ಬಸ್ ಬೆಂಕಿಗೆ ಆಹುತಿ

ಪ್ರಯಾಣಿಕರು ಅಪಾಯದಿಂದ ಪಾರು
Fire Accident
ಅಗ್ನಿ ದುರಂತದಿಂದ ಸುಟ್ಟುಹೋದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್.Fire Accident
Published on: 

ಭರಮಸಾಗರ: ಸಮೀಪದ ಕಾತ್ರಾಳು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಾಜಹಂಸ ಬಸ್‌ನಲ್ಲಿ ಅಗ್ನಿ ದುರಂತ ಸಂಭವಿಸಿ ಸಂಪೂರ್ಣ ಸುಟ್ಟಿರುವ ಘಟನೆ ಶನಿವಾರ ನಡೆದಿದೆ. ಚಿತ್ರದುರ್ಗ ಘಟಕಕ್ಕೆ ಸೇರಿದ ರಾಜಹಂಸ ಬಸ್ ಚಿತ್ರದುರ್ಗದಿಂದ ದಾವಣಗೆರೆಗೆ ಸಂಚರಿಸುವ ವೇಳೆ ಕಾತ್ರಾಳು ಗ್ರಾಮ ಬಳಿ ಬಂದಾಗ ಏಕಾಏಕಿ ಆಯಿಲ್ ವಾಸನೆ ಬಂದಿದೆ. ಇದನ್ನು ಗಮನಿಸಿದ ಬಸ್ ಚಾಲಕ ಬಸ್ ಬದಿಗೆ ಹಾಕಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಪ್ರಯಾಣಿಕರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಬಸ್ ಆವರಿಸಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಅಷ್ಟರಲ್ಲಾಗಲೇ ಬಸ್ ಸಂಪೂರ್ಣ ಸುಟ್ಟಿತ್ತು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಚಾಲಕನ ಸಮಯ ಪ್ರಜ್ಞೆ

ಬಸ್‌ನಲ್ಲಿ 42 ಪ್ರಯಾಣಿಕರಿದ್ದರು. ಚಾಲಕನಿಗೆ ಆಯಿಲ್ ವಾಸನೆ ಬಂದ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕನ ಸಮಯ ಪ್ರಜ್ಞೆಯಿಂದ ಅನೇಕರು ಅಪಾಯದಿಂದ ಪಾರಾಗಿದ್ದಾರೆ.