

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ನಗರದಲ್ಲಿ ಅ.೩ರಂದು ಜರುಗಲಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಬಂದೋಬಸ್ತ್ಗೆ ಸಂಬ AಽಸಿದAತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಎಸ್‌ಪಿ ಕುಶಾಲ್‌ಚೌಕ್ಸೆ ಅಽಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಕುರಿತಂತೆ ಅಽಕಾರಿಗಳು ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಶೋಭಾಯಾತ್ರೆಯಲ್ಲಿ ಒಂದು ಚಿಕ್ಕ ಲೋಪವೂ ಆಗಬಾರದು ಎಂದರು.
ದೊಡ್ಡ ಮಟ್ಟದಲ್ಲಿ ಜನ ಸೇರುವ ಪ್ರಮುಖ ಉತ್ಸವಗಳಲ್ಲಿ ಒಂದಾದ ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ೩-೪ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ಹಲವು ವರ್ಷಗಳಿಂದ ವಿವಿಧ ಇಲಾಖೆಗಳ ಉತ್ತಮ ಸಹಕಾರ, ಸಾರ್ವಜನಿಕರ ಸಹಭಾಗಿತ್ವದಿಂದ ಶೋಭಾಯಾತ್ರೆ ಅತ್ಯಂತ ಶಾಂತಿಯುತವಾಗಿ ನೆರವೇರುತ್ತಿದೆ. ಈ ಪರಂಪರೆ ಮುಂದುವರಿಸಲು ಪ್ರತಿ ಇಲಾಖೆ ತಮಗೆ ವಹಿಸಿದ ಜವಾಬ್ದಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದರು.
ಮೆರವಣಿಗೆ ಮಾರ್ಗಗಳಲ್ಲಿ ಶೀಘ್ರದಲ್ಲೇ ಪೋಲೀಸ್ ರೂಟ್‌ಮಾರ್ಚ್ ನಡೆಯಲಿದೆ. ಭದ್ರತೆ, ಬಂದೋಬಸ್ತ್ ಕೇವಲ ಪೊಲೀಸರಿಗೆ ಸೀಮಿತಲ್ಲ, ಪ್ರತಿ ಇಲಾಖೆಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿವಿಧ ಇಲಾಖೆಗಳ ಜವಾಬ್ದಾರಿ ಕುರಿತು ಈಗಾಗಲೇ ತಿಳಿಸಲಾಗಿದೆ. ಶೋಭಾಯಾತ್ರೆ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ವಾಚ್‌ಟವರ್ ನಿರ್ಮಾಣ, ಬ್ಯಾನರ್ ಮತ್ತು ಪ್ಲೆಕ್ಸ್ ನಿಯಂತ್ರಣ ಕ್ರಮಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಸಾರ್ವಜನಿಕ ಭದ್ರತೆ ದೃಷ್ಟಿಯಿಂದ ಲೋಕೋಪಯೋಗಿ ಹಾಗೂ ಸಾರಿಗೆ ಇಲಾಖೆಯಿಂದ ವಾಹನಗಳು ಮತ್ತು ವೇದಿಕೆಗಳ ಫಿಟ್‌ನೆಸ್ ಪ್ರಮಾಣಪತ್ರ ಕಡ್ಡಾಯ. ಪ್ರತಿ ಇಲಾಖೆ ಅಽಕಾರಿಗಳು ನಿತ್ಯ ಕೈಗೊಂಡ ಕಾರ್ಯಗಳನ್ನು ಪರಿಶೀಲಿಸಬೇಕು ಎಂದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಡಾ.ಕೆ.ಜೆ.ಕಾಂತರಾಜ್, ಜಿಪಂ ಸಿಪಿಒ ಸಿ.ಎಸ್. ಗಾಯತ್ರಿ, ಡಿವೈಎಸ್‌ಪಿ ಅರುಣ್‌ನಾಗೇಗೌಡ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಹಸೀಲ್ದಾರ್ ಬಿ.ಎಂ. ಗೋವಿಂದರಾಜ್, ನಗರಸಭೆ ಪೌರಾಯುಕ್ತೆ ಲಕ್ಷಿ÷್ಮÃ ಇತರರು ಇದ್ದರು.
