

ಶಿವಮೊಗ್ಗ: ಶಿವಮೊಗ್ಗ ದಸರಾ ಅಂಗವಾಗಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ ಮಕ್ಕಳ ದಸರಾದಲ್ಲಿ ಚಿಣ್ಣರ ಉತ್ಸಾಹ, ಅವರ ಕಲಿಕೆಪರ ಮನೋಭಾವ ಹಾಗೂ ನವಚೈತನ್ಯ ದಸರಾ ಹಬ್ಬಕ್ಕೆ ಹೊಸ ಹುರುಪು ತುಂಬಿದವು.
ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅವರ ನಿರಪೇಕ್ಷ ನಗು ಮತ್ತು ಕಲಾತ್ಮಕ ಕೌಶಲವು ನಮ್ಮ ಸಮಾಜದ ಭವಿಷ್ಯ ಎಷ್ಟು ಪ್ರಕಾಶಮಾನವಾಗಿದೆ ಎಂಬುದನ್ನು ಮತ್ತೊಮ್ಮೆ ಮನದಟ್ಟು ಮಾಡಿತು.
ಮಕ್ಕಳ ದಸರಾ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಮಕ್ಕಳ ದಸರಾ ಒಂದು ಸಾಂಸ್ಕೃತಿಕ ವೇದಿಕೆಯಷ್ಟೇ ಅಲ್ಲ. ಬದಲಾಗಿ ಅವರ ಪ್ರತಿಭೆಗಳನ್ನು ಬೆಳೆಸಲು, ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಸೃಜನಶೀಲತೆ ಉತ್ತೇಜಿಸಲು ಮಹತ್ವದ ಅವಕಾಶ ಒದಗಿಸುತ್ತದೆ ಎಂದು ಹೇಳಿದರು. ರಾಷ್ಟ್ರೀಯ ಸ್ಕೇಟಿಂಗ್ ವಿಜೇತರಾದ ಅದ್ವಿಕಾ ನಾಯರ್, ಹಿತ ಪ್ರವೀಣ್ ಮತ್ತಿತರರು ಪಾಲ್ಗೊಂಡಿದ್ದರು.