ಮದುವೆಯಾಗಿದ್ದ ಪ್ರೇಮಿಗಳಿಗೆ ಪೊಲೀಸರ ಶ್ರೀರೆಕ್ಷೆ

ಚಿಂತಾಮಣಿ ನಗರಠಾಣೆಯ ಮುಂದೆ ಪ್ರೇಮ ವಿವಾಹವಾದ ಜೋಡಿ ಹೂವಿನ ಹಾರ ಬದಲಿಸಿಕೊಂಡರು.
ಚಿಂತಾಮಣಿ ನಗರಠಾಣೆಯ ಮುಂದೆ ಪ್ರೇಮ ವಿವಾಹವಾದ ಜೋಡಿ ಹೂವಿನ ಹಾರ ಬದಲಿಸಿಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಸೋದರ ಮಾವಂದಿರ ಕಿರುಕುಳಕ್ಕೆ ಒಳಗಾಗಿದ್ದ ಜೋಡಿ
  • ನೋಂದಣಿಗೆ ಸರ್ವರ್​ ಸಮಸ್ಯೆ ಅಡ್ಡಿ
ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಪ್ರೀತಿಸಿ ಮದುವೆಯಾಗಿದ್ದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರ ಬೆದರಿಕೆ, ಕಿರುಕುಳಕ್ಕೊಳಗಾಗಿದ್ದ ಪ್ರೇಮಿಗಳಿಗೆ ಪೊಲೀಸರು ರಣೆ ನೀಡಿ, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ತಾಲೂಕಿನ ಐ ಕುರಪ್ಪಲ್ಲಿ ರತಾ ಮತ್ತು ಕೊಂಡವೆನಕಪಲ್ಲಿ ಯಶವಂತ್​ ಮದುವೆಯಾದವರು. ಇಬ್ಬರು ಹತ್ತಿರದ ದಾಯಾದಿ ಸಂಬಂಧಿಗಳು. ವರಸೆಯಲ್ಲಿ ಯಶವಂತ್​ಗೆ ರತಾ ಅಕ್ಕನ ಮಗಳು. ಆದರೂ, ಯುವತಿಯ ಸೋದರ ಮಾವಂದಿರು ಈ ಇವರಿಬ್ಬರ ಪ್ರೀತಿ ಪ್ರೇಮ, ಮದುವೆಗೆ ವಿರೋಧಿಸುತ್ತಿದ್ದರು. ಇದರಿಂದ
ಜೋಡಿಗಳು ಮದುವೆಯಾಗಿ ಬಂದು ಪೊಲೀಸರ ರಣೆ ಪಡೆದಿದ್ದರು.
ಸರ್ವರ್​ ಸಮಸ್ಯೆ: ಬೇರೆ ಕಡೆ ಮದುವೆಯಾಗಿ ಬಂದ ರತಾ ಮತ್ತು ಯಶವಂತ್​ ಚಿಂತಾಮಣಿ ನೋಂದಣಿ ಕಚೇರಿಗೆ ರಿಜಿಸ್ಟರ್​ ಮಾಡಿಸಲು ಬಂದಿದ್ದರು. ಆದರೆ, ಸರ್ವರ್​ ಸಮಸ್ಯೆಯಿಂದ ಸಾಧ್ಯವಾಗಿಲ್ಲ. ಇದರ ನಡುವೆ ದೂರಿನ ಹಿನ್ನೆಲೆಯಲ್ಲಿ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸರು ಅಗತ್ಯ ದಾಖಲೆಗಳೊಂದಿಗೆ ದೃಢೀಕರಣ, ಪರಸ್ಪರ ಲಿಖಿತ ಅಭಿಪ್ರಾಯವನ್ನು ಪಡೆದುಕೊಂಡು ಮದುವೆ ಮಾಡಿಸಿದ್ದಾರೆ. ಇನ್ನೂ ಯುವತಿಯ ಸಂಬಂಧಿಕರು
ಕಾರಿನಲ್ಲಿ ರತಾಳನ್ನು ಅಪಹರಿಸಲು
ಯತ್ನಿಸಿ, ಬೆದರಿಕೆಯನ್ನೊಡ್ಡಿರುವ ಆರೋಪ ಕೇಳಿ ಬಂದಿದೆ.
ಬೆದರಿಕೆಯ ಆರೋಪ
ರತಾಳ ತಾಯಿಯ ತವರೂರು ಆದ ಕೋಲಾರ ತಾಲೂಕಿನ ಜಂಭಾಪುರ ಗ್ರಾಮದಲ್ಲಿರುವ ಅಜ್ಜಿ ತಾತನ ಮನೆಯಲ್ಲಿ ಬೆಳೆದಿದ್ದು ಹತ್ತಿರ ಸಂಬಂಧಿ ಯಶವಂತ್​ನನ್ನು ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇದರ ನಡುವೆ ಇಬ್ಬರು ಹನುಮವ್ರತಾಚರಣೆಯಂದು ಚಿಂತಾಮಣಿ ನಗರದ ವರದಾದ್ರಿ ಬೆಟ್ಟಕ್ಕೆ ಹೋಗಿದ್ದರ ಬಗ್ಗೆ ಮಾಹಿತಿ ತಿಳಿದ ರತಾ ಸೋದರ ಮಾವಂದಿರು ಬೈದು ಹೊಡೆದಿದ್ದು, ಯುವತಿಗೆ ಇಷ್ಟವಿಲ್ಲದಿದ್ದರೂ ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿಶ್ವಿಯಿಸಿದ್ದರು. ಆದರೆ, ರತಾ ಪ್ರಿಯಕರನೊಂದಿಗೆ ಹೋಗಿ ಮದುವೆಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net