ಏರುತ್ತಿರುವ ಬಿಸಿಲಿಗೆ ಕಲ್ಲಂಗಡಿಗೆ ಶುರುವಾಗಿದೆ ಡಿಮ್ಯಾಂಡ್

ಚಿತ್ರದುರ್ಗದಲ್ಲಿ ಮಾರಾಟಕ್ಕಾಗಿ ದಾಸ್ತಾನು ಮಾಡಿಕೊಂಡಿರುವ ಕಲ್ಲಂಗಡಿ ಹಣ್ಣುಗಳು.
ಚಿತ್ರದುರ್ಗದಲ್ಲಿ ಮಾರಾಟಕ್ಕಾಗಿ ದಾಸ್ತಾನು ಮಾಡಿಕೊಂಡಿರುವ ಕಲ್ಲಂಗಡಿ ಹಣ್ಣುಗಳು.
Published on

ಪ್ರಮುಖ ಮುಖ್ಯಾಂಶಗಳು

  • ದುರ್ಗದ ಹಲವೆಡೆ ನಡೆದಿದೆ ವ್ಯಾಪಾರದಲ್ಲಿ ಪೈಪೋಟಿ
  • ತಮಿಳುನಾಡಿನಿಂದ ಬಂದಿದೆ ಲೋಡುಗಟ್ಟಲೆ ಹಣ್ಣು
  • ಬಿಸಿಲಿನ ತಾಪ ಏರಿಕೆ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಮಾರ್ಚ್ ತಿಂಗಳ ಶುರುವಿನಲ್ಲೇ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಕಲ್ಲಂಗಡಿ, ಕರಬೂಜ, ಕಬ್ಬಿನ ಹಾಲು ಮಾರಾಟವೂ ಬಿರುಸಾಗಿದೆ.
ಕಲ್ಲಂಗಡಿ ಹಣ್ಣುಗಳನ್ನು ದುರ್ಗದ ಹಲವು ವ್ಯಾಪಾರಸ್ಥರು ತಮಿಳುನಾಡಿನಿಂದ ಆವಕ ಮಾಡಿಕೊಳ್ಳುತ್ತಿದ್ದಾರೆ. ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ರಾಶಿಗಟ್ಟನೆ ಕಲ್ಲಂಗಡಿ ಹಣ್ಣುಗಳು ಕಣ್ಣಿಗೆ ಬೀಳುತ್ತಿವೆ. ನಿತ್ಯವೂ ಒಂದೆಡೆ ೩೦೦ ಕೆ.ಜಿ., ಮತ್ತೊಂದೆಡೆ ೫೦೦ ಕೆ.ಜಿ.ಯಂತೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
ಒಳ್ಳೆಯ ಸಿಹಿ, ಗ್ರಾಹಕರಿಗೆ ಇಷ್ಟವಾಗುತ್ತದೆಂಬ ಕಾರಣಕ್ಕೆ ರಾಮನಗರ ಹಾಗೂ ಮಂಡ್ಯದಿAದ ಕಬ್ಬು ತರಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಜತೆಗೆ ಪೈಪೋಟಿ ಕೂಡ ಇದೆ.
ಹಿಂದೆ ಬೇಸಿಗೆ ಆರಂಭದ ಮಾರ್ಚ್ ತಿಂಗಳಲ್ಲಿ ಕಲ್ಲಂಗಡಿ ಮಾರುಕಟ್ಟೆಗೆ ಬರುತಿತ್ತು. ಇತ್ತೀಚಿನ ವರ್ಷಗಳಲ್ಲಿ ವರ್ಷವಿಡೀ ಲಭ್ಯವಾಗುತ್ತಿವೆ. ಬೇಸಿಗೆ ಶುರುವಾಗುತ್ತಲೇ ವ್ಯಾಪಾರ ಜೋರಾಗುತ್ತದೆ. ಬೀದಿ ಬದಿ ಕೆಲವರು ಟೆಂಟ್‌ಗಳ ಮಾದರಿಯಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರದಲ್ಲಿ ತೊಡಗಿದ್ದಾರೆ.
ಚಿತ್ರದುರ್ಗದಲ್ಲಿ ಪ್ರವಾಸಿ ಮಂದಿರ ಮುಂಭಾಗ, ರಾಜವೀರ ಮದಕರಿನಾಯಕ ವೃತ್ತ, ಜಿ¯್ಲÁಸ್ಪತ್ರೆ ಹಾಗೂ ಚಳ್ಳಕೆರೆ ಗೇಟ್ ಸಮೀಪ, ಜಿ¯್ಲÁ ಕ್ರೀಡಾಂಗಣ ರಸ್ತೆ, ಬಿ.ಡಿ. ರಸ್ತೆ, ಹೊಳಲ್ಕೆರೆ ರಸ್ತೆ ಸೇರಿ ವಿವಿಧ ಕಡೆಗಳಲ್ಲಿ ಕಲ್ಲಂಗಡಿ, ಕಬ್ಬಿನ ಹಾಲಿನ ವ್ಯಾ ಪಾರ ಗರಿಗೆದರಿದೆ.
ಪಾದಚಾರಿಗಳು, ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು, ಆಟೋ ರಿಕ್ಷಾ ಚಾಲಕರು ಕಲ್ಲಂಗಡಿ ಹಣ್ಣುಗಳ ಮೊರೆ ಹೋಗು ವುದು ಸಾಮಾನ್ಯ. ಬಸ್ ಪ್ರಯಾಣಿಕರು ಬಳಲಿಕೆಯಿಂದ ಕಲ್ಲಂಗಡಿ, ಕಬ್ಬಿನಹಾಲು ಬಯಸುತ್ತಾರೆ. ಆದ್ದರಿಂದ ಹೊಳಲ್ಕೆರೆ, ಹೊಸದುರ್ಗ, ಶಿವಮೊಗ್ಗಕ್ಕೆ ಹೋಗುವ ಮಾರ್ಗ ಹೊಳಲ್ಕೆರೆ ರಸ್ತೆಯಲ್ಲಿ ಹಣ್ಣಿನ ಅಂಗಡಿ ತೆರೆದಿದ್ದೇವೆ ಎನ್ನುತ್ತಾರೆ ವ್ಯಾಪಾರಸ್ಥರು.
ಚೆನ್ನೆÊನಿಂದ ಕಲ್ಲಂಗಡಿ ತರಿಸಿಕೊಂಡಿದ್ದು, ದಿನಕ್ಕೆ ೨೦೦ ರಿಂದ ೪೦೦ ಕೆ.ಜಿ. ಮಾರಾಟವಾಗುತ್ತದೆ. ಇದು ನಮ್ಮ ಜೀವನೋಪಾಯಕ್ಕೆ ದಾರಿಯಾಗಿದೆ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್ ಸಾದಿಕ್.
ಉತ್ತಮ ರೀತಿಯಲ್ಲಿ ವ್ಯಾಪಾರ ನಡೆಯುತ್ತಿದೆ. ಏಪ್ರಿಲï ನಂತರ ಮತ್ತಷ್ಟು ಚುರುಕಾಗಲಿದೆ. ಮೇ ಪೂರ್ಣಗೊಳ್ಳುವವರೆಗೂ ಕಲ್ಲಂಗಡಿ ವ್ಯಾಪಾರ ಮಾಡುತ್ತೇವೆ. ಜೂನ್‌ನಿಂದ ಮಾವಿನ ಹಣ್ಣಿನ ಸೀಸನ್ ಶುರುವಾಗುತ್ತದೆ ಎನ್ನುತ್ತಾರೆ ಹಲವು ವ್ಯಾಪಾರಿಗಳು.
"

