

ರಟ್ಟಿಹಳ್ಳಿ: ಪಟ್ಟಣದ ನಾಮದೇವ ಸಿಂಪಿ ಸಮಾಜದ ವತಿಯಿಂದ ಇತ್ತೀಚೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ಶ್ರೀ ಪಾಂಡುರಂಗನ 49ನೇ ದಿಂಡಿ ಉತ್ಸವ ಮತ್ತು ನಗರ ಪ್ರದಕ್ಷಿಣೆ ಗುರುವಾರ ಸಂಭ್ರಮದಿಂದ ಜರುಗಿತು.
ಉತ್ಸವದ ಮೊದಲ ದಿವಸ ಸ್ಥಳೀಯ ರಾಜಕುಮಾರ ಹೇಂದ್ರೆ ನಿವಾಸದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಭಜನೆ ಮತ್ತು ಆಭಂಗಗಳ ಗಾಯನದೊಂದಿಗೆ ಶ್ರೀ ಪಾಂಡುರಂಗನ ದೇವಸ್ಥಾನದಲ್ಲಿ ಪೋತಿ ಸ್ಥಾಪನೆ ಮಾಡಲಾಯಿತು. ಎರಡನೇ ದಿವಸ ನಾಮಜಪ, ಭಜನೆ, ಪ್ರವಚನ, ಕೀರ್ತನೆ ಮುಂತಾದ ಧಾರ್ವಿುಕ ವಿಧಿವಿಧಾನ ನೆರವೇರಿಸಲಾಯಿತು. ರಾತ್ರಿ ಸಮಾಜದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಬಳಿಕ ಸಂತ ಮಂಡಳಿಯಿಂದ ಅಭಂಗ-ಭಜನೆಗಳ ಮೂಲಕ ಅಖಂಡ ಜಾಗರಣೆ ಆಚರಿಸಲಾಯಿತು. ಮೂರನೇ ದಿನ ಶ್ರೀ ವಿಠ್ಠಲ-ರುಕುಮಾಯಿ ದೇವರ ನಗರ ಪ್ರದಕ್ಷಿಣೆ ನಡೆಯಿತು. ಬಳಿಕ ಮಹಾಪ್ರಸಾದ ವಿತರಣೆಯೊಂದಿಗೆ ದಿಂಡಿ ಉತ್ಸವ ಸಂಪನ್ನಗೊಂಡಿತು.
ಸಮಾಜದ ಅಧ್ಯಕ್ಷ ಜ್ಞಾನೇಶ್ವರ ಬೊಂಗಾಳೆ, ಉಪಾಧ್ಯಕ್ಷ ರಾಜು ಧಾವಸ್ಕರ, ಕಾರ್ಯದರ್ಶಿ ಮಾಲತೇಶ ಮಹೇಂದ್ರಕರ, ಎನ್.ಸಿ. ಕಠಾರೆ, ರಾಜಕುಮಾರ ಹೇಂದ್ರೆ, ಜಿ.ಆರ್. ಶಿಗ್ಗಾಂವಕರ, ಪರಶುರಾಮ ಹೇಂದ್ರೆ, ಗಣೇಶ ಉರಣಕರ, ಕೃಷ್ಣಕುಮಾರ ಬೊಂಗಾಳೆ, ರಮೇಶ ಬಾಬಾಜಿಯವರ, ವಿಠ್ಠಲ ನಾಮದೇವ, ಶ್ರೀನಿವಾಸ ಶಿಗ್ಗಾಂವಕರ, ದಯಾನಂದ ಒಂಟಿಕರ, ಹನುಮಂತಪ್ಪ ಶಿಗ್ಗಾಂವಕರ, ಶ್ರೀನಿವಾಸ ಬೊಂಗಾಳೆ, ಗೋವಿಂದರಾವ್ ಮಹೇಂದ್ರಕರ, ಪಾಂಡುರಂಗ ಒಂಟಿಕರ, ಚಂದ್ರಶೇಖರ ಬೊಂಗಾಳೆ, ಗಣೇಶ ಧಾವಸ್ಕರ, ಇತರೆ ಗ್ರಾಮಗಳಿಮದ ಸಂತ ಮಂಡಳಿಯವರು ಉಪಸ್ಥಿತರಿದ್ದರು.