

ಹಿರಿಯೂರು: ಅಡುಗೆ ಅನಿಲ ಪೂರೈಕೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಹಕರು ನಗರದ ಗ್ಯಾಸ್ ಏಜೆನ್ಸಿಯೊಂದರ ಮುಂದೆ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಲಿಂಡರ್ ಬುಕ್ ವಾಡಿದವರಿಗೆ ವಾರದೊಳಗೆ ಮನೆ ಬಾಗಿಲಿಗೆ ಪೂರೈಸಬೇಕೆಂಬ ನಿಯಮವಿದೆ. ಗ್ಯಾಸ್ ಏಜೆನ್ಸಿಯ ಕಳ್ಳಾಟ ಬೇಸರ ತರಿಸಿದೆ. ನಿತ್ಯ ಖಾಲಿ ಸಿಲಿಂಡರ್ ಹಿಡಿದು ಬಿಸಿಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ವಾಣವಾಗಿದೆ. ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾಸ್ ಏಜೆನ್ಸಿ ವಾಲೀಕರು ಗ್ರಾಹಕ ಸ್ನೇಹಿಯಾಗಿ ಸೇವೆ ನೀಡುತ್ತಿಲ್ಲ. ತಾಲೂಕಿನ ವಿವಿಧ ಭಾಗಗಳಿಂದ ನಿತ್ಯ ನೂರಾರು ಗ್ರಾಹಕರು ಸಿಲಿಂಡರ್‌ಗಾಗಿ ಅಲೆದಾಡುತ್ತಿದ್ದಾರೆ. ಅಲ್ಲಿಗೆ ಹೋದರೆ ದಾಸ್ತಾನು ಇಲ್ಲ ಎಂಬ ಫಲಕ ಹಾಕಿದ್ದಾರೆ. ಗ್ರಾಹಕರ ಸಂಖ್ಯೆ ಹೆಚ್ಚಾದಾಗ ಬಾಗಿಲು ಹಾಕಿಕೊಂಡು ಹೋಗುತ್ತಾರೆ ಎಂದು ಹಳ್ಳಿಯಿಂದ ಬಂದ ಗ್ರಾಹಕರೊಬ್ಬರು ಅಲವತ್ತುಕೊಂಡರು.
ಗ್ರಾಹಕರಿಗೆ ನ್ಯಾಯಯುತವಾಗಿ ತಲುಪಬೇಕಾದ ಸಿಲಿಂಡರ್ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ವಾರಾಟ ವಾಡಲಾಗುತ್ತಿದೆ. ಜನರಿಗೆ ದಾಸ್ತಾನು ಇಲ್ಲ ಎಂಬ ಸಬೂಬು ಹೇಳಿ ಸಾಗಹಾಕುತ್ತಿದ್ದಾರೆ ಎಂದು ಗ್ರಾಹಕರು ದೂರಿದರು.
ಸಕಾಲಕ್ಕೆ ಸಿಲಿಂಡರ್ ಪೂರೈಸುತ್ತಿಲ್ಲ. ನಮಗೆ ಬೇರೆ ಕಂಪನಿಗೆ ವರ್ಗಾವಣೆ ವಾಡಿಕೊಡಿ ಎಂದು ಮನವಿ ಮಾಡಿದರೂ ಸ್ಪಂದನೆ ಇಲ್ಲ. ಬುಕಿಂಗ್ ವಾಡಿ ವಾರದೊಳಗೆ ಸಿಲಿಂಡರ್ ವಿತರಿಸುವುದಾಗಿ ಏಜೆನ್ಸಿಗಳು ಹೇಳುತ್ತಿವೆ ಹಾಗೂ ಹೊಸ ಗ್ಯಾಸ್ ಸಂಪರ್ಕ ಕೇಳಿದರೆ ಒಂದು ತಿಂಗಳು ಬಿಟ್ಟು ಬನ್ನಿ ಎಂದು ಹೇಳುತ್ತಿದ್ದಾರೆ. ಗೃಹ ಬಳಕೆ ಅನಿಲ ಪೂರೈಕೆಯಲ್ಲಿ ತೊಂದರೆ ಇಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ ವಾಸ್ತವ ಬೇರೆಯೇ ಇದೆ. ಗ್ಯಾಸ್ ಸಿಲಿಂಡರ್ ಬುಕ್ ವಾಡಿದಾಗ ಏಜೆನ್ಸಿಯವರು ಗ್ರಾಹಕರಿಗೆ ಕರೆ ವಾಡಿ ಡಿಎಸ್‌ಎಸ್ ನಂಬರ್ ಪಡೆಯುತ್ತಾರೆ. ಸಕಾಲಕ್ಕೆ ಪೂರೈಕೆ ವಾಡುವುದಿಲ್ಲ, ಗ್ರಾಹಕರ ಮೇಲೆ ದಬ್ಬಾಳಿಕೆ ವಾಡುತ್ತಾರೆ. ಸಿಲಿಂಡರ್ ಯಾವಾಗ ಸಿಗುತ್ತದೆಯೋ ಎಂಬುದಕ್ಕೆ ಉತ್ತರವೂ ಸಿಗುತ್ತಿಲ್ಲ ಎಂದು ಗ್ರಾಹಕ ಶ್ರೀನಿವಾಸ್ ಹೇಳಿದರು.