ಮಕ್ಕಳನ್ನು ಕಾಣಲು ಬಾರದ ಪಾಲಕರು

ಮಕ್ಕಳನ್ನು ಕಾಣಲು ಬಾರದ ಪಾಲಕರು
ಮಕ್ಕಳನ್ನು ಕಾಣಲು ಬಾರದ ಪಾಲಕರು
Published on: 

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ದೇಗುಲದ ಆವರಣದಲ್ಲಿ ಭಿಾಟಣೆಯಲ್ಲಿ ತೊಡಗಿದ್ದ ಮೂರು ಮಕ್ಕಳನ್ನು ರಕ್ಷಣೆ ಮಾಡಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಟಕದ ಅಧಿಕಾರಿಗಳಿಗೆ ಮಕ್ಕಳ ಪಾಲಕರನ್ನು ಕಲ್ಯಾಣ ಸಮಿತಿ ಎದುರು ಹಾಜರುಪಡಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಅ.9ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾಲಕ್ಷಿ$್ಮ ಮಾರ್ಗದರ್ಶನದಲ್ಲಿ ಮಕ್ಕಳ ರಕ್ಷಣಾ ಟಕದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಸುಪರ್ದಿಗೆ ಪಡೆದು ದೇವನಹಳ್ಳಿಯ ಬಾಲಮಂದಿರಕ್ಕೆ ದಾಖಲಿಸಿತ್ತು. ನಂತರ ಅವರ ಪಾಲಕರನ್ನು ಪತ್ತೆ ಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗುವಂತೆ ಮನವೊಲಿಸುವಲ್ಲಿ ಸಲವೂ ಆಗಿತ್ತು. ಆದರೆ ಪ್ರಕರಣ ನಡೆದು 13 ದಿನ ಕಳೆದರೂ ಪಾಲಕರು ಕಲ್ಯಾಣ ಸಮಿತಿ ಎದುರು ಹಾಜರಾಗಿಲ್ಲ. ಇದರಿಂದ ಮಕ್ಕಳ ಮುಂದಿನ ಭವಿಷ್ಯ ಡೋಲಾಯಮಾನವಾಗಿದ್ದು ಅಧಿಕಾರಿಗಳಿಗೆ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ.

ಹಬ್ಬಕ್ಕೆಂದು ಹೋದವರು ಪತ್ತೆ ಇಲ್ಲ:

ತಮಿಳುನಾಡು ಮೂಲದ ತಂದೆ, ಮಗಳು ಹಾಗೂ ಅಳಿಯನ ಕುಟುಂಬ ಘಾಟಿ ದೇವಸ್ಥಾನದ ಕಾಡಂಚಿನಲ್ಲಿ ಸಣ್ಣದಾದ ಶೆಡ್​ ನಿರ್ಮಿಸಿಕೊಂಡು ವಾಸವಿದೆ. ಇಲ್ಲಿಯೇ ಈ ಮೂರು ಮಕ್ಕಳು ವಾಸವಿದ್ದರು ಎನ್ನಲಾಗಿದೆ. ಪ್ರಕರಣ ಬಳಿಕ ಪಾಲಕರನ್ನು ಭೇಟಿಯಾಗಿದ್ದ ಸಿಬ್ಬಂದಿ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಇಂದು ಬರುತ್ತೇವೆ ನಾಳೆ ಬರುತ್ತೇವೆ ಎಂದು ಕಾಲ ತಳ್ಳಿದ ಪಾಲಕರು ಇದೀಗ ದಸರಾ ಹಬ್ಬದ ನೆಪ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಪಾಲಕರು ಬರುವವರೆಗೆ ಮಕ್ಕಳ ಮುಂದಿನ ಭವಿಷ್ಯವೇನು? ಕೈಗೊಳ್ಳಬೇಕಾದ ಕ್ರಮವೇನು ಎಂಬುದರ ಬಗ್ಗೆ ಅಧಿಕಾರಿಗಳಿಗೂ ಗೊಂದಲ ಮೂಡಿಸಿದೆ.

ಯಾವುದೇ ದಾಖಲೆಗಳು ಇಲ್ಲ:

ಮಕ್ಕಳ ಪಾಲಕರು ಎಂದು ಗುರುತಿಸಿಕೊಂಡಿರುವ ಅವರ ಬಳಿ ಯಾವುದೇ ದಾಖಲೆಗಳೂ ಇಲ್ಲ. ಆಧಾರ್​ಕಾರ್ಡ್​, ಮತದಾರ ಚೀಟಿ ಸೇರಿ ಯಾವುದೇ ದಾಖಲೆಗಳಿಲ್ಲದಿರುವುದು ಮತ್ತೊಂದು ತಲೆಬೇನೆ ತರಿಸಿದೆ. ಭಿಾಟನೆ ಮಾಡುವುದು, ಕಾಡಿನಲ್ಲಿ ಜೇನುಕಿತ್ತು ಮಾರಾಟ ಮಾಡುವ ಕಸುಬು ಮಾಡುವ ಇವರು ಎಲ್ಲಿಂದ ಬಂದಿದ್ದಾರೆ ಎಷ್ಟು ವರ್ಷದಿಂದ ಇಲ್ಲಿ ನೆಲೆಸಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಪಾಲಕರು ಸದಾ ಕಾಲ ಪಾನಮತ್ತರಾಗಿರುವುದು ಕಂಡುಬಂದಿದೆ. ಅಷ್ಟಕ್ಕೂ ರಕ್ಷಣೆ ಮಾಡಿರುವ ಮಕ್ಕಳು ಇವರದ್ದೇನಾ ಎಂಬ ಅನುಮಾನವೂ ಮೂಡಿದೆ. ಪಾಲಕರ ಅನುಮತಿ ಮೇರೆಗೆ ಮುಂದಿನ ಕ್ರಮವಹಿಸಬಹುದು. ಆದರೆ ಪಾಲಕರೇ ಪತ್ತೆ ಇಲ್ಲದೆ ಪ್ರಕರಣವನ್ನು ಹೇಗೆ ಸುಖಾಂತ್ಯಗೊಳಿಸಬಹುದು ಎಂಬ ಗೊಂದಲ ಮೂಡಿಸಿದೆ.

