ಅರಸನ ಕೆರೆಗೆ ವಿಳಂಬ ಗ್ರಹಣ

ಇಂದಿನಿAದ ಕಾಮಗಾರಿ ಮರು ಆರಂಭದ ನಿರೀಕ್ಷೆ
ಅರಸನ ಕೆರೆ ಚಿತ್ರ
ಅರಸನ ಕೆರೆ ಚಿತ್ರ
Published on: 

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ನಗರದ ಮುರುಘಾಮಠದ ಮುಂಭಾಗದಲ್ಲಿರುವ ೩೪.೨೫ ಎಕರೆ ವಿಸ್ತೀರ್ಣದ ಐತಿಹಾಸಿಕ ಅರಸನ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಽಕಾರದ (ಕುಡಾ) ಕನಸು ಸದ್ಯಕ್ಕೆ ನನಸಾಗುವ ಲಕ್ಷಣ ಕಾಣುತ್ತಿಲ್ಲ. ಮೊದಲ ಹಂತದ ಕಾಮಗಾರಿಯೇ ಕುಂಟುತ್ತ ಸಾಗಿರುವುದರಿಂದ ಕೆರೆ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡುವಂತಾಗಿದೆ.

೧೦ ರಿಂದ ೧೧ ಕೋಟಿ ರೂ. ವೆಚ್ಚದಲ್ಲಿ ಮೂರು ಹಂತಗಳಲ್ಲಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕುಡಾ ನಿರ್ಧರಿಸಿತ್ತು. ಇದಕ್ಕಾಗಿ ಸರ್ಕಾರದ ಅನುದಾನಕ್ಕೆ ಕಾಯದೆ, ತನ್ನಲ್ಲಿರುವ ಕೆರೆ ಅಭಿವೃದ್ಧಿ ಶುಲ್ಕವನ್ನು ಬಳಸಿಕೊಂಡು ಕೆರೆ ಸೌಂದರ್ಯೀಕರಣದ ಜತೆಗೆ ವಾಯುವಿಹಾರ ಹಾಗೂ ಆಕರ್ಷಕ ಪ್ರವಾಸಿ ತಾಣವನ್ನಾಗಿ ರೂಪಿಸಲು ಉದ್ದೇಶಿಸಿತ್ತು. ಇದರ ಅಂಗವಾಗಿ ೨೦೨೪ರ ಡಿಸೆಂಬರ್ ೭ರಂದು ಅಂದಾಜು ೫ ಕೋಟಿ ರೂ. ವೆಚ್ಚದ ಮೊದಲ ಹಂತದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಒಂದಿಷ್ಟರ ಮಟ್ಟಿಗೆ ಕೆಲಸ ನಡೆದರೂ, ಕಳೆದ ಕೆಲ ತಿಂಗಳುಗಳಿAದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ಗುತ್ತಿಗೆದಾರನ ವಿಳಂಬ

ಮೊದಲ ಹಂತದ ಕಾಮಗಾರಿಗೆ ಸರ್ಕಾರದ ಅನುಮೋದನೆ ದೊರೆತಿದ್ದರೂ, ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿಯಿAದ ಕೆರೆ ಮೀನು ಹರಾಜು ಪಡೆದಿದ್ದ ಗುತ್ತಿಗೆದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಕಾಮಗಾರಿ ಆರಂಭವಾದ ೨೩ ವರ್ಷಗಳ ಕಾಲ ವಿಳಂಬವಾಗಿತ್ತು. ಕೆಲಸ ಆರಂಭಿಸಲು ಕೆರೆ ನೀರನ್ನು ಹೊರಹಾಕಬೇಕಿದ್ದ ಕ್ರಮವನ್ನು ಪ್ರಶ್ನಿಸಿ ಗುತ್ತಿಗೆದಾರರು ಕೋರ್ಟ್ ಮೊರೆ ಹೋಗಿದ್ದರು. ಅಂತಿಮವಾಗಿ ಪ್ರಾಽಕಾರ ಮತ್ತು ಗುತ್ತಿಗೆದಾರರ ನಡುವೆ ಲೋಕ್ ಅದಾಲತ್‌ನಲ್ಲಿ ರಾಜಿ ಸಂಧಾನ ನಡೆದು ಕಾಮಗಾರಿಗೆ ಹಾದಿ ಸುಗಮವಾಗಿತ್ತು. ಬಳಿಕ ನಾಲ್ಕು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಭಾಗವಹಿಸದ ಕಾರಣ ಮತ್ತಷ್ಟು ವಿಳಂಬವಾಯಿತು.

