ಭವಿಷ್ಯದ ಕೋಟೆನಾಡಿಗೆ ಹೊಸ ನೀಲಿನಕ್ಷೆ

ಕುಡಾ ಮಹಾಯೋಜನೆಗೆ ತಾತ್ಕಾಲಿಕ ಒಪ್ಪಿಗೆ
ಭವಿಷ್ಯದ ಕೋಟೆನಾಡಿಗೆ ಹೊಸ ನೀಲಿನಕ್ಷೆ
ಕೂಡಾ ಕಚೇರಿ
Published on: 

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಕೋಟೆನಾಡು ಚಿತ್ರದುರ್ಗದ ಅಭಿವÊದ್ಧಿಗೆ ಈಗ ಹೊಸ ವೇಗ ಸಿಗುವ ನಿರೀಕ್ಷೆ ಮೂಡಿದೆ. ಚಿತ್ರದುರ್ಗ ನಗರಾಭಿವÊದ್ಧಿ ಪ್ರಾಽಕಾರ (ಕುಡಾ) ಸಿದ್ಧಪಡಿಸಿರುವ ಮಹತ್ವಾಕಾಂಕ್ಷೆಯ ಮಹಾಯೋಜನೆ-೦೨ಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದೆ. ೨೦೪೧ರ ವೇಳೆಗೆ ನಗರದ ಜನಸಂಖ್ಯೆ, ವಿಸ್ತರಣೆ ಹಾಗೂ ಮೂಲಸೌಕರ್ಯಗಳ ಅಗತ್ಯಗಳ ಅಂದಾಜಿನಲ್ಲಿ ರೂಪಿಸಿರುವ ಈ ಯೋಜನೆ, ಕೋಟೆನಾಡಿನ ಭವಿಷ್ಯಕ್ಕೆ ಹೊಸ ದಿಕ್ಸೂಚಿಯಾಗುವ ನಿರೀಕ್ಷೆಯಿದೆ.

ಮುಂದಿನ ಎರಡು ದಶಕಗಳಲ್ಲಿ ಎದುರಾಗಬಹುದಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಬರೋಬ್ಬರಿ ೩೦,೯೮೯ ಹೆಕ್ಟೇರ್ ವ್ಯಾಪ್ತಿಯ ಭೂ ಬಳಕೆ ನಕ್ಷೆ ಸಿದ್ಧಪಡಿಸಿದ್ದು, ವಸತಿ, ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಉದ್ದೇಶ, ಉದ್ಯಾನವನ, ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಗಳನ್ನು ಇದರಲ್ಲಿ ಗುರುತಿಸಲಾಗಿದೆ.

ರಾಜ್ಯದ ೩೩ ನಗರಾಭಿವೃದ್ಧಿ ಪ್ರಾಽಕಾರಗಳ ಪೈಕಿ ೨೦ಕ್ಕೂ ಹೆಚ್ಚು ಪ್ರಾಽಕಾರಗಳು ಹೊಸ ಮಾಸ್ಟರ್ ಪ್ಲ್ಯಾನ್‌ಗಳ ಜಾರಿಗೆ ಮುಂದಾಗಿವೆ. ಈ ಸಾಲಿನಲ್ಲಿ ಚಿತ್ರದುರ್ಗ ಕುಡಾ ಸಿದ್ಧಪಡಿಸಿರುವ ಮಹಾಯೋಜನೆ-೦೨ಕ್ಕೂ ಕಳೆದ ಆಗಸ್ಟ್ ೧೪ರಂದು ಸರ್ಕಾರ ತಾತ್ಕಾಲಿಕ ಒಪ್ಪಿಗೆ ನೀಡಿದೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲು ನೀಡಲಾಗಿದ್ದ ಎರಡು ತಿಂಗಳ ಕಾಲಾವಽ ಇದೀಗ ಪೂರ್ಣಗೊಂಡಿದೆ. ಆಕ್ಷೇಪಣೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ಬಾಕಿಯಿದೆ. ಬಳಿಕ ಪ್ರಾಽಕಾರದ ಸಭೆಯಲ್ಲಿ ಆಕ್ಷೇಪಣೆಗಳನ್ನು ಮಂಡಿಸಿ ಚರ್ಚಿಸಿ, ಅಗತ್ಯ ನಿರ್ಣಯ ಕೈಗೊಂಡ ನಂತರ ಅಂತಿಮ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಕುಡಾ ಮೂಲಗಳು ತಿಳಿಸಿವೆ.

