನ್ನು ಕಳೆಯುವ ಬೆಳಕು ಕೃತಿ ಬಿಡುಗಡೆ ಆಗಲಿದೆ.

ಅಂದು ಸಂಜೆ ೬ಕ್ಕೆ ರಾಷ್ಟಿçÃಯ ನಾಯಕ ಎಸ್. ನಿಜಲಿಂಗಪ್ಪ ಅವರ ೧೨೫ ವರ್ಷದ, ಫ.ಗು.ಹಳಕಟ್ಟಿ ಅವರ ಶಿವಾನುಭವ ಪತ್ರಿಕೆಯ, ಜಿ.ಎಸ್.ಶಿವರುದ್ರಪ್ಪ ಹಾಗೂ ಪತ್ರಕರ್ತ ವೈ.ಎನ್.ಕೃಷ್ಣಮೂರ್ತಿ ಅವರ ಜನ್ಮ ಶತಮಾನೋತ್ಸವ ಹಾಗೂ ಕೃತಿ ಬಿಡುಗಡೆ ಇರುತ್ತದೆ. ಈ ಸಮಾರಂಭದಲ್ಲಿ ವಿಜಯವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ಕೆ.ಎನ್. ಚನ್ನೇಗೌಡ ಅವರು ಸೇರಿ ನಾನಾ ಪತ್ರಿಕೆಗಳ ಸಂಪಾದಕರು, ಗಣ್ಯರು ಭಾಗವಹಿಸಲಿದ್ದಾರೆ.

---ಬಾಕ್ಸ್--

ದುಂಡು ಮೇಜಿನ ಪರಿಷತ್

೧೮ರಂದು ಬೆಳಗ್ಗೆ ೧೦ಕ್ಕೆ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ನಾಡಿನ ಸರ್ವಧರ್ಮ ಗುರುಗಳು, ಲಿಂಗಾಯತ ಮಠಾಽÃಪತಿಗಳ ಒಕ್ಕೂಟ, ದಲಿತ ಹಿಂದುಳಿದ ಮಠಾಽÃಶರ ಒಕ್ಕೂಟ ಹಾಗೂ ಚಿಂತಕರ ಸಮನ್ವಯದೊಂದಿಗೆ ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನೆಗೆ ದುಂಡು ಮೇಜಿನ ಪರಿಷತ್ ಸಭೆ ಆಯೋಜಿಸಲಾಗಿದೆ.

ಎಂ.ಎA.ಕಲಬುರ್ಗಿ ನಂತರದ ಲಿಂಗಾಯತ ಧರ್ಮ, ಸಾಧ್ಯತೆ ಸವಾಲುಗಳು ಕುರಿತ ವಿಚಾರ ಸಂಕಿರಣ ನಡೆಯಲಿದೆ. ನಾನಾ ಪ್ರಮುಖರು ವಿಷಯ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಬಸವಪುತ್ಥಳಿಗೆ ಪುಷ್ಪಾರ್ಚನೆ, ವಚನ ಪ್ರಾರ್ಥನೆ, ಸಂವಿಧಾನ ಪೀಠಿಕೆ ಪಠಣ ಇರುತ್ತದೆ. ಸರ್ವಧರ್ಮೀಯರ ವಧು-ವರರ ರಾಜ್ಯಮಟ್ಟದ ಸಮಾವೇಶ, ಸಂಜೆ ಮಹಿಳಾ ಸಮಾವೇಶ ಆಯೋಜಿಸಲಾಗಿದೆ. ಮಾಜಿ ಶಾಸಕಿ ಪೂರ್ಣಿಮಾ ಆರ್. ಶ್ರೀನಿವಾಸ್ ಸೇರಿ ಗಣ್ಯರು ಉಪಸ್ಥಿತರಿರುವರು. ಗಾಯಕ ರಾಜೇಶ್‌ಕೃಷ್ಣನ್ ಅವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗತ್ತಿದೆ.

--ಬಾಕ್ಸ್--

ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ

೧೯ರಂದು ಬೆಳಗ್ಗೆ ೧೦.೩೦ಕ್ಕೆ ರಾಜ್ಯಮಟ್ಟದ ಅಂಗವಿಕಲರ ಸಮಾವೇಶ ಮತ್ತು ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ, ವಿಕಲಚೇತನ ವಿಶೇಷ ಕೂಗು ಕವನ ಸಂಕಲನ ಬಿಡುಗಡೆ ಆಗಲಿದೆ. ಸಚಿವ ರಘುಮೂರ್ತಿ ಉದ್ಘಾಟಿಸಿದರು. ಬೆಳಗ್ಗೆ ೧೦.೩೦ಕ್ಕೆ ಬಸವ ಶಕ್ತಿ ನಾಡು- ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ ವಿಚಾರ ಸಂಕಿರಣ, ಸಂಜೆ ೬ಕ್ಕೆ ಸಾಹಿತ್ಯ ಸಮಾವೇಶ ಏರ್ಪಡಿಸಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಅಮರೇಶ ನುಗಡೋಣಿ ಅವರನ್ನು ಸನ್ಮಾನಿಸಲಾಗುತ್ತದೆ.

