

ಜಯಪುರ: ಚಿಕ್ಕಮಗಳೂರು ವೃತ್ತ ಕೊಪ್ಪ ವಿಭಾಗದ ಉಪ ವಲಯ ಅರಣ್ಯಧಿಕಾರಿಗಳು ಹಾಗೂ ಮೋಜಣಿದಾರರು ಸಂಘದ ಅಧ್ಯಕ್ಷರಾಗಿ ಅಗಳಗಂಡಿ ವಿಭಾಗದ ಡಿಆರ್‌ಎಫ್‌ಒ ಎಸ್.ಚಂದ್ರಶೇಖರ್ ನಾಯ್ಕ ಆಯ್ಕೆಯಾದರು.
ಕೊಪ್ಪ ಅರಣ್ಯ ಭವನದಲ್ಲಿ ಸೋಮವಾರ ಸಭೆ ನಡೆಸಿ ನೂತನ ಸಂಘದ ಕಾರ್ಯಕಾರಿ ಸಮಿತಿ ರಚಿಸಿದರು. ಬೀರೇಶ್ ಹೊನ್ನಮ್ಮನವರ್(ಕಾರ್ಯದರ್ಶಿ), ಅಕ್ಷತಾ(ಖಜಾಂಚಿ), ಪರಶುರಾಮ್(ಉಪಾಧ್ಯಕ್ಷ), ಗೌಸ್ ಮೊಯಿದ್ದಿನ್(ಗೌರವಧ್ಯಕ್ಷ), ಅಲ್ ಫರ್ಮಾನ್(ಸಹ ಕಾರ್ಯದರ್ಶಿ), ಮಾರುತಿ ಎಸ್. ಮಾಳಿ(ಸಂಘಟನಾ ಕಾರ್ಯದರ್ಶಿ), ಚಂದನ್(ಸಂಘಟನಾ ಕಾರ್ಯದರ್ಶಿ), ಶಂಕರ್ ಪತ್ತಾರ್(ಆಂತರಿಕ ಲೆಕ್ಕ ಪರಿಶೋಧಕ), ಗಿರೀಶ್ (ಕಾನೂನು ಸಲಹೆಗಾರ) ಆಯ್ಕೆಯಾದರು.
ನೂತನ ಪದಾಧಿಕಾರಿಗಳಿಗೆ ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್, ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುದರ್ಶನ್, ಚೇತನ್ ಮಂಗಲ್ ಗಸ್ತಿ, ವ್ಯವಸ್ಥಾಪಕ ರಾಜೇಶ್ ಹಾಗೂ ವಲಯ ಅರಣ್ಯಧಿಕಾರಿಗಳು ಅಭಿನಂದನೆ ಸಲ್ಲಿಸಿದರು.