

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಅಪರಾಧ, ಅಪಘಾತ, ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಿದೆ ಂದು ಎಸ್‌ಪಿ ಕುಶಾಲ್ ಚೌಕ್ಸೆ ಹೇಳಿದರು. ಜಿಲ್ಲೆಯ ನೂತನ ರಕ್ಷಣಾಽಕಾರಿಯಾಗಿ ಅಽಕಾರ ವಹಿಸಿಕೊಂಡ ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಶುಕ್ರವಾರ ಡಿಪಿಒ ಕಚೇರಿಯಲ್ಲಿ ಪೊಲೀಸ್ ಅಽಕಾರಿಗಳ ಪರಿಚಯಾತ್ಮಕ ಸಭೆ ನಡೆಸಿದ್ದೇನೆ.
ಯಾವುದೇ ಅಪರಾಧ ಕೃತ್ಯಗಳಾದಂಥ ಸಂದರ್ಭದಲ್ಲಿ ತಕ್ಷಣ ಕ್ರಮಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ವಿವಿಧ ಹೆದ್ದಾರಿಗಳು ಹಾದು ಹೋಗಿವೆ. ಅಪಘಾತ ನಿಯಂತ್ರಣ ನಿಟ್ಟಿನಲ್ಲಿ ಸಂಚಾರ ನಿಯಮಗಳೆಡೆ ಜಾಗೃತಿ ಮುಂದಾಗಬೇಕಿದೆ. ಹಿಂದು ಮಹಾಗಣಪತಿ ಶೋಭಾ ಯಾತ್ರೆ ಬಳಿಕ ಜಿಲ್ಲಾದ್ಯಂತ ಸಂಚಾರ ನಿಯಂತ್ರಕ್ಕೆ ಜಾಗೃತಿ ಮೂಡಿಸಬೇಕಿದೆ.
ನಾನು ಈಗಾಗಲೇ ಗಮನಿಸಿದ್ದೇನೆ. ಇಲ್ಲಿ ಸವಾರರು ಹೆಲ್ಮೆಟ್ ಧರಿಸದೆ ದ್ವಿಚಕ್ರ ಮೋಟಾರ್ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಜನ ರು ಇಲಾಖೆಯೊಂದಿಗೆ ಸಹಕರಿಸಬೇಕು. ಜಿಲ್ಲಾಽಕಾರಿ ಅಧ್ಯಕ್ಷತೆಯ ರಸ್ತೆ ಸುರಕ್ಷತಾ ಸಭೆಯಲ್ಲೂ ಅಪಘಾತಗಳ ನಿಯಂತ್ರಣ, ಬ್ಲಾಕ್ ಸ್ಪಾ ಟ್‌ಗಳಲ್ಲಿ ತೆಗೆದುಕೊಳ್ಳ ಬೇಕಾದ ರಸ್ತೆ ಸುರಕ್ಷತೆ ಕುರಿತು ಚರ್ಚಿಸುತ್ತೇನೆ. ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ, ಲೋಕೋಪಯೋಗಿ ಇಲಾಖೆ ಮೊದಲಾದ ಸಂಬಂಽಸಿದ ಏಜನ್ಸಿಗಳ ಅಽಕಾರಿಗಳೊಂದಿಗೆ ಮಾತನಾಡುತ್ತೇನೆ.
ಸೈಬರ್ ಅಪರಾಧ ಹಾಗೂ ಸೋಷಿಯಲ್ ಮೀಡಿಯಾದೆಡೆ ಅತ್ಯಂತ ಎಚ್ಚರಿಕೆ ವಹಿಸಬೇಕಿದೆ. ಎಲ್ಲೋ ಕುಳಿತು ತಾವು ಸಿಕ್ಕಿ ಬೀಳು ವುದಿಲ್ಲ ಎಂಬ ನಂಬಿಕೆಯಲ್ಲಿ ದುಷ್ಕರ್ಮಿಗಳು ವಂಚನೆ ಕೃತ್ಯಗಳನ್ನು ಎಸಗುತ್ತಿದ್ದಾರೆ. ರಾಜಸ್ಥಾನ, ಜಾರ್ಖಂಡ್, ಬಿಹಾರ ಮೊದಲಾದೆಡೆ ಕುಳಿತು ಜನರನ್ನು ವಂಚಿಸುತ್ತಿದ್ದಾರೆ.
ಬಂಡವಾಳ ಹೂಡಿಕೆ, ಉದ್ಯೋಗ ಇತ್ಯಾದಿ ಆಮಿಷಗಳಲ್ಲಿ ಜನರನ್ನು ಹಣ ಕಳೆದುಕೊಳ್ಳುತ್ತಿದ್ದಾರೆ. ಜನರು ಕೂಡ ಗೋಲ್ಡನ್ ಅವರ್ ಎಂದು ನಾವು ಏನು ಗುರುತಿದ್ದೇವೆ, ವಂಚನೆ ನಡೆದ ಒಂದು ಗಂಟೆಯೊಳಗೆ ೧೯೩೦ಗೆ ಕಂಪ್ಲೆಂಟ್ ಮಾಡ ಬೇಕು. ಆಗ ಗರಿಷ್ಠ ಮೊತ್ತವನ್ನು ಬ್ಯಾಂಕ್‌ಗಳಲ್ಲಿ ಫ್ರೀಜ್ ಮಾಡಿಸಲು ಸಾಧ್ಯವಾಗಬಹುದಾಗಿದೆ.
