ಪಣಂಬೂರು ಕಡಲಲ್ಲಿ ದೋಣಿ ಅವಗಢ, ಓರ್ವ ನಾಪತ್ತೆ

WhatsApp Image 2021-09-11 at 9.14.14 AM
Published on

ಮಂಗಳೂರು: ಮಂಗಳೂರಿನ ಕಡಲಿನಲ್ಲಿ ಶನಿವಾರ ಬೆಳಗ್ಗೆ ದೋಣಿ ಅವಗಢ ಸಂಭವಿಸಿದ್ದು ಓರ್ವ ಮೀನುಗಾರ ನಾಪತ್ತೆಯಾಗಿದ್ದಾರೆ.
ಪಣಂಬೂರು ಬೀಚ್‌ ಸಮೀಪವೇ ಈ ಅವಗಢ ಶನಿವಾರ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ. ದೋಣಿ ಹಾಕಿ ಮೀನು ಹಿಡಿಯುವ ವೇಳೆ ಬೀಸಿದ ಗಾಳಿಗೆ ಗಿಲ್‌ನೆಟ್‌ ಬೋಟ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅಝರ್‌ ಎಂಬವರ ಮಾಲೀಕತ್ವದ ಈ ದೋಣಿಯಲ್ಲಿ ಬೆಂಗ್ರೆಯ ಅಬ್ದುಲ್‌ ಅಜೀಜ್‌, ಇಮ್ತಿಯಾಜ್‌, ಸಿನಾನ್‌, ಫೈರೋಜ್‌ ಹಾಗೂ ಶರೀಫ್‌ ಎಂಬವರಿದ್ದರು. ಇವರಲ್ಲಿ ಶರೀಫ್‌ ನೀರುಪಾಲಾಗಿದ್ದು ಅವರ ಶೋಧ ಕಾರ್ಯ ನಡೆದಿದೆ. ಉಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ದೋಣಿಯನ್ನು ದಡಕ್ಕೆ ಎಳೆದು ತರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net