ಗರಿಕೆ ಹುಲ್ಲಿನಂತೆ ನಮ್ಮತನ ಉಳಿಸಿಕೊಳ್ಳಿ

UDP-5-11-Book
ಉಡುಪಿಯಲ್ಲಿ ದಿ.ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನವನ್ನು ಚ.ಸರ್ವಮಂಗಳಾ ಬಿಡುಗಡೆ ಮಾಡಿದರು. ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕಮಲಾಕರ ಭಟ್​ ಕಡವೆ ಮಾತನಾಡಿದರು. ಅನಸೂಯಾ, ರಂಗನಾಥ ಹೊಸೂರು ಇತರರಿದ್ದರು.
Published on

ಯುವಸಮುದಾಯಕ್ಕೆ ಕವಿ ಚ.ಸರ್ವಮಂಗಳಾ ಕರೆ | ಕವನ ಸಂಕಲನ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಜಾತಿ, ಮತಗಳ ಗೋಡೆ ಕಟ್ಟುವವರ ವಿರುದ್ಧ ಸಿಟ್ಟು ಹೊಂದಿದ್ದ ದಿ.ಪಟ್ಟಾಭಿರಾಮ ಸೋಮಯಾಜಿ ಅವರು ಸಮಾನತೆ ಪ್ರತಿಪಾದಿಸಿದ್ದರು. ಬುದ್ಧಿ ಭ್ರಷ್ಟರಾಗಬಾರದೆಂಬ ನಿಲುವು ಹೊಂದಿದ್ದರು. ಇಂದಿನ ಯುವಜನಾಂಗ ಅವರ ರೀತಿಯಲ್ಲೇ ಗರಿಕೆ ಹುಲ್ಲಿನಂತೆ ನಮ್ಮತನ ಉಳಿಸಿಕೊಂಡು ನಿತ್ಯ ಹಸಿರಾಗಿರಬೇಕು ಎಂದು ಕವಿ ಚ. ಸರ್ವಮಂಗಳಾ ಕರೆ ನೀಡಿದರು.

ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಮೈಸೂರಿನ ಅಪರಾಜಿತೆ ಪ್ರಕಾಶನ ವತಿಯಿಂದ ಪಟ್ಟಾಭಿ ಸ್ನೇಹಿತರ ಬಳಗ ಶುಕ್ರವಾರ ಆಯೋಜಿಸಿದ್ದ ದಿ. ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನ ಆ್ಯನ್​ ಆಲ್ಛಾಬೆಟಿಕಲ್​ ಆಲ್ಟರ್​ಕೇಶನ್​ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ನಕ್ಸಲ್​ ಪಟ್ಟ

ಹಿಂಸೆ ವಿರೋಧಿಸಿದ್ದ ಪಟ್ಟಾಭಿ ಹಣೆಗೆ ನಕ್ಸಲ್​ ಪಟ್ಟ ಕಟ್ಟಲಾಗಿತ್ತು. ವಸ್ತು ಮಾತ್ರವಲ್ಲದೆ, ವಿಚಾರಗಳ ಕಲಬೆರಕೆಯನ್ನೂ ಅವರು ಸಹಿಸುತ್ತಿರಲಿಲ್ಲ. ಅನ್ಯಾಯದ ವಿರುದ್ಧ ಹಾವಿನಂತೆ ಬುಸ್​ ಎನ್ನುತ್ತಿದ್ದರೂ ಯಾರಿಗೂ ಕಚ್ಚದ ಗುಣ ಅವರಲ್ಲಿತ್ತು. ಯಾರ ಬಗ್ಗೆಯೂ ಅವರು ಉಡಾಫೆ ತೋರಿಸಿರಲಿಲ್ಲ ಎಂದು ಸ್ಮರಿಸಿದರು.

ಕಾಲೇಜಿನ ಪ್ರಿನ್ಸಿಪಾಲ್​ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕಮಲಾಕರ ಭಟ್​ ಕಡವೆ ಮಾತನಾಡಿದರು. ಅನಸೂಯಾ, ರಂಗನಾಥ ಹೊಸೂರು ಉಪಸ್ಥಿತರಿದ್ದರು. ಶಿವಸ್ವಾಮಿ ರಂಗಗೀತೆ ಹಾಡಿದರು. ಮೀನಾ ಮೈಸೂರು ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಹಯವದನ ಉಪಾಧ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net