ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಪಾಶ್ಚಿಮಾತ್ಯ ಸಂಸ್ಕೃತಿ, ತಂತ್ರಜ್ಞಾನಕ್ಕೆ ಮಾರುಹೋಗಿರುವ ಯುವಪೀಳಿಗೆ ದೇಶದ ಭವ್ಯ ಪರಂಪರೆ, ಹಿರಿಯರನ್ನು ಕಡೆಗಣಿಸುತ್ತಿರುವುದು ದುರದೃಷ್ಟಕರ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಜಿ.ಡಿ. ಮಹಾವರ್ಕರ್ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಪಂನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹಿರಿಯರು ಅನುಭವದ ಗಣಿಗಳು, ಅವರ ಅನುಭವ, ಮಾರ್ಗದರ್ಶನವಿಲ್ಲದೆ ಯುವಜನರು ಯಾವುದೇ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಆದರೆ, ಇಂದಿನ ಯುವ ಸಮುದಾಯ ತಮ್ಮ ಸ್ವಾರ್ಥಕ್ಕೆ ಹೆತ್ತವರನ್ನೇ ಮರೆಯುತ್ತಿರುವುದು ನೋವಿನ ಸಂಗತಿ. ಹೆತ್ತವರನ್ನು ವÊದ್ಧಾಶ್ರಮಗಳಿಗೆ ಕಳಿಸುವ ಸಂಸ್ಕೃತಿ ಹೆಚ್ಚಾಗುತ್ತಿದೆ. ವಯಸ್ಸಾದಂತೆ ಹಿರಿಯರ ಮನಸ್ಸು ಮತ್ತೆ ಮಗುವಿನಂತಾಗುತ್ತದೆ. ಅಂಥ ಸಮಯದಲ್ಲಿ ಅವರಿಗೆ ಪ್ರೀತಿ, ಕಳಕಳಿ ಹಾಗೂ ಗೌರವ ನೀಡುವುದು ಮಕ್ಕಳ ಹಾಗೂ ಸಮಾಜದ ಆದ್ಯ ಕರ್ತವ್ಯ. ಮನೆಯಲ್ಲಿ ಹಿರಿಯರಿದ್ದರೆ ಆ ಕುಟುಂಬಕ್ಕೆ ಭದ್ರತೆ, ಸೂಕ್ತ ಮಾರ್ಗದರ್ಶನ ಸಿಗುತ್ತದೆ ಎಂದರು.
ಕಾನೂನಿನ ತೊಡಕುಗಳು ಹಾಗೂ ಸಮಸ್ಯೆಗಳು ಎದುರಾದಾಗ ಹಿರಿಯರ ನೆರವಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ಸದಾ ಸಿದ್ಧವಿದೆ. ಪ್ರಾಽಕಾರದ ಮೂಲಕ ಉಚಿತ ಕಾನೂನು ನೆರವು ಪಡೆಯಲು ಹಿರಿಯ ನಾಗರಿಕರು ನೇರವಾಗಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಉಪ ವಿಭಾಗಾಽಕಾರಿ, ಪಾಲಕರ ಪೋಷಣೆ ಸಂರಕ್ಷಣೆ ಹಿರಿಯ ನಾಗರಿಕರ ರಕ್ಷಣಾ ಮಂಡಳಿ ಅಧ್ಯಕ್ಷ ಕೆ.ಜೆ. ಕಾಂತರಾಜ್ ಮಾತನಾಡಿ, ಹಿರಿಯ ನಾಗರಿಕರು ಎಂದರೆ ಅನುಭವಗಳ ವಿಶ್ವವಿದ್ಯಾಲಯ ಇದ್ದಂತೆ. ಅಜ್ಜಿ ಇಲ್ಲದ ಮನೆ, ಮಜ್ಜಿಗೆ ಇಲ್ಲದ ಊಟಕ್ಕೆ ಸಮಾನ ಎಂಬ ಗಾದೆ ಮಾತಿನಂತೆ, ಪ್ರತಿಯೊಬ್ಬರ ಬದುಕಿನ ಯಶಸ್ಸು ಹಾಗೂ ಉನ್ನತ ಸ್ಥಾನಮಾನದ ಹಿಂದೆ ತಂದೆತಾಯಿ ಹಾಗೂ ಹಿರಿಯರ ಮಾರ್ಗದರ್ಶನ ಪ್ರಮುಖವಾಗಿರುತ್ತದೆ ಎಂದರು.
ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಕುರಿತು ಹಿರಿಯ ವಕೀಲೆ ಡಿ.ಕೆ. ಶೀಲಾ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಽÃಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಶಮೀರ್ ಪಿ. ನಂದ್ಯಾಲ್, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಹೇಶ್ವರಪ್ಪ, ಜಿಪಂ ಸಿಪಿಒ ಸಿ.ಎಸ್. ಗಾಯತ್ರಿ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಪ್ರೇಮನಾಥ್, ಹಿರಿಯ ನಾಗರಿಕರ ಜಿಲ್ಲಾ ಸಂಘ ಅಧ್ಯಕ್ಷ ರಂಗಪ್ಪರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ. ವೈಶಾಲಿ ಇತರರು ಇದ್ದರು.
ಸುಶಿಕ್ಷಿತರಿಂದಲೇ ವೃದ್ಧರ ನಿರ್ಲಕ್ಷ್ಯ
ಹಿರಿಯರನ್ನು ನೋಡಿಕೊಳ್ಳುವ ವಿಚಾರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ವೈರುಧ್ಯ ಕಾಣಸಿಗುತ್ತಿದೆ. ಹಳ್ಳಿಗಳಲ್ಲಿ ತಂದೆತಾಯಿಯನ್ನು ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕಾಣಬಹುದಾಗಿದೆ. ಉನ್ನತ ಶಿಕ್ಷಣ ಹಾಗೂ ಹುದ್ದೆಗಳನ್ನು ಪಡೆದ ಕೆಲವರು ನಗರಗಳಲ್ಲಿ ಹಿರಿಯರನ್ನು ದೂರವಿಡುತ್ತಿದ್ದಾರೆ ಎಂದು ಕೆ.ಜೆ. ಕಾಂತರಾಜ್ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಹಿರಿಯರಿಗೆ ಪಿಂಚಣಿ, ಬಸ್‌ಪಾಸ್, ವೈದ್ಯಕೀಯ ಚಿಕಿತ್ಸೆ ಸೇರಿ ಹಲವು ಸವಲತ್ತುಗಳನ್ನು ನೀಡುತ್ತಿದೆ. ಇವುಗಳ ಪ್ರಯೋಜನ ಪಡೆದು ನೆಮ್ಮದಿಯ ಜೀವನ ನಡೆಸಬೇಕು.
| ಕೆ.ಜೆ. ಕಾಂತರಾಜ್, ಉಪ ವಿಭಾಗಾಽಕಾರಿ.