ಕೋಣನಕೆರೆಯಲ್ಲಿ ಮೂಕಳ್ಳಿ ಮಾರಮ್ಮ ಮೆರವಣಿಗೆ

ಕೋಣನಕೆರೆ ಗ್ರಾಮದಲ್ಲಿ ಮೂಕಳ್ಳಿ ಮಾರಮ್ಮನ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಕೋಣನಕೆರೆ ಗ್ರಾಮದಲ್ಲಿ ಮೂಕಳ್ಳಿ ಮಾರಮ್ಮನ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಕೋಣನಕೆರೆ ಮೂಕಳ್ಳಿ ಮಾರಮ್ಮನ ಹಬ್ಬ
  • ದೇವಿಯ ಮೂರ್ತಿ
ಹನೂರು: ತಾಲೂಕಿನ ಕೋಣನಕೆರೆ ಮೂಕಳ್ಳಿ ಮಾರಮ್ಮನ ಹಬ್ಬದ ಅಂಗವಾಗಿ ಭಾನುವಾರ ದೇವಿಯ ಮೂರ್ತಿಯನ್ನು ಗ್ರಾಮದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
5 ದಿನಗಳ ಹಬ್ಬದ ಅಂಗವಾಗಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮೂಕಳ್ಳಿ ಮಾರಮ್ಮನ ದೇಗುಲವನ್ನು ತಳಿರು ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ದೇಗುಲದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಕುದುರೆ ವಾಹನದಲ್ಲಿ ಕೂರಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಬಳಿಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ಕರೆ ತಂದು ಮೆರವಣಿಗೆ ನಡೆಸಲಾಯಿತು. ಈ ವೇಳೆ ಹೆಣ್ಣು ಮಕ್ಕಳು ದೀಪಾಧಾರತಿ ಬೆಳಗಿಸಿದರೆ, ಮಹಿಳೆಯರು ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಹೆಚ್ಚಿನ ಭಕ್ತರು ಆಗಮಿಸಿದ್ದು, ಜಯಘೋಷ ಮೊಳಗಿಸಿದರು. ಯುವಕರು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net