ಐಮಂಗಲ ಕೆರೆಗೆ ಭದ್ರೆಯಿಂದ ಜೀವಕಳೆ

ಅಪ್ಪರ್​ ಭದ್ರಾ ಹೋರಾಟ ಸಮಿತಿ ಹಾಗೂ ಗ್ರಾಮಸ್ಥರಿಂದ ಗಂಗಾಪೂಜೆ
Lake
ಐಮಂಗಲದ ದೊಡ್ಡಕೆರೆ ಕೋಡಿ ಬಿದ್ದ ಪ್ರಯುಕ್ತ ಅಪ್ಪರ್​ ಭದ್ರಾ ಹೋರಾಟ ಸಮಿತಿ ಹಾಗೂ ಗ್ರಾಮಸ್ಥರಿಂದ ಗಂಗಾಪೂಜೆ ಸಲ್ಲಿಸಲಾಯಿತು. ಎನ್​. ತಿಪ್ಪೀರಯ್ಯ, ಡಿ.ಆರ್​. ಆನಂದ್​, ಸಿ. ರಾಧಾಕೃಷ್ಣ, ವಾಣಿ ಇತರರು ಇದ್ದರು.Lake
Published on: 

ಐಮಂಗಲ: ಹೋಬಳಿ ಜನರ ಬಹುದಿನಗಳ ಕನಸಾಗಿದ್ದ ಅಪ್ಪರ್​ ಭದ್ರಾ ಯೋಜನೆಯಡಿ ಗ್ರಾಮದ ದೊಡ್ಡಕೆರೆಗೆ ನೀರು ಹರಿದು ಕೋಡಿ ಬಿದ್ದಿದ್ದು, ಶುಕ್ರವಾರ ಗಂಗಾಪೂಜೆ ಸಲ್ಲಿಸಲಾಯಿತು.

ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದರು. ಬೆಳೆ ಹಾನಿ ಜತೆಗೆ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಈ ಭಾಗದ ಜನರಿಗೆ ಅಪ್ಪರ್​ ಭದ್ರಾ ಯೋಜನೆ ಆಶಾಕಿರಣವಾಗಿತ್ತು. ಟಿ. ರುಮೂರ್ತಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಸೆ.6ರಂದು ಭದ್ರಾ ಜಲಾಶಯದಿಂದ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಹಲವು ತಾಂತ್ರಿಕ ಸಮಸ್ಯೆ ಎದುರಾದರೂ ಹೋಬಳಿಯ ಗೌನಹಳ್ಳಿ, ಮೇಟಿಕುರ್ಕೆ, ಐಮಂಗಲ ಕೆರೆಗಳು ಹಾಗೂ ಮೇಲ್ಭಾಗದ ಚೆಕ್​ಡ್ಯಾಂಗಳಿಗೆ ನೀರು ತಲುಪಿದೆ. ಗ್ರಾಮದ ದೊಡ್ಡಕೆರೆ ಕೋಡಿ ಬಿದ್ದ ಪ್ರಯುಕ್ತ ಅಪ್ಪರ್​ ಭದ್ರಾ ಹೋರಾಟ ಸಮಿತಿ ಹಾಗೂ ಗ್ರಾಮಸ್ಥರು ಗಂಗಾಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಮಿತಿ ಯಶವಂತ್​ರಾಜ್​ ಮಾತನಾಡಿ, ಸಿಎಂಗೆ ಹೋಬಳಿಯ ಬರಗಾಲದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡ ಲಾಗಿತ್ತು. ಜನಪ್ರತಿನಿಧಿಗಳು ಹಾಗೂ ಭದ್ರಾ ಜಲನಿಗಮದ ಅಧಿಕಾರಿಗಳ ಸಹಕಾರದಿಂದ ಹೋಬಳಿಯ ಕೆರೆಗಳಿಗೆ ಭದ್ರೆ ಹರಿಯುತ್ತಿರುವುದು ಸಂಸದ ತಂದಿದೆ ಎಂದು ತಿಳಿಸಿದರು.

