ರಕ್ತದಾನ ಮಾಡಿ ಜೀವ ಉಳಿಸಿ

* ಶಾಸಕ ಧೀರಜ್​ ಮುನಿರಾಜು ಮನವಿ * ದೊಡ್ಡಬಳ್ಳಾಪುರದಲ್ಲಿ ಸೇವಾಸಂಕಲ್ಪ ಅಭಿಯಾನ
ದೊಡ್ಡಬಳ್ಳಾಪುರ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಶಾಸಕ ಧೀರಜ್​ ಮುನಿರಾಜು, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್​, ನಗರ ಅಧ್ಯಕ್ಷ ಮುದ್ದಪ್ಪ, ಮುಖಂಡರಾದ ಗೋಪಿ, ವಾಸು, ಪ್ರಿಯಾಂಕಾ, ಅರ್ಜುನ್​ ಸೇರಿದಂತೆ ಅನೇಕರು ಇದ್ದರು.
ದೊಡ್ಡಬಳ್ಳಾಪುರ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಶಾಸಕ ಧೀರಜ್​ ಮುನಿರಾಜು, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್​, ನಗರ ಅಧ್ಯಕ್ಷ ಮುದ್ದಪ್ಪ, ಮುಖಂಡರಾದ ಗೋಪಿ, ವಾಸು, ಪ್ರಿಯಾಂಕಾ, ಅರ್ಜುನ್​ ಸೇರಿದಂತೆ ಅನೇಕರು ಇದ್ದರು.
Published on: 

ದೊಡ್ಡಬಳ್ಳಾಪುರ : ಅಪಘಾತ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅಗತ್ಯತೆ ಹೆಚ್ಚು. ರಕ್ತದಾನ ಮಾಡುವುದು ಮಾನವೀಯ ಕಾರ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಧೀರಜ್​ ಮುನಿರಾಜು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ 25 ವರ್ಷಗಳ ಸಾರ್ವಜನಿಕ ಸೇವೆಯ ಸ್ಮರಣಾರ್ಥ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಸೇವಾ ಮೇರಾ ಯೋಗದಾನ್​ ಕಾರ್ಯಕ್ರಮದಡಿ ದೊಡ್ಡಬಳ್ಳಾಪುರದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತದಾನ ಮಹಾದಾನವಾಗಿದ್ದು, ಒಬ್ಬ ವ್ಯಕ್ತಿ ನೀಡುವ ರಕ್ತ ಮತ್ತೊಂದು ಜೀವ ಉಳಿಸಲು ಅಮೂಲ್ಯವಾಗುತ್ತದೆ. ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಾರ್ವಜನಿಕರು ಮಾನವೀಯ ಸೇವೆಯಲ್ಲಿ ತಮ್ಮ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಸೇವಾ ಸಂಕಲ್ಪದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ರಕ್ತದ ಅವಶ್ಯಕತೆ ಇರುವ ಸಂದರ್ಭದಲ್ಲಿ ದಾನಿಗಳು ಮುಂದೆ ಬಂದು ರಕ್ತ ನೀಡುವುದರಿಂದ ಹಲವರ ಜೀವ ಉಳಿಸಲು ಸಾಧ್ಯವಾಗುತ್ತದೆ. ಯುವಕರು ಸೇರಿದಂತೆ ಸಾರ್ವಜನಿಕರು ನಿಯಮಿತವಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ ದಾನಿಗಳನ್ನು ಅಭಿನಂದಿಸಲಾಯಿತು. ಶಿಬಿರದಲ್ಲಿ ಹೆಲ್ಮೆಟ್​ಗಳನ್ನು ವಿತರಿಸುವ ಮೂಲಕ ಸಂಚಾರಿ ನಿಯಮದ ಬಗ್ಗೆಯೂ ಜಾಗೃತಿಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net