ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ

ಗಿಡ್ಡಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಜೇನುಗೂಡು ಟ್ರಸ್ಟ್​ನಿಂದ ಗುರುತಿನ ಚೀಟಿ ಹಾಗೂ ಲೇಖನ ಸಾಮಾಗ್ರಿ ವಿತರಿಸಲಾಯಿತು. ಟ್ರಸ್ಟ್​ನ ಸಂಟನಾ ಕಾರ್ಯದರ್ಶಿ ಎಸ್​.ಕೆ.ವಸಂತಕುಮಾರ್​, ಮುಖ್ಯಶಿಕ್ಷಕ ನಾಗೇಶ್​, ಟ್ರಸ್ಟ್​ ನಿರ್ದೇಶಕ ಅತ್ತಿಬೆಲೆ ಮಂಜುನಾಥ್​ ಇತರರು ಇದ್ದರು.
ಗಿಡ್ಡಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಜೇನುಗೂಡು ಟ್ರಸ್ಟ್​ನಿಂದ ಗುರುತಿನ ಚೀಟಿ ಹಾಗೂ ಲೇಖನ ಸಾಮಾಗ್ರಿ ವಿತರಿಸಲಾಯಿತು. ಟ್ರಸ್ಟ್​ನ ಸಂಟನಾ ಕಾರ್ಯದರ್ಶಿ ಎಸ್​.ಕೆ.ವಸಂತಕುಮಾರ್​, ಮುಖ್ಯಶಿಕ್ಷಕ ನಾಗೇಶ್​, ಟ್ರಸ್ಟ್​ ನಿರ್ದೇಶಕ ಅತ್ತಿಬೆಲೆ ಮಂಜುನಾಥ್​ ಇತರರು ಇದ್ದರು.
Published on: 

ಸೂಲಿಬೆಲೆ : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜೇನುಗೂಡು ಟ್ರಸ್ಟ್​ ಸದಾ ಸಿದ್ಧ ಎಂದು ಜೇನುಗೂಡು ರೂರಲ್​ ಡೆವಲ್ಪಮೆಂಟ್​ ಆ್ಯಂಡ್​ ಕಲ್ಚರಲ್​ ಟ್ರಸ್ಟ್​ನ ಸಂಟನಾ ಕಾರ್ಯದರ್ಶಿ ಎಸ್​.ಕೆ.ವಸಂತಕುಮಾರ್​ ಹೇಳಿದರು.

ಗಿಡ್ಡಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಲೇಖನ ಸಾಮಾಗ್ರಿ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟ್ರಸ್ಟ್​ನಿಂದ ಶ್ರೀವೇ ವಿದ್ಯಾರ್ಥಿಗಳಿಗೆ ಟ್ರಾ$್ಯಕ್​ಸೂಟ್​ ನೀಡುವುದಾಗಿ ಭರವಸೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್​ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಸಮವಸ, ಶೂ, ರಭಾಗ್ಯ, ಬಿಸಿಯೂಟ, ಮೊಟ್ಟೆ ಬಾಳೆಹಣ್ಣು ನೀಡಲಾಗುತ್ತಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಿಎಸ್​ಆರ್​ ಅನುದಾನದಿಂದ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.

ಮುಖ್ಯಶಿಕ್ಷಕ ನಾಗೇಶ್​, ಟ್ರಸ್ಟ್​ ನಿರ್ದೇಶಕ ಅತ್ತಿಬೆಲೆ ಮಂಜುನಾಥ್​, ನಿರ್ದೇಶಕರಾದ ನಯಾಜ್​ ಖಾನ್​, ಶಾಲೆ ಅಧ್ಯಕ್ಷ ರಾಜೀವ್​, ಸಹ ಶಿಕ್ಷಕರಾದ ತಾಸ್ಮಿಯಾ, ರಜಿನಿ, ಅನಿತಾ, ವೀಣಾ, ನವೀನ್​, ಗ್ರಂಥಪಾಲಕ ಗಂಗಪ್ಪ, ಮುಖಂಡ ಲೋಕೇಶ್​ ಇತರರು ಇದ್ದರು.

ಶಾಸಕರು ಹಾಗೂ ಬಮುಲ್​ ನಿರ್ದೇಶಕರ ಮಾರ್ಗದರ್ಶನದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ.

> ಸೈಯದ್​ ಮಹಬೂಬ್​, ನಿರ್ದೇಶಕ, ಜೇನುಗೂಡು ಟ್ರಸ್ಟ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net