ತೋಟಗಾರಿಕೆ ಇಲಾಖೆ ಜಾಗದಲ್ಲೇ ಡಿಸಿ ಕಚೇರಿ ಹೊಸ ಕಟ್ಟಡ

ಬೆAಗಳೂರಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ, ಡಿಸಿ ಟಿ.ವೆಂಕಟೇಶ್ ಇದ್ದರು.
ಬೆAಗಳೂರಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ, ಡಿಸಿ ಟಿ.ವೆಂಕಟೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾರ್ಟಿಕಲ್ಚರ್ ಭೂಮಿ ಕಂದಾಯ ಇಲಾಖೆ ಹಸ್ತಾಂತರ
  • ಸಚಿವದ್ವರು, ಶಾಸಕರ ನೇತೃತ್ವದ ಸಭೆಯಲ್ಲಿ ನಿರ್ಧಾರ
  • ಹಾಪ್‌ಕಾಮ್ಸ್
ಚಿತ್ರದುರ್ಗ: ಜಿಲ್ಲಾಽಕಾರಿ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದ ೬.೩೦ ಎಕರೆ ಭೂಮಿಯನ್ನು ಹಸ್ತಾಂತರಿಸಲು ಇಲಾಖೆ ಸಚಿವ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ನೇತೃತ್ವದ ಜಂಟಿ ಸಭೆ ನಿರ್ಧರಿಸಿದೆ.
ತೋಟಗಾರಿಕೆ ಇಲಾಖೆಯ ೬.೧೦ ಎಕರೆ ಮತ್ತು ಹಾಪ್‌ಕಾಮ್ಸ್ ವ್ಯಾಪ್ತಿಯ ೦.೨೦ ಎಕರೆ ಸೇರಿ ೬.೩೦ ಎಕರೆ ಜಮೀನನ್ನು ಡಿಸಿ ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕೊಡಲು ಹಾಗೂ ಇಲಾಖೆಗೆ ಹಿರೇಗುಂಟನೂರು ಹೋಬಳಿ ಚಿಕ್ಕಪುರದ ೨೦ ಎಕರೆ ಜಮೀನ ನ್ನು ಸರ್ಕಾರದಿಂದ ಮಂಜೂರು ಮಾಡಲು ಸಚಿವದ್ವಯರು ಬೆಂಗಳೂರಲ್ಲಿ ಗುರುವಾರ ನಡೆಸಿದ ಅಽಕಾರಿಗಳ ಜಂಟಿ ಸಭೆಯಲ್ಲಿ ನಿರ್ಧರಿಸಲಾಯಿತು.
ಕುಂಚಿಗನಾಳು ಹತ್ತಿರ ನಿರ್ಮಾಣವಾಗುತ್ತಿರುವ ಮಾಡಲಾಗಿರುವ ಜಿಲ್ಲಾಽಕಾರಿ ನೂತನ ಕಚೇರಿ ಕಟ್ಟಡ ನಗರದಿಂದ ದೂರವಿದ್ದು, ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಈ ಹೊಸ ಕಟ್ಟಡವನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿ, ನಗರದಲ್ಲೇ ಜಿಲ್ಲಾಽಕಾರಿ ಹೊಸ ಕಚೇರಿ ನಿರ್ಮಿಸಬೇಕೆಂದು ಕಂದಾಯ, ವೈದ್ಯಕೀಯ ಇಲಾಖೆಗಳು ಸಚಿವರು ಹಾಗೂ ತೋಟ ಗಾರಿಕೆ ಇಲಾಖೆ ಅಽಕಾರಿಗಳ ಜತೆ ಬೆಂಗಳೂರು ಹಾಗೂ ಬೆಳಗಾವಿಯ ಅಽವೇಶನದ ಸಂದರ್ಭದಲ್ಲಿ ನಿರಂತರ ಸಭೆಗಳನ್ನು ನಡೆಸಿದ್ದರು.
ವಿಕಾಸಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕÊಷ್ಣ, ಕೆ.ಸಿ.ವೀರೇಂ ದ್ರ ಪಪ್ಪಿ, ಡಿಸಿ ಟಿ.ವೆಂಕಟೇಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ.ಸವಿತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net