ಕೃಷಿ ಪಂಪ್‌ಸೆಟ್ ಕೇಬಲ್ ಕಳವು ಮಾಡುತ್ತಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ರೈತರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. ಡಿಎಸ್ ಹಳ್ಳಿ ಮಲ್ಲಿಕಾರ್ಜುನ, ಕಾಂತರಾಜ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕ್ರಮಕ್ಕೆ ಒತ್ತಾಯಿಸಿ ಮನವಿ
ನಿರ್ಲಕ್ಷಿಸಿದರೆ ಪ್ರತಿಭಟನೆ ಎಚ್ಚರಿಕೆ
ಪೊಲೀಸರಿಗೆ ಮನವಿ
ಚಿತ್ರದುರ್ಗ: ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿರುವ ಈ ಬೇಸಿಗೆ ಸಂದರ್ಭದಲ್ಲಿ ಕೃಷಿ ಪಂಪ್‌ಸೆಟ್ ಕೇಬಲ್ ಕಳವು ಮಾಡುತ್ತಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಜರುಗಿಸುವಂತೆ ಒತ್ತಾಯಿಸಿ ರೈತರು ಮಂಗಳವಾರ ಪೊಲೀಸರಿಗೆ ಮನವಿ ಮಾಡಿದರು.
ಕಳೆದ ಎರಡು ದಿನಗಳಿಂದ ಡಿಎಸ್ ಹಳ್ಳಿಯಲ್ಲಿ ಪಂಪ್‌ಸೆಟ್ ಕೇಬಲ್ ಕಳ್ಳತನವಾಗಿದೆ. ಚಿತ್ರದುರ್ಗ ತಾಲೂಕು ಇಂಗಳದಾಳ್, ಡಿಎಸ್ ಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕೇಬಲ್‌ಗಳ ಕಳವು ಅಽಕವಾಗಿವೆ.
ಈ ಹಿಂದೆ ಇಂಥ ಪ್ರಕರಣಗಳಲ್ಲಿ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ದುಷ್ಕೃತ್ಯ ಮುಂದುವರಿದಿವೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಳವು ದೂರುಗಳನ್ನು ನಿರ್ಲಕ್ಷಿಸದೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಾಂತರ ಠಾಣೆ ಪಿಎಸ್‌ಐ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಡಿಎಸ್‌ಹಳ್ಳಿ ಮಲ್ಲಿಕಾರ್ಜುನ, ಕಾಂತರಾಜ್, ಆಡನೂರು ಶಿವಕುಮಾರ, ಪ್ರವೀಣ, ಲಿಂಗಬಸಪ್ಪ, ಬಾಲಾಜಿ, ವೆಂಕಟೇಶ್‌ರೆಡ್ಡಿ, ಸಂಜೀವಪ್ಪ, ಕಲ್ಲೇಶ್, ಕಲ್ಲೇಶಪ್ಪ, ಜಯಣ್ಣ, ಶಿವಮೂರ್ತಿ, ಸಿದ್ದೇಶ್, ದಿಲೀಪ, ಮಂಜುನಾಥ, ಸತೀಶ, ಉಮೇಶ, ಸಿದ್ದೇಶ ಇತರರು ಇದ್ದರು.