ಐದನೇ ಟೆಂಡರ್‌ನಲ್ಲಿ ಗುತ್ತಿಗೆ ಪಡೆದ ಕೋಲಾರ ಜಿಲ್ಲೆಯ ಗುತ್ತಿಗೆದಾರರು ಆರಂಭದಲ್ಲಿ ಒಂದಿಷ್ಟು ಕೆಲಸ ಮಾಡಿದ್ದರಾದರೂ, ಈಗ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಮೊದಲ ಹಂತದ ಕೆಲಸಕ್ಕೇ ಹಿನ್ನಡೆಯಾಗಿರುವುದು ಕುಡಾ ಅಽಕಾರಿಗಳನ್ನು ಕಂಗೆಡಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕರು, ಕುಡಾ ಅಧ್ಯಕ್ಷರು ಹಾಗೂ ಅಽಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಿದ್ದು, ಡಿಸೆಂಬರ್ ೨೫ರೊಳಗೆ ತಮಗೆ ವಹಿಸಿರುವ ಕೆಲಸ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಲಿಖಿತ ಭರವಸೆ ನೀಡಿದ್ದಾರೆ. ಒಂದು ವೇಳೆ ವಿ-Àಲವಾದಲ್ಲಿ ಗುತ್ತಿಗೆ ರದ್ದುಪಡಿಸುವಂತೆ ತಿಳಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸೋಮವಾರದಿಂದ ಕಾಮಗಾರಿ ಮರು ಆರಂಭವಾಗುವ ನಿರೀಕ್ಷೆಯಿದೆ. ಹಣಕಾಸಿನ ಕೊರತೆಯಿಲ್ಲದಿದ್ದರೂ ಕೇವಲ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ವಿಳಂಬವಾಗಿದೆ ಎಂದು ಪ್ರಾಽಕಾರದ ಮೂಲಗಳು ಸ್ಪಷ್ಟಪಡಿಸಿವೆ.

ಎರಡನೇ ಹಂತದ ಕಾಮಗಾರಿಗೆ ಸಿದ್ಧತೆ

ಅಂದಾಜು ೨.೨೭ ಕೋಟಿ ರೂ. ವೆಚ್ಚದ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು ಕುಡಾ ಕಳೆದ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಕಳೆದ ತಿಂಗಳು ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಇದರೊಂದಿಗೆ ಕೆರೆಯಲ್ಲಿ ನೀರು ಶುದ್ಧೀಕರಣ ಘಟಕ ಸೇರಿದಂತೆ ೫.೮೯ ಕೋಟಿ ರೂ. ವೆಚ್ಚದ ಮೂರನೇ ಹಂತದ ಕಾಮಗಾರಿಗೆ ವಿಸ್ತ Èತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ.

೧.೫ ಕಿ.ಮೀ. ವಾಕಿಂಗ್ ಪಾಥ್

ಮೂರು ಹಂತದ ಕಾಮಗಾರಿಗಳು ಪೂರ್ಣಗೊಂಡರೆ ಕೆರೆ ಸುತ್ತ ೧.೫ ಕಿ.ಮೀ. ಉದ್ದದ ಸುಸಜ್ಜಿತ ವಾಕಿಂಗ್ ಪಾಥ್ ವಾಯುವಿಹಾರಿಗಳಿಗೆ ಲಭ್ಯವಾಗಲಿದೆ. ಕೆರೆ ಮಧ್ಯೆ ನಡುಗಡ್ಡೆ ನಿರ್ಮಾಣ, ಬೋಟಿಂಗ್ ವ್ಯವಸ್ಥೆ, ಮಕ್ಕಳ ಆಟಿಕೆಗಳು, ಓಪನ್ ಜಿಮ್, ವಿದ್ಯುತ್ ದೀಪಾಲಂಕಾರ, ಲ್ಯಾಂಡ್ ಸ್ಕೇಪಿಂಗ್ ಹಾಗೂ ಮೂಲಸೌಲಭ್ಯಗಳೊಂದಿಗೆ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಇರಾದೆ ಪ್ರಾಽಕಾರದ್ದಾಗಿದೆ.

ಉಪ ಲೋಕಾಯುಕ್ತರ ಭೇಟಿ

ಕಳೆದ ಜನವರಿ ೨೨ರಿಂದ ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸದಲ್ಲಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. -Àಣೀಂದ್ರ ಅವರು ಅರಸನ ಕೆರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದರು. ಇದನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬಹುದು ಎಂದು ಸಲಹೆ ನೀಡಿದ್ದ ನ್ಯಾಯಮೂರ್ತಿಗಳು, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಽಕಾರಿಗಳಿಗೆ ಖಡಕ್ ತಾಕೀತು ಮಾಡಿದ್ದರು.

----

ಕಾಮಗಾರಿ ವಿಳಂಬವಾಗಿದೆ. ಇದಕ್ಕೆ ಸಂಬAಽಸಿದAತೆ ಕಂಟ್ರಾಕ್ಟರ್‌ಗೆ ಎಚ್ಚರಿಕೆ ಕೊಡಲಾಗಿದೆ. ಸೋಮವಾರ ಕೆಲಸ ಆರಂಭಿಸದಿದ್ದರೆ ಆತನ ಟರ್ಮಿನೇಟ್ ಮಾಡಲು ಕ್ರಮ ಕೈಗೊಳ್ಳಲಾಗುವುದು.
| ಎಂ.ಕೆ.ತಾಜ್‌ಪೀರ್, ಅಧ್ಯಕ್ಷರು, ಕುಡಾ, ಚಿತ್ರದುರ್ಗ.
ಗುತ್ತಿಗೆದಾರನ ಕಾರಣದಿಂದಾಗಿ ಕೆರೆ ಕಾಮಗಾರಿ ಕುಂಠಿತಗೊAಡಿದೆ. ಕಪ್ಪು ಪಟ್ಟಿಗೆ ಸೇರಿಸಲು ಮುಂದಾಗಿದ್ದರಿAದಾಗಿ ಈಗ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿದ್ದಾನೆ. ಕಾಮಗಾರಿ ಮುಂದುವರಿಸಲು ಅಗತ್ಯವಿರುವ ಕ್ರಮ ವಹಿಸಲಾಗುವುದು.
| ಕೆ.ಸಿ. ವೀರೇಂದ್ರಪಪ್ಪಿ, ಶಾಸಕ, ಚಿತ್ರದುರ್ಗ