ವಾಣಿ, ಎಂ.ಟಿ. ದೀಪು, ಎಂ.ಕೆ.ಬಿ. ಪಟೇಲ್​, ಸಿ. ರಾಧಾಕೃಷ್ಣ, ಟಿ. ತಿಮ್ಮಣ್ಣ, ಎಚ್​.ಜೆ. ಕಾಂತರಾಜು, ಎಸ್​. ಮಹೇಶ್ವರಪ್ಪ, ಕೆ.ಜಿ. ಕರಿಯಪ್ಪ, ದೇವರಾಜು, ಮಲ್ಲಿಕಾರ್ಜುನ, ಬಿ.ಟಿ. ಶಾಂತಣ್ಣ, ದಿವಾಕರ, ಪಿ.ವಿ. ರಾಧಾಕೃಷ್ಣ ಇತರರು ಇದ್ದರು.

ಬಾಕಿ ಕೆರೆಗಳು

ಐಮಂಗಲ ಚಿಕ್ಕಕೆರೆ, ತಾಳವಟ್ಟಿ, ಬಸಪ್ಪನಮಾಳಿಗೆ, ಎಂ.ಡಿ. ಕೋಟೆ, ಸೂರಗೊಂಡನಹಳ್ಳಿ, ತವಂದಿ ಗ್ರಾಮದ ಕೆರೆಗಳಿಗೆ ನೀರು ಹರಿ ಯುವುದು ಬಾಕಿ ಇದೆ.

ನಮ್ಮೂರ ಕೆರೆಗೆ ನೀರು ಬಂತು..

ಹಲವು ಗ್ರಾಮಗಳ ಜನರು ಕೆಲ ದಿನಗಳಿಂದ ಕೆರೆಗೆ ನೀರು ಬರುತ್ತಿರುವುದನ್ನು ಪದೇಪದೆ ವೀಸುತ್ತಿದ್ದರು. ಕೆರೆ ಕೋಡಿ ಬೀಳುವ ಹಂತದಲ್ಲಿದೆ ಎಂದು ತಿಳಿದು ರಾತ್ರಿಯಿಡೀ ಕೆರೆ ಬಳಿ ಕಾದು ಕುಳಿತಿದ್ದರು. ಕೋಡಿ ಬಿದ್ದ ತಕ್ಷಣ ಮೊಬೈಲ್​ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನಮ್ಮೂರ ಕೆರೆಗೆ ನೀರು ಬಂದಿದೆ ಎಂದು ಸಂತಸ ಹಂಚಿಕೊಂಡರು.

ಮಳೆಯಿಂದ 2022ರಲ್ಲಿ ಕೆರೆ ಕೋಡಿ ಬಿದ್ದಿತ್ತು. ಈ ಬಾರಿ ಮಳೆಯಿಲ್ಲವಾದರೂ ಭದ್ರಾ ನೀರು ಹರಿದು ಕೆರೆ ಕೋಡಿ ಬಿದ್ದಿದೆ. ಇದು ಹೋಬಳಿಯ ರೈತರು, ಜನಪ್ರತಿನಿಧಿಗಳ ಹೋರಾಟಕ್ಕೆ ಸಂದ ಫಲ.
ಡಿ.ಆರ್​. ಆನಂದ್​ ತಾಳವಟ್ಟಿ
ಭದ್ರೆಯ ನೀರು ಹೋಬಳಿಯ ಕೆರೆಗೆಳಿಗೆ ತಲುಪುತ್ತಿರುವುದು ಸಂತಸ ತಂದಿದೆ. ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು, ಸಹಕರಿಸಿದ ಎಲ್ಲ ರೈತರಿಗೆ ಕೃತತೆ ಸಲ್ಲಿಸುವೆ.
ಎನ್​. ತಿಪ್ಪೀರಯ್ಯ ಅಧ್ಯಕ್ಷ, ಅಪ್ಪರ್​ ಭದ್ರಾ ಹೋರಾಟ ಸಮಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net