ಬಾಳೆಗೆ ಹೆಚ್ಚಿನ ಗಮನಹರಿಸುವುದರಿಂದ ಇಳುವರಿ ಚೆನ್ನಾಗಿ ಬರುತ್ತಿದೆ. ಪ್ರತಿ ಗಿಡಕ್ಕೆ ಪ್ರತಿ ದಿನ 30 ಲೀಟರ್ ನೀರಿನ ಅಗತ್ಯವಿದ್ದು ಇದನ್ನು ಸರಿಯಾಗಿ ಕಾಲಕಾಲಕ್ಕೆ ನೀಡಲಾಗುತ್ತದೆ. ಬಾಳೆಯ ಎಲೆಯ ಬಣ್ಣವನ್ನು ನೋಡಿದ ಕೂಡಲೇ ಅದಕ್ಕೆ ಏನು ರೋಗ ಬಂದಿದೆ, ಯಾವ ಪೋಷಕಾಂಶ ನೀಡಿದರೆ ಸರಿಯಾಗುತ್ತದೆ ಎಂಬುದನ್ನು ತಾವೇ ತಿಳಿದುಕೊಂಡು ಸೂಕ್ತ ಪೋಷಕಾಂಶ ನೀಡುವುದರಿಂದ ಗಿಡದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆಯಂತೆ 8 ತಿಂಗಳವರೆಗೂ ಜಿಂಕ್, ಪೊಟ್ಯಾಷ್, ಮೆಗ್ನಿಷಿಯಂ ಸಲ್ಫೇಟ್‌ಗಳ ಮಿಶ್ರಣವನ್ನು ಪ್ರತಿ ಸಸಿಯ ಬುಡಕ್ಕೆ 600 ಮಿ.ಲೀ.ಹಾಕುವ ಮೂಲಕ ಟ್ರಂಚಿಂಗ್ ಮಾಡುವುದರಿಂದ ರೋಗಮುಕ್ತವಾಗಿ ಬೆಳೆಯುತ್ತಿದ್ದಾರೆ. ಇದರಿಂದ ಪ್ರತಿ ಗೊನೆ 18 ರಿಂದ 21 ಕೆಜಿ ಇಳುವರಿ ಬರಲು ಸಾಧ್ಯವಾಗಿದೆ.