ನಗರದ ವಿಸ್ತರಣೆಗೆ ಹೊಸ ವೇಗ

ಚಿತ್ರದುರ್ಗ ನಗರದ ಅಭಿವÊದ್ಧಿಯ ಇತಿಹಾಸದಲ್ಲಿ ಮಹಾಯೋಜನೆ-೦೨ ಮಹತ್ವದ ಮೈಲಿಗಲ್ಲಾಗುವ ಸಾಧ್ಯತೆಯಿದೆ. ೨೦೦೯ರಿಂದ ೨೦೨೧ರ ಅವಽಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ್ದ ಮಹಾಯೋಜನೆ- ೦೧ಕ್ಕೆ ೨೦೦೯ರಲ್ಲಿ ಅನುಮೋದನೆ ದೊರೆತಿತ್ತು. ನಿಯಮದಂತೆ ನಿಗದಿತ ಅವಽಯ ನಂತರ ಹೊಸ ಯೋಜನೆ ಜಾರಿಯಾಗಬೇಕಿದ್ದರೂ, ವಿವಿಧ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಅದು ವಿಳಂಬವಾಗಿತ್ತು.

ಇದಕ್ಕೂ ಮೊದಲು ೧೯೮೮ರಲ್ಲಿ ಸಿಡಿಪಿ (ಸಿಟಿ ಡೆವಲಪ್‌ಮೆಂಟ್ ಪ್ಲಾನ್) ಹಾಗೂ ಅದಕ್ಕೂ ಹಿಂದಿನ ಅವಽಯಲ್ಲಿ ಒಡಿಪಿ (ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲಾನ್) ಆಧರಿಸಿ ನಗರಾಭಿವÊದ್ಧಿ ಪ್ರಾಽಕಾರ ಕಾರ್ಯನಿರ್ವಹಿಸುತ್ತಿತ್ತು.

ಹಳೆಯ ಯೋಜನೆಯ ಮಿತಿಗಳನ್ನು ಮೀರಿ, ನಗರದ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಹೊಸ ನೀಲನಕ್ಷೆ ರೂಪಿಸುವ ಪ್ರಯತ್ನ ಈಗ ಸಾಕಾರಗೊಳ್ಳುವ ಹಂತ ತಲುಪಿದೆ. ೨೦೩೧ರ ಬದಲಿಗೆ ೨೦೪೧ರವರೆಗಿನ ಅವಽಯನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಿರುವ ಈ ಯೋಜನೆ ಜಾರಿಯಾದರೆ, ನಗರದ ವಿಸ್ತರಣೆ, ಭೂ ಬಳಕೆ ಹಾಗೂ ಮೂಲಸೌಕರ್ಯ ಅಭಿವÊದ್ಧಿಗೆ ವ್ಯವಸ್ಥಿತ ರೂಪ ಸಿಗಲಿದೆ ಎಂಬ ನಿರೀಕ್ಷೆಯಿದೆ.

೧೧ ಪಟ್ಟು ಹೆಚ್ಚಿದ ಯೋಜನಾ ವ್ಯಾಪ್ತಿ!

ಒಂದು ನಗರದ ಬೆಳವಣಿಗೆ ಕೇವಲ ಕಟ್ಟಡಗಳು ಮತ್ತು ಬಡಾವಣೆೆಗಳ ನಿರ್ಮಾಣಕ್ಕೆ ಸೀಮಿತವಾಗಬಾರದು. ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಸತಿ, ವಾಣಿಜ್ಯ, ಕೈಗಾರಿಕೆ, ರಸ್ತೆ, ಉದ್ಯಾನವನ ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಸೂಕ್ತ ಭೂಮಿಯನ್ನು ಮುಂಚಿತವಾಗಿಯೇ ಗುರುತಿಸುವುದು ಮಹಾಯೋಜನೆಯ ಉದ್ದೇಶ.

೨೦೦೯ರ ಮಹಾಯೋಜನೆಯಲ್ಲಿ ೨,೬೮೩ ಹೆಕ್ಟೇರ್ ವಿಸ್ತೀರ್ಣಕ್ಕೆ ಭೂ ಬಳಕೆ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಸಿದ್ಧಪಡಿಸಿರುವ ಮಹಾಯೋಜನೆ-೦೨ರಲ್ಲಿ ಬರೋಬ್ಬರಿ ೩೦,೯೮೯ ಹೆಕ್ಟೇರ್ ವಿಸ್ತೀರ್ಣವನ್ನು ಯೋಜನಾ ವ್ಯಾಪ್ತಿಗೆ ಒಳಪಡಿಸಿ ಉದ್ದೇಶಿತ ಭೂ ಬಳಕೆ ನಕ್ಷೆ ರೂಪಿಸಲಾಗಿದೆ.

ಹಳೆಯ ಯೋಜನೆಗೆ ಹೋಲಿಸಿದರೆ ಹೊಸ ಯೋಜನೆಯ ವ್ಯಾಪ್ತಿ ಸುಮಾರು ೧೧.೫೫ ಪಟ್ಟು ಹೆಚ್ಚಾಗಿದೆ. ಇದು ಚಿತ್ರದುರ್ಗ ನಗರದ ಭವಿಷ್ಯದ ವಿಸ್ತರಣೆಯ ದೃಷ್ಟಿಯಿಂದ ಮಹತ್ವದ ಬದಲಾವಣೆಯಾಗಿದೆ.

