ಲಂಡನ್ನಲ್ಲಿ ಸದ್ದು ಮಾಡಿದ ಚಿತ್ರದುರ್ಗ ಎಡ್‌ಲ್ಯಾಬ್

ಶೈಕ್ಷಣಿಕ ಸುಧಾರಣೆ ಕುರಿತಂತೆ ಜಿಪಂ ಸಿಇಒ ವಿಷಯ ಮಂಡನೆ
ಚಿತ್ರದುರ್ಗ ಡಯಟ್‌ನಲ್ಲಿರುವ ಎಡ್ ಲ್ಯಾಬ್ ಕಡತ ಚಿತ್ರ
ಚಿತ್ರದುರ್ಗ ಡಯಟ್‌ನಲ್ಲಿರುವ ಎಡ್ ಲ್ಯಾಬ್ ಕಡತ ಚಿತ್ರ
Published on: 

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಜಿಲ್ಲೆ ಶೈಕ್ಷಣಿಕ ಗುಣಮಟ್ಟ ಸುಧಾರಣೆ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ಚಿತ್ರದುರ್ಗ ಡಯಟ್‌ನಲ್ಲಿ ಕರ‍್ಯನಿರ್ವಹಿಸುತ್ತಿರುವ ಎಡ್ ಲ್ಯಾಬ್ ಅಂತಾರಾಷ್ಟಿçÃಯ ಮಟ್ಟದಲ್ಲಿ ಸದ್ದು ಮಾಡಿದೆ. ಅಂಕಿ-ಅAಶಗಳು, ಮೂಲ ಸೌಕರ್ಯಗಳ ವಿಶ್ಲೇಷಣೆಯೊಂದಿಗೆ ಎಸ್ಸೆಸ್ಸೆಲ್ಸಿ, ಸೆ ಕೆಂಡ್ ಪಿಯುಸಿ ಫಲಿತಾಂಶ ಸುಧಾರu ಜತೆಗೆ ಕಿರಿಯ, ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾ ರಿಸುವ ಮಹತ್ವದ ಉದ್ದೇಶದೊಂದಿಗೆ ಜಿಪಂ ಸ್ಥಾಪಿರುವ ಶೈಕ್ಷಣಿಕ ಸಂಶೋಧನೆ ಮತ್ತು ನಾವೀನ್ಯತೆ ಕೇಂದ್ರ ಉಈ ಔಅಆ ಗೆ, ರಾಜ್ಯದಲ್ಲೇ ಪ್ರಥಮ ಎಂಬ ಹೆಗ್ಗಳಿಕೆ ಇದೆ.

ಬರದ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದ ಸುಧಾರಿಸಲೇ ಬೇಕೆಂಬ ಅದ್ಯಮ ಬಯಕೆಯೊಂದಿಗೆ ಕಳೆದೊಂದು ವರ್ಷದಿಂದ ಚಿತ್ರದುಗ ðದ ಈ ಲ್ಯಾಬ್‌ಗೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ದಿ.ಡಿ.ಸುಧಾಕರ್ ಚಾಲನೆ ಕೊಟ್ಟಿದ್ದರು. ಕಳೆದ ಜುಲೈನಲ್ಲಿ ಬ್ರಿಟಿಷ್ ಕೌನ್ಸಿಲರ್ ಡಾ.ರೆಚಲ್‌ಹಿಂಟನ್ ಅವರು ಎಡ್‌ಲ್ಯಾಬ್‌ಗೆ ಭೇಟಿ ಇದರ ಕರ‍್ಯನಿರ್ವಹಣೆ ಪರಿಶೀಲಿಸಿದ್ದರು.

