ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಅಕ್ಕ ತಮ್ಮ, ಕುಟುಂಬಸ್ಥರ ಅಳಲು

ಠಾಣೆಯ ಮೆಟ್ಟಿಲೇರಿದ ಪ್ರೇಮಿಗಳು
ಠಾಣೆಯ ಮೆಟ್ಟಿಲೇರಿದ ಪ್ರೇಮಿಗಳು
Published on

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಪ್ರೇಮಿಗಳು ಪ್ರಾಣ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಪೊಲೀಸ್ಠಾಣೆಯ ಮೆಟ್ಟಿಲೇರಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಶಶಿಕಲಾ (೨೯) ಹಾಗೂ ಹೊಸಕೋಟೆ ತಾಲೂಕಿನ ಹಳೇಯೂರಿನ ಪ್ರವೀಣ್‌ (೨೪) ಪ್ರೇಮಿಗಳು ಇಲ್ಲಿನ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿಗಳು ಹಾಗೂ ಮಹಿಳಾ ಪೊಲೀಸ್ಠಾಣೆಗೆ ಬಂದು ರಕ್ಷಣೆ ಪಡೆದುಕೊಂಡಿದ್ದಾರೆ.

ಕಳೆದ ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳ ಮದುವೆಗೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಲು ಯತ್ನಿಸಲಾಗುತ್ತಿತ್ತು. ಇದರಿಂದ ಜೋಡಿಗಳು ಮನೆ ಬಿಟ್ಟು ಬಂದಿದ್ದು ದೇಗುಲದಲ್ಲಿ ಶಶಿಕಲಾಗೆ ಪ್ರವೀಣ್ ತಾಳಿ ಕಟ್ಟಿದ್ದಾನೆ. ಬಳಿಕ ರಕ್ಷಣೆ ಬಯಸಿ ದಾಖಲೆ ಸಮೇತ ಇಬ್ಬರು ಇಲ್ಲಿನ ಪೊಲೀಸ್ಠಾಣೆಗೆ ಬಂದಿದ್ದಾರೆ. ಇದರಿಂದ ಪ್ರೇಮಿಗಳ ಪಾಲಕರನ್ನು ಕರೆಸಿಕೊಂಡ ಪೊಲೀಸರು, ನಿಯಮಾನುಸಾರ ಹೇಳಿಕೆ ಪಡೆದು ಬಳಿಕ ಕಳುಹಿಸಿದ್ದಾರೆ.

ಇನ್ನು ದೂರದ ಸಂಬಂಧದಲ್ಲಿ ಶಶಿಕಲಾ ಹಾಗೂ ಪ್ರವೀಣ್ಅಕ್ಕ ತಮ್ಮ ಆಗುತ್ತಾರೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದು ಇದನ್ನು ಪ್ರೇಮಿಗಳು ನಿರಾಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net