ಗ್ರಂಥಗಳ ಲೋಕಾರ್ಪಣೆ ಸಮಾರಂಭ, ಗಣಿತದಲ್ಲಿ ಭಾಸ್ಕಾರಚಾರ್ಯರ ವಿಧಾನ ಸುಲಭ ಎಂದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ

BHASKARACHARYA PEETHA
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಗಣಿತ ಅಧ್ಯಯನ ವಿಭಾಗ ಹಾಗೂ ಭಾಸ್ಕರಾಚಾರ್ಯ ಅಧ್ಯಯನ ಪೀಠದ ಅಡಿಯಲ್ಲಿ ವಿಶ್ವ ವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಪ್ರಕಟಿಸಲಾದ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕುಲಪತಿ ಪ್ರೊ.ವಿಜಯಾ ಬಿ ಕೋರಿಶೆಟ್ಟಿ, ಡಾ.ವೇಣುಗೋಪಾಲ ಹೆರೂರ, ಕುಲಸಚಿವ ಶಂಕರಗೌಡ ಸೋಮನಾಳ, ಡಾ.ಎನ್.ಬಿ. ನಡುವಿನಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ಭಾಸ್ಕರಾಚಾರ್ಯರ ವಿಧಾನದ ಮೂಲಕ ಗಣಿತದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದಾಗಿದೆ ಎಂದು ಮಹಿಳಾ ವಿವಿಯ ನೂತನ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿಯ ಗಣಿತ ಅಧ್ಯಯನ ವಿಭಾಗ ಹಾಗೂ ಭಾಸ್ಕರಾಚಾರ್ಯ ಅಧ್ಯಯನ ಪೀಠದ ಅಡಿಯಲ್ಲಿ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗ್ರಂಥಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಮಾನ್ಯ ಪ್ರಕಟಿತ ಪಠ್ಯಪುಸ್ತಕಗಳ ಕಠಿಣ ಶೈಲಿಯಿಂದ ಹೊರಬಂದು, ವಿದ್ಯಾರ್ಥಿಗಳನ್ನು ಅರ್ಥಗರ್ಭಿತ, ಜ್ಯಾಮಿತೀಯ ಹಾಗೂ ಕಾವ್ಯಾತ್ಮಕ ರೀತಿಯಲ್ಲಿ ಚಿಂತಿಸಲು ಪ್ರೋತ್ಸಾಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಕಲನಶಾಸ್ತ್ರ, ಬೀಜಗಣಿತ ಮತ್ತು ಸಂಖ್ಯಾಸಿದ್ಧಾಂತದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಕುಲಸಚಿವ ಶಂಕರಗೌಡ ಸೋಮನಾಳ, ಗ್ರಂಥಗಳ ಲೇಖಕ ಹಾಗೂ ನಿವೃತ್ತ ಚಾರ್ಟರ್ಡ ಅಭಿಯಂತರ ಡಾ.ವೇಣುಗೋಪಾಲ ಹೆರೂರ, ಹಾಗೂ ಗುಲಬರ್ಗಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಬಿ. ನಡುವಿನಮನಿ, ವಿವಿಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಭಾಸ್ಕರಾಚಾರ್ಯ ಅಧ್ಯಯನ ಪೀಠದ ಸಂಯೋಜಕ ಪ್ರೊ.ಜಿ.ಜಿ. ರಜಪೂತ ಸ್ವಾಗತಿಸಿ, ಭಾಸ್ಕಾರಾಚಾರ್ಯರರ ಕೊಡುಗೆಗಳು ಹಾಗೂ ಗ್ರಂಥಗಳ ಬಗ್ಗೆ ಮಾಹಿತಿ ನೀಡಿದರು. ಪ್ರಸಾರಾಂಗ ನಿರ್ದೇಶಕಿ ಪ್ರೊ.ರಾಜು ಬಾಗಲಕೋಟ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಸಹನಾ ದೇಶಪಾಂಡೆ ಹಾಗೂ ಸೌಂದರ್ಯ ನಿರೂಪಿಸಿದರು. ಆಸಿಯಾ ದೌಲತಕೋಟಿ ವಂದಿಸಿದರು.

ಹಿಂದೈ ಗಣಿತ ಐತಿಹಾಸಿಕ-ಒಂದು ಮೂಲ ಗ್ರಂಥ ಭಾಗ-2, ಭಾರತದಲ್ಲಿ ಶ್ರೇಣಿ ಗಣಿತ, ಭಾರತೀಯ ಗಣಿತ ಶಾಸ್ತ್ರದ ಚಾರಿತ್ರೆ ಭಾಗ-1, ಬ್ರಹ್ಮಗುಪ್ತಮ್-1 ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net