ಸಮ್ಮೇಳನ

ಶಿಕ್ಷಣ ಗುಣಮಟ್ಟ ಸುಧಾರಣೆ ಪೂರಕವಾಗಿ ಯುಕೆ(ಲಂಡನ್)ಯ ಆಕ್ಸ್-Àರ್ಡ್ನ ಬ್ಲಾವಟ್ನಿಕ್ ಸ್ಕೂಲ್ ಆ-ï ಗವರ್ನಮೆಂಟ್‌ನಲ್ಲಿ ಕಳೆದ ಸೆಪ್ಟೆಂಬರ್ ೧೫ರಿಂದ ೨ ದಿನಗಳ ಕಾಲ ನಡೆದ ವಾಟ್‌ವರ್ಕ್ಸ್ ಹಬ್-Áರ್ ಗ್ಲೋಬಲ್ ಎಜುಕೇಶನ್ ಕಾನರೆನ್ಸ್ನಲ್ಲಿ ಚಿತ್ರದುರ್ಗ ಜಿ ಪಂ ಸಿಇಒ ಡಾ.ಎಸ್.ಆಕಾಶ್ ಅವರು ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕ ಚಿತ್ರಣದ ಕುರಿತು ವಿಷಯ ಮಂಡಿಸಿದ್ದಾರೆ.

ಒಂದು ಸಾವಿರ ಪ್ರಬಂಧಗಳ ಪೈಕಿ, ಕರ್ನಾಟಕದಿಂದ ಚಿತ್ರದುರ್ಗ ಜಿಪಂ ಸಿಇಒ ಹಾಗೂ ಜಾರ್ಖಾಂಡ್, ಓರಿಸ್ಸಾ, ತಮಿಳುನಾಡು, ಉತ್ತರ ಪ್ರದೇಶ ಸಹಿತ ಭಾರತದ ಏಳೆಂಟು ರಾಜ್ಯಗಳ ಪ್ರತಿನಿಽಗಳ ೨೫ ಪ್ರಬಂಧಗಳು ಸಮ್ಮೇಳನದಲ್ಲಿ ಮಂಡಿಸಲು ಆಯ್ಕೆಯಾಗಿದ್ದವು. ಬ್ರಿಟಿಷ್ ಕೌನ್ಸಿಲ್, ಏಷಿಯಾ ಡೆವಲಪ್‌ಮೆಂಟ್ ಬ್ಯಾಂಕ್, ವಿಶ್ವ ಬ್ಯಾಂಕ್ ಮತ್ತಿತರ ಸಂಸ್ಥೆಗಳು ಗ್ಲೋಬಲ್ ಸೌತ್‌ನಲ್ಲಿ ಮೂಲ ಕಲಿಕಾ ನೀತಿಗಳ ಅನ್ವೇಷಣೆ, ಕರ‍್ಯಕ್ರಮಗಳ ಅನುಷ್ಠಾನ ಮೂಲಕ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಪೂಕರವಾಗಿ ಈ ಸಮ್ಮೇಳನ ಜರುಗಿದೆ.