ಜನ ಬೇಸಿಗೆಯಲ್ಲಿ ಹಣ್ಣುಗಳನ್ನು ಸೇವಿಸುತ್ತಾರೆ. ಹಣ್ಣು ದೇಹಕ್ಕೆ ತಂಪು, ಶಕ್ತಿ ನೀಡುತ್ತದೆ ಎಂಬುದೇ ಇದಕ್ಕೆ ಕಾರಣ. ಇತರ ಎಲ್ಲ ಹಣ್ಣುಗಳಿಗಿಂತ ಕಲ್ಲಂಗಡಿ ಸಹಿಯೊಂದಿಗೆ ನೀರಿನ ಅಂಶ ಹೆಚ್ಚಾಗಿದ್ದು, ತಿನ್ನಲು ಹೆಚ್ಚಿ ಇಷ್ಟಪಡುತ್ತಾರೆ.

"

ವಾರಕ್ಕೆ ೫ ರಿಂದ ೧೦ ಟನ್ ಮಾರಾಟ ಮಾಡುವ ವ್ಯಾಪಾರಸ್ಥರು ಇದ್ದಾರೆ. ಬೇಸಿಗೆಯಲ್ಲಿ ಪ್ರತಿ ವಾರ ಒಂದು ಲೋಡ್ ತರಿಸಿದರೂ ಖಾಲಿಯಾಗುತ್ತಿದೆ. ತಲಾ ೧ ಕೆ.ಜಿ. ೩೦ ರೂ. ನಂತೆ ಮಾರಾಟ ಮಾಡುತ್ತಿದ್ದೇವೆ. ಚಿಲ್ಲರೆ ವ್ಯಾಪಾರವೂ ಗರಿಗೆದರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net