

ಯಳಂದೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿದ 100 ಕೂಲಿ ಕಾರ್ಮಿಕರಿಗೆ ಹಾಜರಾತಿ ನೀಡದ ಪರಿಣಾಮ ಒಂದು ದಿನದ ಕೂಲಿ ದೊರೆಯದಂತಾಗಿದೆ.
ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿಯಿಂದ ಎರಡು ದಿನಗಳಿಂದ ಗ್ರಾಮ ಗೌಡನಕಟ್ಟೆ ಅಭಿವೃದ್ಧಿ ಕಾಮಗಾರಿಗೆ ವಿಬಿಜಿ ರಾಂ ಜಿ ಯೋಜನೆಯಡಿ 100 ಕೂಲಿಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡಿಸಲಾಗಿತ್ತು. 2 ದಿನಗಳ ಹಾಜರಾತಿ ನೀಡಿತ್ತು.
ಮೂರನೇ ದಿನವಾದ ಶುಕ್ರವಾರ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಇದೇ 100 ಕಾರ್ಮಿಕರು ಕೆಲಸಕ್ಕೆ ಆಗಮಿಸಿದ್ದರು. ಅಧಿಕಾರಿಗಳು ಜಿಪಿಎಸ್ ಮಾಡಿ ಕೆಲಸ ಪ್ರಾರಂಭಿಸಿದ್ದರು. ಆದರೆ ಕಾರ್ಮಿಕ ಕೆಲಸ ಹಾಜರಾತಿ ಪಟ್ಟಿಯಲ್ಲಿ (ಎನ್ಎಂಆರ್) ಹಾಜರಾತಿ ನೀಡದ ಕಾರಣ ಕೂಲಿ ಮೊತ್ತವು ಕಾರ್ಮಿಕರಿಗೆ ದೊರೆಯದಂತಾಗಿದೆ. ಅಧಿಕಾರಿಗಳ ಈ ಎಡವಟ್ಟಿನಿಂದ ಕಾರ್ಮಿಕರು ಕಂಗಾಲಾಗಿದ್ದಾರೆ. ಈ ಯೋಜನೆಯಡಿ ಕಾರ್ಮಿಕರಿಗೆ ತಲಾ 382 ರೂ. ಕೂಲಿ ನೀಡಲಾಗುತ್ತಿದೆ.