ನಿರ್ದಿಷ್ಟ ಬಣ್ಣದ ಟೀಶರ್ಟ್
ಶೋಭಾಯಾತ್ರೆಯಲ್ಲಿ ಭಾಗವಹಿಸುವ ಆಯೋಜಕರು ಹಾಗೂ ಸ್ವಯಂಸೇವಕರು ನಿರ್ದಿಷ್ಟ ಬಣ್ಣದ ಟೀಶರ್ಟ್ ಧರಿಸಿರಬೇಕು. ಸ್ವಯಂ ಸೇವಕರ ಪಟ್ಟಿ ಮುಂಚಿತವಾಗಿಯೇ ಪೋಲೀಸ್ ಇಲಾಖೆಗೆ ಸಲ್ಲಿಸಬೇಕು. ಶೋಭಾಯಾತ್ರೆಗೂ ಮುನ್ನ ಅವರಿಗೆ ಸೂಕ್ತ ಬ್ರೀಫಿಂಗ್ ನೀಡಲಾಗುವುದು ಎಂದು ಎಎಸ್‌ಪಿ ಶಿವಕುಮಾರ್ ಹೇಳಿದರು.
ಬಂಟಿAಗ್ಸ್, ಪೇಪರ್ ಬ್ಲಾಸ್ಟರ್ಸ್ ಹಾಗೂ ಪಟಾಕಿ ಸಿಡಿತ ನಿಷೇಽಸಲಾಗಿದೆ. ಪೋಲೀಸ್ ಇಲಾಖೆ ಅನುಮತಿ ಇಲ್ಲದೆ ಖಾಸಗಿಯವರು ಡ್ರೋನ್ ಕ್ಯಾಮರಾ ಹಾರಿಸುವುದನ್ನು ನಿಷೇಽಸಲಾಗಿದೆ. ನಿಯಮ ಉಲ್ಲಂಘಿಸಿದರೆ ಡ್ರೋನ್ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು. ಭದ್ರತೆ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದಲೇ ೫೬ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಕಣ್ಗಾವಲು ಇಡಲಾಗುವುದು ಎಂದರು.
ಮುಖ್ಯ ರಸ್ತೆಯಲ್ಲಿ ಪ್ರಸಾದ ವಿತರಣೆ ನಿಷೇಧ
ಶೋಭಾಯಾತ್ರೆ ಸಂದರ್ಭದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ಮುಖ್ಯರಸ್ತೆಯಲ್ಲಿ ಪ್ರಸಾದ ವಿತರಣೆ ಕಡ್ಡಾಯ ನಿಷೇಽಸಲಾಗಿದೆ. ಅಡ್ಡ ರಸ್ತೆಗಳಲ್ಲಿ ವಿತರಣÉಗೆ ವ್ಯವಸ್ಥೆ ಮಾಡಬೇಕು ಎಂದು ಎಎಸ್‌ಪಿ ಶಿವಕುಮಾರ್ ತಿಳಿಸಿದರು.
ಪ್ರಸಾದ ವಿತರಣಾ ಕೌಂಟರ್‌ಗಳ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಆಹಾರ ಇಲಾಖೆ ಅಽಕಾರಿಗಳ ತಂಡ ಪ್ರಸಾದ ಗುಣಮಟ್ಟ ತಪಾಸಣೆ ನಡೆಸಿದ ನಂತರವಷ್ಟೇ ವಿತರಣೆಗೆ ಅವಕಾಶ ನೀಡಲಾಗುವುದು ಎಂದರು.
ರಾಜ್ಯದ ವಿವಿಧೆಡೆಗಳಿಂದ ಅಪಾರ ಸಂಖ್ಯೆಯಲ್ಲಿ ಯುವಜನರು, ಮಹಿಳೆಯರು ಮತ್ತು ಮಕ್ಕಳು ಆಗಮಿಸುವುದರಿಂದ ಕುಡಿಯುವ ನೀರು ಹಾಗೂ ಸೂಕ್ತ ಸ್ಥಳಗಳಲ್ಲಿ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಕಲ್ಪಿಸುವಂತೆ ಆಯೋಜಕರಿಗೆ ಎಎಸ್‌ಪಿ ಸಲಹೆ ನೀಡಿದರು.