ಅಚೀವರ್ಸ್ ಕಪ್ ನಲ್ಲಿ ಭಾರತ ಚಾಂಪಿಯನ್, ಗಮನ ಸೆಳೆದ ಶಿಡ್ಲಘಟ್ಟ ಆಟಗಾರ

ಭಾರತ ತಂಡವನ್ನು ಪ್ರತಿನಿಧಿಸಿದ್ದ ಶಿಡ್ಲಘಟ್ಟದ ಪವನ್‌ ಕುಮಾರ್
ಭಾರತ ತಂಡವನ್ನು ಪ್ರತಿನಿಧಿಸಿದ್ದ ಶಿಡ್ಲಘಟ್ಟದ ಪವನ್‌ ಕುಮಾರ್
Published on

ಚಿಕ್ಕಬಳ್ಳಾಪುರ: ಅಂತಾರಾಷ್ಟ್ರೀಯಟಾರ್ಗೆಟ್ ಬಾಲ್ ಅಚೀವರ್ಸ್ ಕಪ್ ೨೦೨೬ ನಲ್ಲಿ ಭೂತಾನ್ ದೇಶದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಇದರಲ್ಲಿ ಶಿಡ್ಲಘಟ್ಟದ .ಪವನ್ಕುಮಾರ್ ದೇಶವನ್ನು ಪ್ರತಿನಿಧಿಸಿದ್ದಾರೆ.

ನೇಪಾಳದ ಕಠ್ಮಂಡುವಿನಲ್ಲಿ ಮೇ. ರಿಂದ ಮೇ. ರವರಗೆ ಅಂತಾರಾಷ್ಟ್ರೀಯಟಾರ್ಗೆಟ್ ಬಾಲ್ ಅಚೀವರ್ಸ್ ಕಪ್ ನಡೆದಿದ್ದುಭಾರತ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದೆ. ತಂಡ ಉತ್ತಮ ಪ್ರದರ್ಶನನೀಡಿದೆ.

ಇನ್ನು ಶಿಡ್ಲಘಟ್ಟದ ಅಂಜನಾದ್ರಿ ಬಡಾವಣೆಯ ಆರ್.ಅನಿಲ್ಕುಮಾರ್ ಮತ್ತು ಮೀನಾಕ್ಷಿ ದಂಪತಿಯ ಮಗ .ಪವನ್ಕುಮಾರ್ ರಾಜ್ಯ, ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ರಾಷ್ಟ್ರೀಯತಂಡಕ್ಕೆ ಆಯ್ಕೆಯಾಗಿದ್ದರು.

ನಮ್ಮ ದೇಶವನ್ನು ಪ್ರತಿನಿಧಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಶಿಪ್ ಗೆದ್ದಿರುವುದು ಹೆಮ್ಮೆ ಎನಿಸಿದೆ. ಇನ್ನಷ್ಟು ಸಾಧನೆ ಮಾಡಲು ಉತ್ಸಾಹ ಮೂಡಿದೆ. ನಮ್ಮ ಕೋಚ್ ಗೆ ಇದರ ಶ್ರೇಯಸ್ಸು ಸಲ್ಲುತ್ತದೆಎಂದು ತಂಡದ ಗೆಲುವಿನ ಬಳಿಕ .ಪವನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಾರ್ಗೆಟ್ ಬಾಲ್ ಆಟ, ಬ್ಯಾಸ್ಕೆಟ್ ಮಾಲ್ ಮತ್ತು ಹ್ಯಾಂಡ್ ಬಾಲ್ ಆಟಗಳ ಸಂಕರವಾಗಿದ್ದು, ಕ್ರೀಡೆಯನ್ನು ೨೦೧೨ ರಲ್ಲಿ . ರಂದು ಭಾರತದ ಉತ್ತರಪ್ರದೇಶ ರಾಜ್ಯದ ಮಥುರಾ ಜಿಲ್ಲೆಯ ಡಾ.ಸೋನು ಶರ್ಮಾ ಅವರು ಮೊಟ್ಟಮೊದಲು ಪ್ರಾರಂಭಿಸಿದರು. ಒಂದು ತಂಡದಲ್ಲಿ ಆರು ಮಂದಿ ಕ್ರೀಡಾಪಟುಗಳಿರುವ ಆಟದಲ್ಲಿ ಟಾರ್ಗೆಟ್ ಬಾಲ್ ಅನ್ನು ಟಾರ್ಗೆಟ್ ರಿಂಗ್ ಗೆ ಎಸೆಯುವುದು ಆಟದಲ್ಲಿನ ಪ್ರಮುಖ ಅಂಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net