ಪಾಲಕರಿಗೆ ಕಾಳಜಿಯೇ ಇಲ್ಲ!

ಕಳೆದ ಮೂರ್ಮಾಲ್ಕು ತಿಂಗಳಿಂದ ಮಕ್ಕಳು ಪಾಲಕರ ಬಳಿಯೂ ಹೋಗಿಲ್ಲ, ದೇವಸ್ಥಾನದ ಆವರಣದಲ್ಲಿ ಭಿೆ ಬೇಡುವುದು, ಪ್ರಸಾದದಲ್ಲೇ ಹೊಟ್ಟೆ ತುಂಬಿಸಿಕೊಳ್ಳುವುದು, ಸ್ಥಳಿಯರು ಯಾರಾದರೂ ಬಟ್ಟೆ ಕೊಟ್ಟರೆ ಹಾಕಿಕೊಳ್ಳುವುದು, ರಾತ್ರಿ ವೇಳೆ ಮರಗಿಡ, ಬಂಡೆಗಳ ಸಂದಿಗೊಂದಿಗಳಲ್ಲಿ ಮಲಗುವುದು ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.

ವಸತಿ ಶಾಲೆಗೆ ದಾಖಲಿಸುವ ಚಿಂತನೆ:

ನಿಯಮದ ಪ್ರಕಾರ ಪಾಲಕರಿರುವ ಮಕ್ಕಳ ಮುಂದಿನ ಭವಿಷ್ಯವನ್ನು ಅವರ ಪಾಲಕರೇ ನಿರ್ಧರಿಸಬೇಕು. ಪಾಲಕರ ಸಮ್ಮತಿ ಮೇರೆಗೆ ಇಲಾಖೆ ಕ್ರಮಕೈಗೊಳ್ಳಲಿದೆ. ಈ ಪ್ರಕರಣದಲ್ಲಿ ಪಾಲಕರು ಸ್ಪಂದಿಸದಿರುವುದು ಕಗ್ಗಂಟಾಗಿದೆ. ಮುಂದಿನ ದಿನಗಳಲ್ಲಿ ಪಾಲಕರು ಸ್ಪಂದಿಸದಿದ್ದರೆ ಮಕ್ಕಳನ್ನು ವಸತಿ ಶಾಲೆಗೆ ದಾಖಲಿಸಿ ಅವರ ಶಿಕ್ಷಣ ಭವಿಷ್ಯ ರೂಪಿಸುವ ಚಿಂತನೆ ಇದೆ ಎಂಬುದು ಅಧಿಕಾರಿಗಳ ಇಂಗಿತವಾಗಿದೆ.

&&&&&&&&&&&

ಕೋಟ್​()

ಮುಜರಾಯಿ ಇಲಾಖೆ ಮಾಹಿತಿಯಂತೆ ಮಕ್ಕಳ ರಕ್ಷಣಾಟಕದ ವತಿಯಿಂದ ಮೂರು ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು ಅವರನ್ನು ಬಾಲಮಂದಿರಕ್ಕೆ ದಾಖಲಿಸಲಾಗಿದೆ. ಪಾಲಕರನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪಾಲಕರ ವಿಚಾರಣೆ ನಡೆದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ.

ಅನಿತಾಲಕ್ಷಿ$್ಮ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ.

&&&&

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಅ.9ರಂದು ಮೂರು ಮಕ್ಕಳನ್ನು ರಕ್ಷಣೆ ಮಾಡಿ ಬಾಲಮಂದಿರಲ್ಲಿ ಆಶ್ರಯ ಕಲ್ಪಿಸಲಾಗಿದೆ. ಪಾಲಕರಿಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗುವಂತೆ ಅನೇಕ ಬಾರಿ ತಿಳಿಹೇಳಿದ್ದೇವೆ ಆದರೆ ಇದುವರೆಗೆ ಹಾಜರಾಗಿಲ್ಲ. ಹಬ್ಬದ ನೆಪದಲ್ಲಿ ಶೆಡ್​ ಖಾಲಿ ಮಾಡಿದ್ದಾರೆ. ಕೆಲವು ದಿನ ಕಾದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಕ್ರಮಕೈಗೊಳ್ಳಲಾಗುವುದು.

> ಶ್ರೀನಿವಾಸ್​, ಮಕ್ಕಳ ರಕ್ಷಣಾಧಿಕಾರಿ ಬೆಂಗಳೂರು ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net