ಶತಾಯುಷಿ ಪ್ಯಾರಿಜಾನ್ ಗೃಹ ಮತದಾನ

15 nrp 3
ಎನ್.ಆರ್.ಪುರದಲ್ಲಿ ಶತಾಯುಷಿ ಪ್ಯಾರಿಜಾನ್ ಗೃಹ ಮತದಾನ ಮಾಡಿದರು.
Published on

ಎನ್.ಆರ್.ಪುರ: ಚುನಾವಣಾ ಆಯೋಗದ ಸೂಚನೆಯಂತೆ ನೋಂದಣಿ ಮಾಡಿಕೊಂಡ 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರ ಗೃಹ ಮತದಾನವು ಸೋಮವಾರ ತಾಲೂಕಿನಲ್ಲಿ ನಡೆಯಿತು. ಪಟ್ಟಣದ 2ನೇ ವಾರ್ಡ್‌ನಲ್ಲಿ ಪಪಂ ಸದಸ್ಯ ಮುನಾವರ್ ಪಾಷಾ ಅವರ ಅಜ್ಜಿ ಶತಾಯುಷಿ ಪ್ಯಾರಿಜಾನ್(101) ಗೃಹ ಮತದಾನ ಮಾಡಿ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಕಸಬಾ ಹೋಬಳಿ, ಬಾಳೆಹೊನ್ನೂರು ಹೋಬಳಿ ಹಾಗೂ ಖಾಂಡ್ಯ ಹೋಬಳಿ ಸೇರಿದಂತೆ ಒಟ್ಟು 199 ಗೃಹ ಮತದಾರರಿದ್ದಾರೆ. ಇವರಲ್ಲಿ 85 ವರ್ಷ ಮೇಲ್ಪಟ್ಟವರು 124 ಹಾಗೂ 75 ಅಂಗವಿಕಲರಿದ್ದಾರೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆದ ಗೃಹ ಮತದಾನದಲ್ಲಿ 190 ಮಂದಿ ಹಕ್ಕು ಚಲಾಯಿಸಿದರು. ಉಳಿದ 9 ಮಂದಿಯಲ್ಲಿ ಒಬ್ಬರು ನಿಧನರಾಗಿದ್ದು, ಇನ್ನುಳಿದ 8 ಮಂದಿಗೆ ಗೃಹ ಮತದಾನಕ್ಕೆ ಮಂಗಳವಾರ ಸಂಜೆ 5ರ ತನಕ ಅವಕಾಶವಿದೆ. ನಾಳೆ ಅವರು ಮನೆಯಲ್ಲೇ ಇದ್ದರೆ ತಮ್ಮ ಹಕ್ಕನ್ನು ಚಲಾಯಿಸಲು ಸುಲಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಆರ್‌ಒ, ಪಿಒ, ಸಂಬಂಧಪಟ್ಟ ಬಿಎಲ್‌ಒ, ಸೆಕ್ಟರ್ ಆಫೀಸರ್, ಡಿ.ಗ್ರೂಪ್ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಗೃಹ ಮತದಾನದ ಪ್ರಕ್ರಿಯೆಯನ್ನು ವೀಡಿಯೋ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net