ರಾಜವಂಶಸ್ಥರಿAದ ಭಕ್ತಿ ಸಮರ್ಪಣೆ

೨೦ ರಂದು ಬೆಳಗ್ಗೆ ೧೦ಕ್ಕೆ ಪಾರಂಪರಿಕ ವೈದ್ಯ ಸಮ್ಮೇಳನ ಹಾಗೂ ೬ಕ್ಕೆ ಜಾನಪದ ಸಮಾವೇಶ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ ೨.೩೦ಕ್ಕೆ ಶ್ರೀ ಮುರಿಗಿ ಶಾಂತವೀರ ಶ್ರೀಗಳ ಭಾವಚಿತ್ರ ಮೆರವಣಿಗೆ ಶ್ರೀಮಠದಿಂದ ಮೇಲುದುರ್ಗದ ಚಿನ್ಮೂಲಾದ್ರಿ ಶ್ರೀಮಠದ ಅವರಣದವರೆಗೆ ನಡೆಯಲಿದೆ. ಅಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ವೇದಿಕೆಯಲ್ಲಿ ರಾಜವಶಂಸ್ಥರಿAದ ಭಕ್ತಿ ಸಮರ್ಪಣೆ ಇರುತ್ತದೆ.

೨೧ರಂದು ಸಂಜೆ ೬ಕ್ಕೆ ಮಕ್ಕಳ ಸಂಭ್ರಮ. ೨೨ರಂದು ಬೆಳಗ್ಗೆ ೯.೩೦ಕ್ಕೆ ಮುರಿಗಿ ಶಾಂತವೀರ ಶ್ರೀಗಳ ಭಾವಚಿತ್ರದ ಶೂನ್ಯಪೀಠಾರೋಹಣ, ೧೧ಕ್ಕೆ ಬಸವಣ್ಣ, ಅಲ್ಲಮಫ್ರಭು ದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತ ಪ್ರತಿಗಳ ಮೆರವಣಿಗೆ, ೧೧.೩೦ಕ್ಕೆ ಜಯದೇವ ಜಂಗಿಕುಸ್ತಿ, ಸಂಜೆ ಉತ್ಸವದ ಸಮಾರೋಪ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವಕುಮಾರ ಸ್ವಾಮೀಜಿ ವಿವರಿಸಿದರು.

ಎಸ್‌ಜೆಎಂ ವಿವಿ ಕುಲಪತಿ ಡಾ.ಕೆ.ಬಿ. ಗುಡಸಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಪಟೇಲ್ ಶಿವಕುಮಾರ್, ಸುನೀತಾ ಮಲ್ಲಿಕಾರ್ಜುನ್, ಪರಮೇಶ್ವರಪ್ಪ, ಸುರೇಶ್‌ಬಾಬು ಬಸ್ತಿಹಳ್ಳಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹೊರಕೇರಪ್ಪ, ವೀರೇಂದ್ರಕುಮಾರ್, ಹರಗುರು ಚರಮೂರ್ತಿಗಳು ಇದ್ದರು.

---ಕೋಟ್--

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಪಂದ್ಯಾವಳಿಗೆ ರಾಜ್ಯದ ವಿವಿಧೆಡೆಯಿಂದ ೩೦೦ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಚಿತ್ರದುರ್ಗ ಫೈಲ್ವಾನ್ ನಂಜAಪ್ಪ ಅವರಂಥ ಹೆಸರಾಂಥ ಕುಸ್ತಿಪಟುಗಳಿದ್ದ ಜಿಲ್ಲೆ ಇದು. ಇಲ್ಲಿಯ ಕುಸ್ತಿ ಪಂದ್ಯ ವೈಭವವನ್ನು ಮರಳಿ ತರಬೇಕಿದೆ.

ಜಿ.ಎಸ್. ಮಂಜುನಾಥ್, ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ

---ಕೋಟ್--

ಮುರುಘಾ ಪರಂಪರೆಯAತೆ ಶರಣ ಸಂಸ್ಕೃತಿ ಉತ್ಸವ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಇದರ ಅರ್ಥಪೂರ್ಣ ಆಚರಣೆ, ಯಶಸ್ಸಿಗೆ ಭಕ್ತರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಉತ್ಸವ ಯಶಸ್ವಿಗೊಳಿಸಬೇಕು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net