ವನ್ಯಜೀವಿ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ

 ಪಟ್ಟಣದ ಬ್ರದರನ್ ಮಿಷನ್ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ವಿಜಯರಾಜ್ ಮಾತನಾಡಿದರು. ಬಸವರಾಜು, ರಾಮಚಂದ್ರ, ಸ್ವಾಮಿ, ಲತಾ ಇತರರು ಇದ್ದರು.

Published on
ಕೊಳ್ಳೇಗಾಲ: ವನ್ಯಜೀವಿಗಳ ಹಾಗೂ ಪರಿಸರ ಸಂರಕ್ಷಣೆ ಮನುಕುಲದ ಆದ್ಯ ಕರ್ತವ್ಯವಾಗಿದೆ. ಪ್ರಾಣಿ ಸಂಕುಲ, ಗಿಡ, ಮರ, ಪಕ್ಷಿಗಳ ಸಂರಕ್ಷಣೆ ಮಾಡದಿದ್ದಲ್ಲಿ ಮನುಕುಲ ನಾಶ ಹೊಂದುವುದರಲ್ಲಿ ಅನುಮಾನವಿಲ್ಲ ಎಂದು ಅರಣ್ಯ ಸಂಚಾರಿ ದಳದ ಸಬ್‌ಇನ್‌ಸ್ಪೆಕ್ಟರ್ ವಿಜಯರಾಜ್ ಹೇಳಿದರು.
ಪಟ್ಟಣದ ಬ್ರದರನ್ ಮಿಷನ್ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವನ್ಯಜೀವಿ ಸಂರಕ್ಷಣೆಯ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ನಾವು ಅರಣ್ಯದಲ್ಲಿ ಪ್ರಾಣಿ, ಪಕ್ಷಿಗಳು ನೋಡಲು ಯಥೇಚ್ಛವಾಗಿ ಅರಣ್ಯ ಪ್ರವೇಶಿಸುತ್ತಿದ್ದು, ಇಂದು ವನ್ಯ ಮೃಗಗಳಾದ ಹುಲಿ, ಚಿರತೆ, ಆನೆ ಇತ್ಯಾದಿ ಪ್ರಾಣಿಗಳು ಜನರು ವಾಸಿಸುವ ಪ್ರದೇಶಕ್ಕೆ ಲಗ್ಗೆ ಇಡುತ್ತಿವೆ. ಇದರಿಂದ ವನ್ಯಜೀವಿ ಹಾಗೂ ಮಾನವ ಸಂಘರ್ಷ ನಡೆಯುತ್ತಿದೆ ಎಂದರು.
ಅರಣ್ಯ ಸಂಚಾರಿ ದಳದ ಹೆಡ್ ಕಾನ್‌ಸ್ಟೆಬಲ್ ಬಸವರಾಜು, ರಾಮಚಂದ್ರ, ಸ್ವಾಮಿ, ಲತಾ, ಚಾಲಕ ಪ್ರಭಾಕರ್ ಹಾಗೂ ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net