

ತಿಪ್ಪೇಸ್ವಾಮಿ ಕೊರ್ಲಕುಂಟೆ, ಚಳ್ಳಕೆರೆ
ಗಣಿಬಾಧಿತ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡುವ ಯೋಜನೆ ಜಾರಿಯಿಂದ ವಂಚಿತವಾಗಿದ್ದ ಚಳ್ಳಕೆರೆ ತಾಲೂಕು 2ನೇ ಹಂತದಲ್ಲಿ ಸೇರ್ಪಡೆಯಾಗಿದ್ದು, ಇದರಿಂದ ತಾಲೂಕಿನ 383 ಶಾಲೆಗಳಲ್ಲಿ 1ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ 27,713 ವಿದ್ಯಾರ್ಥಿಗಳ ಶೈಣಿಕ ಮತ್ತು ಆರೋಗ್ಯ ಬಲವರ್ಧನೆ ಆದ್ಯತೆ ದೊರೆತಂತಾಗಿದೆ.
2025&26ನೇ ಶೈಣಿಕ ಸಾಲಿಗೆ ಜಾರಿ ಮಾಡಿದಾಗ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಮಾತ್ರ ಅವಕಾಶ ಸಿಕ್ಕಿತ್ತು. ವಂಚಿತವಾಗಿದ್ದ ಚಳ್ಳಕೆರೆ ಮತ್ತು ಹಿರಿಯೂರು 2ನೇ ಆದೇಶ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಪೌಷ್ಟಿಕತೆ, ರಕ್ತಹಿನತೆ, ಬಹು ಪೋಷಕಾಂಶಗಳ ನ್ಯೂನತೆಗಳಿಂದ ಉಂಟಾಗುವ ಅನಾರೋಗ್ಯಕರ ಪರಿಸ್ಥಿತಿ ನಿವಾರಣೆ ಮಾಡಿಕೊಂಡು ಗಣಿಬಾಧಿತ ಸರ್ಕಾರಿ ಶಾಲಾ ಮಕ್ಕಳ ಶೈಣಿಕ ಮತ್ತು ಆರೋಗ್ಯ ಬಲವರ್ಧನೆ ದೃಷ್ಟಿಯಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಇದು ಮೂರು ವರ್ಷ ಜಾರಿ ಇರುವ ಕಾರ್ಯಕ್ರಮವಾಗಿದ್ದು, ಸಿಇಪಿಎಂಐಝಡ್ನ ಆರ್ಥಿಕ ನಿರ್ವಹಣೆಯಿಂದ ನೆರವು ದೊರೆಯುತ್ತದೆ. ದಿನದ ಶಾಲಾ ಅವಧಿ ಮುಗಿದ ಬಳಿಕ, ಸಂಜೆ ನಾಲ್ಕರ ನಂತರ ಮಕ್ಕಳಿಗೆ ಶೇಂಗಾ ಉಸುಳಿ, ಹೆಸರು ಉಸುಳಿ, ಕಡ್ಲೆಕಾಳು ಉಸುಳಿ ಮತ್ತು ಕೆಡದೇ ಇರುವಂತಹ ಹಣ್ಣುಗಳನ್ನು ನಿಗದಿತ ಪ್ರಮಾಣದಲ್ಲಿ ವಿತರಿಸಲಾಗುತ್ತದೆ. ಇದರಿಂದ ಸರ್ಕಾರಿ ಶಾಲೆಗೆ ಬರುವ ಬಡ ಕುಟುಂಬಗಳ ಮಕ್ಕಳಿಗೆ ಆರೋಗ್ಯ ವೃದ್ಧಿ ಮತ್ತು ಕಲಿಕಾ ಗುಣಮಟ್ಟಕ್ಕೆ ಪ್ರಯೋಜನವಾಗುತ್ತದೆ. ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮದಲ್ಲೂ ಮಕ್ಕಳಿಗೆ ಈ ಯೋಜನೆಯ ಪೌಷ್ಟಿಕ ಆಹಾರ ನೀಡಬೇಕಿದೆ.
ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ 5 ದಿನಗಳ ಕಾಲ 50 ಗ್ರಾಂ ಲೆಕ್ಕದಲ್ಲಿ ಕಾಳುಗಳ ಉಸುಳಿ ಮತ್ತು ಶನಿವಾರ 135 ಗ್ರಾಂ ತೂಕದ ಹಣ್ಣು ನೀಡಲಾಗುತ್ತದೆ. ಒಬ್ಬ ವಿದ್ಯಾರ್ಥಿಗೆ 6.67 ಪೈಸೆಯಂತೆ ಈ ಯೋಜನೆಗೆ ವಿಶೇಷ ಅನುದಾನ ಇದೆ. ಇದನ್ನು ಕಾರ್ಯಗತ ಮಾಡಲು ಪ್ರತಿ ಶಾಲೆಯಲ್ಲಿ ಅಡುಗೆ ತಯಾರಿಸುವ ಸಿಬ್ಬಂದಿಯನ್ನೇ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಪ್ರತಿಫಲವಾಗಿ ಅವರಿಗೆ ಪ್ರತಿ ಮಾಹೆ 500 ರೂ. ಗೌರವ ಧನ ಹೆಚ್ಚುವರಿಯಾಗಿ ನೀಡಲಾಗುತ್ತಿದೆ.
ಈ ಯೋಜನೆಯ ಸಮರ್ಪಕ ಜಾರಿಗಾಗಿ ಉಸ್ತುವಾರಿಯನ್ನು ಸಮಿತಿ ಗುರುತಿಸಲಾಗಿದ್ದು, ಇದರಲ್ಲಿ ಅಧ್ಯರಾಗಿ ಜಿಲ್ಲಾಧಿಕಾರಿ, ಉಪಾಧ್ಯರಾಗಿ ಜಿಪಂ ಸಿಇಒ, ಕಾರ್ಯದರ್ಶಿಯಾಗಿ ಆಡಳಿತ ಶಾಲಾ ಶಿಣ ಉಪ ನಿರ್ದೇಶಕ, ಸಹ ಕಾರ್ಯದರ್ಶಿಯಾಗಿ ನೋಡಲ್ ಅಧಿಕಾರಿ, ಸದಸ್ಯರಾಗಿ ೇತ್ರ ಶಿಣಾಧಿಕಾರಿ ಇರುತ್ತಾರೆ. ಈ ಯೋಜನೆಗೆ ಬಳಸುವ ಪದಾರ್ಥಗಳನ್ನು ನೇರವಾಗಿ ಖರೀದಿ ಮಾಡಿ, ಬಿಲ್ ವೋಚರ್ಗಳನ್ನು ಶಾಲಾ ಮುಖ್ಯ ಶಿಕರು ಈ ಉಸ್ತುವಾರಿ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕಿದೆ.
ಚಳ್ಳಕೆರೆ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಮಕ್ಕಳಿಗೆ ಕಾಳುಗಳ ಪೌಷ್ಟಿಕ ಆಹಾರ ನೀಡುವ ಮೂಲಕ ಬಿಇಒ ಕೆ.ಎಸ್. ಸುರೇಶ್ ಈ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ಕಲಿಯುವ ಮಕ್ಕಳಿಗೆ ನೀಡುವ ಸೌಲಭ್ಯ ಇದಾಗಿದೆ. ಅನುದಾನಿತ ಶಾಲೆಗಳಿಗೆ ಈ ಅವಕಾಶ ಕೊಟ್ಟಿಲ್ಲ. ಈ ಯೋಜನೆಯಿಂದ ಸರ್ಕಾರಿ ಶಾಲಾ ಮಕ್ಕಳ ಶೈಣಿಕ ಮತ್ತು ಆರೋಗ್ಯ ಬಲವರ್ಧನೆಗೆ ಸಂಪೂರ್ಣ ಅನುಕೂಲವಾಗಲಿದೆ ಎಂದರು.