ಚಳ್ಳಕೆರೆ ಹೋಟೆಲ್ ಮಾಲೀಕರಿಗೆ ಕಿರುಕುಳ: ಹಣಕ್ಕಾಗಿ ಬೆದರಿಕೆ

ಚಳ್ಳಕೆರೆ ನಗರದಲ್ಲಿ ಹೋಟೆಲ್ ಮಾಲೀಕರ ಮೇಲೆ ಕಿಡಿಗೇಡಿಗಳ ದೌರ್ಜನ್ಯ ಹೆಚ್ಚಾಗಿದೆ ಎಂದು ಆರೋಪಿಸಿ ಶನಿವಾರ ಮಾಲೀಕರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿದರು.
ಚಳ್ಳಕೆರೆ ನಗರದಲ್ಲಿ ಹೋಟೆಲ್ ಮಾಲೀಕರ ಮೇಲೆ ಕಿಡಿಗೇಡಿಗಳ ದೌರ್ಜನ್ಯ ಹೆಚ್ಚಾಗಿದೆ ಎಂದು ಆರೋಪಿಸಿ ಶನಿವಾರ ಮಾಲೀಕರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಚಳ್ಳಕೆರೆ ನಗರದ ಹೋಟೆಲ್ ಮತ್ತು ಬೇಕರಿ ಮಾಲೀಕರಿಗೆ ಅಪರಿಚಿತ ಕಿಡಿಗೇಡಿಗಳ ಗುಂಪಿನಿಂದ ಕಿರುಕುಳ ಹೆಚ್ಚಳ
  • 'ಕಳಪೆ ಗುಣಮಟ್ಟ' ಮತ್ತು 'ಸ್ವಚ್ಛತೆ ಇಲ್ಲ' ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡುವ ಬೆದರಿಕೆ
  • ಬಿ.ಎನ್. ಗುರುನಾಥ್ ನೇತೃತ್ವದಲ್ಲಿ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಕೆ
ಚಳ್ಳಕೆರೆ:ನಗರದಲ್ಲಿಹೋಟೆಲ್ ಮತ್ತು ಬೇಕರಿ ಅಂಗಡಿಗಳನ್ನುನಡೆಸುತ್ತಿರುವ ಮಾಲೀಕರು ಹಾಗೂಸಿಬ್ಬಂದಿಗೆ ಅಪರಿಚಿತ ಕಿಡಿಗೇಡಿಗಳಕಿರುಕುಳ ಮಿತಿಮೀರಿದೆ ಎಂದುಆರೋಪಿಸಿ, ತಾಲೂಕುಹೋಟೆಲ್ ಮತ್ತು ಬೇಕರಿ ಮಾಲೀಕರಸಂಘದ ಪದಾಧಿಕಾರಿಗಳು ಶನಿವಾರತಹಸೀಲ್ದಾರ್ ರೇಹಾನ್ ಪಾಷಾಅವರಿಗೆ ಮನವಿ ಸಲ್ಲಿಸಿದರು.
ಸಂಘದಅಧ್ಯಕ್ಷರಾದ ಬಿ.ಎನ್.ಗುರುನಾಥ್ಅವರು ಮಾತನಾಡಿ,"ನಗರದ ಹೋಟೆಲ್ಮತ್ತು ಬೇಕರಿಗಳಿಗೆ ಅಪರಿಚಿತವ್ಯಕ್ತಿಗಳ ಗುಂಪುಗಳು ಬರುತ್ತಾರೆ.ಅಂಗಡಿಗಳಲ್ಲಿಸ್ವಚ್ಛತೆ ಇಲ್ಲ,ಕಳಪೆ ಆಹಾರಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆಎಂದು ವಿನಾಕಾರಣ ಆರೋಪಿಸುತ್ತಾರೆ.ತಕ್ಷಣವೇ ಈಕುರಿತು ಸಾಮಾಜಿಕ ಜಾಲತಾಣಗಳಲ್ಲಿಪ್ರಕಟಿಸಿ ಅಂಗಡಿಗಳನ್ನುಮುಚ್ಚಿಸುವುದಾಗಿ ಬೆದರಿಕೆಹಾಕಿ, ಹಣನೀಡುವಂತೆ ಒತ್ತಾಯಿಸುತ್ತಿದ್ದಾರೆ,"ಎಂದು ತಹಸೀಲ್ದಾರ್ಅವರ ಗಮನಕ್ಕೆ ತಂದರು
ಈ ರೀತಿಯ ಕಿಡಿಗೇಡಿಗಳವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಮನವಿಮಾಡಿದರು.

ಗುಣಮಟ್ಟಪರಿಶೀಲನೆಗೆ ಒತ್ತಾಯ

ಇದೇಸಂದರ್ಭದಲ್ಲಿ,ಯಾವುದೇ ಗೊಂದಲಗಳಿಗೆಆಸ್ಪದ ನೀಡದಂತೆ,ನಗರಸಭೆಯಿಂದವಾರಕ್ಕೊಮ್ಮೆ ಸ್ವಚ್ಛತೆಯಪರಿಶೀಲನೆ ಮತ್ತು ಹೋಟೆಲ್‌ಗಳಲ್ಲಿಬಳಸುವ ಆಹಾರ ಪದಾರ್ಥಗಳ ಗುಣಮಟ್ಟಪರೀಕ್ಷೆ ನಡೆಸುವಂತೆ ಸಂಘದವತಿಯಿಂದ ಒತ್ತಾಯಿಸಲಾಯಿತು.
ಮನವಿಸ್ವೀಕರಿಸಿದ ತಹಸೀಲ್ದಾರ್ ರೇಹಾನ್ಪಾಷಾ ಅವರು ಕೂಡಲೇ ಕ್ರಮ ಕೈಗೊಳ್ಳುವಭರವಸೆ ನೀಡಿದರು.
ಹೋಟೆಲ್ ಮತ್ತುಬೇಕರಿಗಳ ಬಳಿ ಯಾವುದೇ ಸಾರ್ವಜನಿಕರುಅಥವಾ ಸಂಘ-ಸಂಸ್ಥೆಗಳಹೆಸರು ಹೇಳಿಕೊಂಡು ಹೋಗದಂತೆನೋಡಿಕೊಳ್ಳಲು ನಗರಸಭೆ ಪೌರಾಯುಕ್ತಎಚ್.ಜಿ.ಜಗರೆಡ್ಡಿಅವರಿಗೆ ಸೂಚಿಸಿದರು
ಅಲ್ಲದೆ,ಸ್ವಚ್ಛತೆ ಮತ್ತುಆಹಾರದ ಗುಣಮಟ್ಟದ ಕುರಿತು ಪರಿಶೀಲನೆಮಾಡಲು ಸಾರ್ವಜನಿಕರು ನಗರಸಭೆಗೆಮನವಿ ನೀಡುವಂತೆ ಜಾಗೃತಿ ಮೂಡಿಸಲುಸೂಕ್ತ ಕ್ರಮ ವಹಿಸುವಂತೆಪೌರಾಯುಕ್ತರಿಗೆ ನಿರ್ದೇಶನನೀಡಿದರು.
ಮನವಿಸಲ್ಲಿಸುವಾಗ ಸಂಘದ ಕಾರ್ಯದರ್ಶಿಜಯಪ್ರಕಾಶ್ ಶೆಟ್ಟಿ,ಹರೀಶ್,ಕಿಶೋರ್ ಶೆಟ್ಟಿ,ಜೀವನ್ ಶೆಟ್ಟಿಸೇರಿದಂತೆ ಇತರ ಪದಾಧಿಕಾರಿಗಳುಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net