ನಗರದ ಬೆಳವಣಿಗೆಗೆ ಪೂರಕ

ವಸತಿ ವಲಯ: ಭವಿಷ್ಯದ ಜನಸಂಖ್ಯೆಗೆ ಅನುಗುಣವಾಗಿ ವಸತಿ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿಗೆ ಅವಕಾಶ ಕಲ್ಪಿಸುವುದು.

ವಾಣಿಜ್ಯ ವಲಯ: ವ್ಯಾಪಾರ, ವಹಿವಾಟು ಹಾಗೂ ಇತರ ವಾಣಿಜ್ಯ ಚಟುವಟಿಕೆಗಳಿಗೆ ಸೂಕ್ತ ಪ್ರದೇಶಗಳನ್ನು ಮೀಸಲಿಡುವುದು.

ಕೈಗಾರಿಕಾ ವಲಯ: ಕೈಗಾರಿಕೆಗಳ ಸ್ಥಾಪನೆ ಹಾಗೂ ವಿಸ್ತರಣೆÉಗೆ ಅನುಕೂಲವಾಗುವ ಪ್ರದೇಶಗಳನ್ನು ಗುರುತಿಸುವುದು.

ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ವಲಯ: ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸೇವಾ ಸಂಸ್ಥೆಗಳು ಹಾಗೂ ಇತರ ಸೌಲಭ್ಯಗಳಿಗೆ ಅಗತ್ಯ ಜಾಗ ನಿಗದಿಪಡಿಸುವುದು.

ಉದ್ಯಾನ ಮತ್ತು ಬಯಲು ಪ್ರದೇಶ: ನಗರದ ಪರಿಸರ ಸಮತೋಲನ ಹಾಗೂ ಜನರ ಅನುಕೂಲಕ್ಕಾಗಿ ಹಸಿರು ಪ್ರದೇಶಗಳನ್ನು ಗುರುತಿಸುವುದು.

ಸಾರಿಗೆ ಮತ್ತು ಸಂಪರ್ಕ: ಮುಖ್ಯ ರಸ್ತೆಗಳು ಹಾಗೂ ಇತರ ಸಂಪರ್ಕ ವ್ಯವಸ್ಥೆಗಳ ಅಭಿವÊದ್ಧಿಗೆ ಅಗತ್ಯವಾದ ಭೂಮಿಯನ್ನು ಗುರುತಿಸುವುದು.

ಅಭಿವೃದ್ಧಿ ಪ್ರಕ್ರಿಯೆ ಸರಳೀಕರಣ: ನಿಗದಿಪಡಿಸಿದ ಭೂ ಬಳಕೆಗೆ ಅನುಗುಣವಾಗಿ ವಸತಿ, ವಾಣಿಜ್ಯ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪ್ರಾಽಕಾರ ಅನುಮತಿ ನೀಡಲು ಅವಕಾಶ ಕಲ್ಪಿಸುವುದು. ಸರ್ಕಾರದ ಅಂತಿಮ ಅನುಮೋದನೆ ದೊರೆತ ಬಳಿಕ ಲೇಔಟ್ ನಿರ್ಮಾಣ ಸೇರಿದಂತೆ ವಿವಿಧ ಅಭಿವÊದ್ಧಿ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆಯಲು ನೆರವಾಗಲಿದೆ.

ನಾನಾ ಕಾರಣಗಳಿಂದಾಗಿ ಸರ್ಕಾರದಿಂದ ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ದೊರಕುವುದು ವಿಳಂಬವಾಗಿತ್ತು. ಈಗ ದೊರೆತಿದೆ. ಸಲ್ಲಿಕೆಯಾಗಿರುವ ಆಕ್ಷೇಪಣೆಗಳ ಪರಿಶೀಲನೆ ಬಳಿಕ ಸಭೆಯಲ್ಲಿ ಚರ್ಚಿಸಿ, ಅಂತಿಮ ಒಪ್ಪಿಗೆಗಾಗಿ ರಾಜ್ಯಸರ್ಕಾರಕ್ಕೆ ಕಳಿಸಲಾ ಗುವುದು.
| ಎಂ.ಕೆ. ತಾಜ್‌ಪೀರ್, ಅಧ್ಯಕ್ಷರು, ಕುಡಾ.
ಮಹಾಯೋಜನೆಗೆ ಸರ್ಕಾರದ ಅಂತಿಮ ಒಪ್ಪಿಗೆ ಸಿಗಬೇಕಿದೆ. ನಗರದ ಯೋಜನಾ ಬದ್ಧ ತ್ವರಿತ ಬೆಳವಣಿಗೆಗೆ ಈ ಪ್ಲಾ÷್ಯನ್ ನೆರವಾಗಲಿದೆ.
| ಎಂ.ಎಸ್. ಸೋಮಶೇಖರ್, ಆಯುಕ್ತರು, ಕುಡಾ.