

ಮಂಗಳೂರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದ.ಕ. ಜಿಲ್ಲಾ ಸಮಿತಿ ವತಿಯಿಂದ ಕಲ್ಲಾಪುವಿನಲ್ಲಿ ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ನಡೆಯಿತು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸ್ಥಾಪಕಾಧ್ಯಕ್ಷ ಕೊಟ್ರೇಶ ಉಪ್ಪಾರ ಹಾಗೂ ಗಜಲ್ ಕವಿ ಮಹಮ್ಮದ್ ಬಡ್ಡೂರು ಉದ್ಘಾಟಿಸಿದರು.
ವೇದಿಕೆ ಅಧ್ಯಕ್ಷ ಡಾ.ಸುರೇಶ ನೆಗಳಗುಳಿ ಅಧ್ಯಕ್ಷತೆ ವಹಿಸಿ, ಸಹಕಾರ ಕನ್ನಡ ಪ್ರೇಮ ಇದ್ದಾಗ ಭಾಷೋನ್ನತಿ ಸಾಧ್ಯ ಎಂದರು.
ರತ್ನಾ ಭಟ್, ಹಾ.ಮ.ಸತೀಶ, ಡಾ.ಸುರೇಶ ನೆಗಳಗುಳಿ ಅವರ ಕಡಲ ಹನಿ-ಒಡಲ ಧ್ವನಿ ಗಜಲ್ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ರತ್ನಾ ಕೆ. ಭಟ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಚುಟುಕು ಕವಿ ಇರಾ ನೇಮು ಪೂಜಾರಿ , ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಲ್ಲಿ, ಶ್ರೀನಾಥ್, ಕವಿ ವೆಂಕಟ್ ಭಟ್ ಎಡನೀರು, ರಘು ಇಡ್ಕಿದು ಉಪಸ್ಥಿತರಿದ್ದರು. ರೇಮಂಡ್ ಡಿಕುನ್ಹಾ ಸ್ವಾಗತಿಸಿದರು, ರಶ್ಮಿ ಸನಿಲ್ ಮತ್ತು ರೇಖಾ ಸುದೇಶ ರಾವ್ ಕಾರ್ಯಕ್ರಮ ನಿರೂಪಿಸಿದರು.