ಸೋಷಿಯಲ್ ಮೀಡಿಯಾವನ್ನೂ ಸಮರ್ಥವಾಗಿ ಬಳಸಿಕೊಂಡು ಈ ನಿಟ್ಟಿನಲ್ಲಿ ಜನರನ್ನೂ ಎಚ್ಚರಿಸುವ ಕೆಲಸವನ್ನು ಇಲಾಖೆ ಮಾಡ ಲಿದೆ. ಅಪರಾಧ, ಸೈಬರ್ ಮತ್ತಿತರ ಯಾವುದೇ ಅಪರಾಧ ಪ್ರಕರಣಗಳಿರಲಿ ಕೂಡಲೇ ಸ್ಪಂದಿಸಿ ತನಿಖೆ ಮುಂದಾಗುವಂತೆ ಅಽಕಾರಿಗಳಿ ಗೆ ಸೂಚಿಸಿದ್ದೇನೆ.
ಮಾದಕ ವಸ್ತುಗಳ ಮಾರಾಟ, ಸೇವನೆಯಂಥ ಪ್ರಕರಣಗಳ ಕುರಿತಂತೆ ಅಗತ್ಯವಿರುವೆಡೆ ಚೆಕ್‌ಪೋಸ್ಟ್ ಹಠಾತ್ ಪರಿಶೀಲನೆಗೂ ತಿಳಿ ಸಿದ್ದೇನೆ. ಆಡ್ವಾನ್ಸ್ ಆಗಿ ಮಾಹಿತಿ ಪಡೆದು ಮಾದಕ ವಸ್ತು ಸಾಗಾಟದಂಥ ಕೃತ್ಯಗಳ ಪತ್ತೆ ಮಾಡಬೇಕಿದೆ. ಪೊಲೀಸ್ ಸನ್ಮಿತ್ರ ಕಾರ‍್ಯಕ್ರಮ ವನ್ನು ಸಮರ್ಥವಾಗಿ ಬಳಸಿಕೊಂಡು ಮಾದಕ ವಸ್ತುಗಳ ಸೇವನೆ, ಮಾರಾಟಕ್ಕೆ ಕಡಿವಾಣ ಹಾಕ ಬೇಕಿದೆ.
ಪೊಲೀಸರು ಜನ್ನ ಸ್ನೇಹಿಯಾಗಿರಬೇಕು. ನಮ್ಮ ಮೇಲೆ ವಿಶ್ವಾಸವಿಟ್ಟು ಬರುವಂಥ ನಾಗರಿಕರಿಗೆ ಕಷ್ಟಗಳಿಗೆ ಸ್ಪಂದಿಸಬೇಕು. ಇಲಾಖೆ ಮೇಲೆ ಜನರಿಗೆ ವಿಶ್ವಾಸ ಇನ್ನೂ ಹೆಚ್ಚಾಗುವಂತೆ ಕೆಲಸ ಮಾಡಬೇಕಿದೆ ಎಂದು ಅಽಕಾರಿಗಳಿಗೆ ನಿರ್ದೇಶಿಸಿರುವುದಾಗಿ ಕುಶಾಲ್ ಚೌಕ್ಸೆ ತಿಳಿಸಿದರು.
ಮಧ್ಯಪ್ರದೇಶ ಜಬಲ್‌ಪುರ ಮೂಲದ ಚೌಕ್ಸೆ ಅವರು, ಭೂಪಾಲದಲ್ಲಿ ಎನ್‌ಐಟಿ ಬಿಟೆಕ್ ಪದವಿ ಬಳಿಕ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೨೦೧೮ ಬ್ಯಾಚ್ ಕರ್ನಾಟಕ ಕೇಡರ್ ಐಪಿಎಸ್ ಅಽಕಾರಿಯಾಗಿ ಕಾರವಾರದಲ್ಲಿ ಸೇವೆಯನ್ನು ಆರಂಭಿಸಿದ್ದಾರೆ. ಚಿಕ್ಕಬ ಳ್ಳಾಪುರ, ಚಿಂತಾಮಣಿ, ಹುಬ್ಳಳಿ-ಧಾರವಾಡ, ಬೆಂಗಳೂರಲ್ಲಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಚಿತ್ರದುರ್ಗಕ್ಕೆ ಎಸ್‌ಪಿಯಾಗಿ ಅಽಕಾರ ಸ್ವೀಕರಿಸಿದ್ದಾರೆ.
---
ಅಽಕಾರ ಸ್ವೀಕರಿಸಿದ ಪೋಟೊ ಈಗಾಗಲೇ ಕಳಿಸಲಾಗಿದೆ.
---