ಜೆ-ಪಾಲ್ ಸಂಶೋಧನಾ ಸಂಸ್ಥೆ, ಪ್ರಥಮ್, ಓದು ಕರ್ನಾಟಕ ಮತ್ತಿತರ ಸಂಸ್ಥೆಗಳು, ಕರ‍್ಯಕ್ರಮಗಳು ಚಿತ್ರದುರ್ಗ ಎಡ್‌ಲ್ಯಾಬ್ ಕಾ ರ‍್ಯ ನಿರ್ವಹಣೆಗೆ ಕೈ ಜೋಡಿಸಿವೆ. ಡಯಟ್ ಉಪನ್ಯಾಸಕರು, ಶಿಕ್ಷಣ ಪೂರಕ ಇಲಾಖೆಗಳ ನೆರವು, ನಿಯೋಜನೆ ಇರುವ ಎಡ್‌ಲ್ಯಾಬ್ ನಲ್ಲಿ ಜಿಲ್ಲೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರ ಸಂಖ್ಯೆ, ಮೂಲ ಸೌಕರ್ಯ, ಫಲಿತಾಂಶ, ಕಲಿಕಾ ಗುಣಮಟ್ಟ ಮತ್ತಿತರ ವಿಷಯ ಅಂಕಿ ಅಂಶಗಳ ವಿಶ್ಲೇಷಣೆಯೊಂದಿಗೆ ಗುಣಮಟ್ಟ ಸುಧಾರಣೆಗೆ ತೆಗೆದುಕೊಳ್ಳ ಬೇಕಾದ ಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ನಮ್ಮ ದೇಶದಲ್ಲಿ ಎಸ್ಸೆಸ್ಸೆಲ್ಸಿ, ಸೆಕೆಂಡ್ ಪಿಯುಸಿ ಫಲಿತಾಂಶಕ್ಕೆ ಅತ್ಯಂತ ಮಹತ್ವವಿದೆ. ಸರ್ಕಾರಿ ಉದ್ಯೋಗಗಳಿಗೆ ನೆರವಾಗುವ ಈ ಫಲಿ ತಾಂಶಗಳ ಸುಧಾರಣೆಗೆ ಆದ್ಯತೆ ಅನಿವರ‍್ಯವಾಗಿದೆ. ಗಣಿತ ಸಹಿತ ವಿವಿಧ ವಿಷಯಗಳ ಕಲಿಕೆಗೆ ಒತ್ತು ಕೊಡುವ ಮೂಲಕ ೪, ೫ನೇ ತರಗತಿ ವಿದ್ಯಾರ್ಥಿಗಳು ೧೦ನೇ ತರಗತಿಗೆ ಬಂದಾಗ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂಥ ವಾತಾವರಣ ನಿರ್ಮಿಸುವ ಉದ್ದೇಶವೂ ಇದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹೋಮ್‌ವರ್ಕ್, ಕಲಿಕಾ ಚಟುವಟಿಕೆಗಳ ಕುರಿತಂತೆ ಶಿಕ್ಷಕರು ಪಾಲಕರನ್ನು ಕನಿಷ್ಠ ವಾರಕ್ಕೆ ಒಮ್ಮೆ ದೂರ ವಾಣಿ ಮೂಲಕ ಮಾಹಿತಿ ಪಡೆಯುವ ಕರ‍್ಯವೂ ನಡೆಯುತ್ತಿದೆ.

ಡೇಟಾ ಎಂಟ್ರಿ ಆಫರೇರ‍್ಸ್

ಸರ್ಕಾರಿ ಶಾಲೆ ಶಿಕ್ಷಕರು ವರ್ಷದಲ್ಲಿ ೨೦೦-೨೫೦ ಗಂಟೆ ತರಗತಿ ಸಮಯವನ್ನು ನಾನ್‌ಆಕಾಡೆಮಿಕ್ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿರು ವುದು ಎಡ್‌ಲ್ಯಾಬ್ ಗುರುತಿಸಿದೆ. ಇದನ್ನು ತಪ್ಪಿಸಲು ಈ ಲ್ಯಾಬ್ ಶಿಫಾರಸಿನಂತೆ ಸರ್ಕಾರಿ ಶಾಲೆಗಳಿಗೆ ಡೇಟಾ ಎಂಟ್ರಿ ಆಫರೇರ‍್ಸ್ ನೇ ಮಕಕ್ಕೆ ಸರ್ಕಾರ ಮುಂದಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೆಎಂಆರ್‌ಸಿ ಅನುದಾನ ಪಡೆಯಲು ಚಿಂತನೆ ನಡೆದಿದೆ. ರಾಜ್ಯಸರ್ಕಾರ ಮೊ ದಲ ಹಂತದಲ್ಲಿ ಕೆಪಿಎಸ್ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಶಾಲೆಗಳಿಗೆ ಡೆಡಾ ಎಂಟ್ರಿ ಆಪರೇರ‍್ಸ್ ನೇಮಕಕ್ಕೆ ಮುಂದಾಗಿದೆ ಎನ್ನಲಾಗಿದೆ.

ಕೋಟ್ ಲಂಡನ್‌ನಲ್ಲಿ ಈಚೆಗೆ ಆಯೋಜಿಸಿದ್ದ ವಾಟ್‌ವರ್ಕ್ಸ್ಹಬ್ -Áರ್ ಗ್ಲೋಬಲ್ ಎಜುಕೇಶನ್ ಕಾನರೆನ್ಸ್ನಲ್ಲಿ ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕ ಚಿತ್ರಣ ಕುರಿತು ವಿಷಯ ಮಂಡಿಸಿದ್ದೇನೆ.
ಡಾ.ಎಸ್.ಆಕಾಶ್,ಸಿಇಒ, ಜಿಪಂ ,ಚಿತ್ರದುರ್ಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net