ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ನಿಶ್ಶಕ್ತಿ ದೂರ

* ರೋಟರಿ ಅಧ್ಯಕ್ಷ ಲೋಕೇಶ್​ ಸಲಹೆ * ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೀಮಂತ
NELAMANGAL
ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಲೋಕೇಶ್​, ವೈದ್ಯೆ ಡಾ.ಪುಷ್ಪಲತಾ, ರೋಟರಿ ಕ್ಲಬ್​ ಸ್ಕೆ$ವೇ ಅಧ್ಯಕ್ಷೆ ಲಕ್ಷಣಾ, ರೋಟರಿ ಕ್ಲಬ್​ ಬೆಂಗಳೂರು ನಂದಿನಿ ಅಧ್ಯಕ್ಷ ಬಸವರಾಜ ಹುಂಬರವಾಡಿ, ನೆಲಮಂಗಲ ರೋಟರಿ ಕ್ಲಬ್​ ಕಾರ್ಯದರ್ಶಿ ಸುಶೀಲ್​ ಕುಮಾರ್​ ಇತರರು ಇದ್ದರು.
Published on

ನೆಲಮಂಗಲ : ಗರ್ಭಿಣಿಯರು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ರೋಟರಿ ಅಧ್ಯಕ್ಷ ಲೋಕೇಶ್​ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೆಲಮಂಗಲ ರೋಟರಿ, ರೋಟರಿ ನಂದಿನಿ ಹಾಗೂ ರೋಟರಿ ಸ್ಕೆ$ವೇ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲ ಮಹಿಳೆಯರು ಆರ್ಥಿಕವಾಗಿ ಹಿಂದುಳಿದಿದ್ದು, ಅವರಿಗೆ ಸೀಮಂತ ಮಾಡುವುದಿಲ್ಲ. ಅಂತಹ ಮಹಿಳೆಯರು ಮಾನಸಿಕವಾಗಿ ಕುಗ್ಗಿರುತ್ತಾರೆ. ಗರ್ಭಿಣಿಗೆ ಧೈರ್ಯ ತುಂಬಲು ಹಿಂದೂ ಸಂಪ್ರದಾಯದಂತೆ ಹೆರಿಗೆ ಯಾವುದೇ ತೊಂದರೆಯಾಗದಂತೆ ನಡೆಯಲಿ ಎಂಬ ಉದ್ದೇಶದಿಂದ ಆಶೀರ್ವಾದ ಮಾಡಲು ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವೈದ್ಯರ ಮಾರ್ಗದರ್ಶನ ಪಾಲಿಸಿ: ಗರ್ಭಿಣಿಯರು ತರಕಾರಿ, ಹಣ್ಣು ಮತ್ತಿತರ ಪೌಷ್ಟಿಕ ಆಹಾರ ಸೇವಿಸಬೇಕು. ಮಹಿಳೆಯರು ತಮ್ಮ ಆರೋಗ್ಯಕ್ಕೆ ಹೆಚ್ಚು ಗಮನಹರಿಸದೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಆರೋಗ್ಯ ಹೊಂದಲು ಪೌಷ್ಟಿಕಾಂಶದ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸಬೇಕು. ಜತೆಗೆ ಭವಿಷ್ಯದ ಮಕ್ಕಳು ಆರೋಗ್ಯವಾಗಿರಬೇಕಾದರೆ ಗರ್ಭಿಣಿಯರು ಪೌಷ್ಟಿಕ ಆಹಾರ ಜತೆಗೆ ವೈದ್ಯರ ಮಾರ್ಗದರ್ಶನ, ಮುಂಜಾಗೃತೆ ಅನುಸರಿಸಬೇಕು ಎಂದು ರೋಟರಿ ಅಧ್ಯಕ್ಷ ಲೋಕೇಶ್​ ಹೇಳಿದರು.

ವೈದ್ಯೆ ಡಾ.ಪುಷ್ಪಲತಾ ಮಾತನಾಡಿ, ಗರ್ಭಧಾರಣೆ ಎನ್ನುವುದು ಮಹಿಳೆ ಜೀವನದಲ್ಲಿ ಒಂದು ಮಹತ್ತರ ಘಟ್ಟ. ಹಾಗಾಗಿ ಗರ್ಭಿಣಿಯರು ಸುರಕ್ಷಿತ ತಾಯ್ತನಕ್ಕೆ ಆದ್ಯತೆ ನೀಡಬೇಕು. ಸುರಕ್ಷಿತ ಹೆರಿಗೆಗಾಗಿ ನಿಯಮಿತ ವೈದ್ಯಕಿಯ ತಪಾಸಣೆ ಮಾಡಿಸಿಕೊಳ್ಳಬೇಕು. ತಾಯಿಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಇಂದಿನ ಮಹಿಳೆಯರು ಆತ್ಮಸ್ಥೆ$ರ್ಯ ಬೆಳೆಸಿಕೊಳ್ಳಬೇಕಿದೆ. ಮನೆಗೆಲಸ, ಕುಟುಂಬ ನಿರ್ವಹಣೆ ಒತ್ತಡದ ನಡುವೆಯೂ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.

ಸೀಮಂತ ಕಾರ್ಯಕ್ರಮ: ಸುಮಾರು 60 ಗರ್ಭಿಣಿಯರಿಗೆ ಅರಿಶಿಣ& ಕುಂಕುಮ ನೀಡಿ, ಹೂ ಮುಡಿಸಿ, ಬಳೆ ತೊಡಿಸಿ, ಮಡಿಲು ತುಂಬಿ ಆರತಿ ಮಾಡಿ ಸೀಮಂತ ಕಾರ್ಯ ನೆರವೇರಿಸಲಾಯಿತು. ಉಪಾಧ್ಯಕ್ಷ ಸೋಮಶೇಖರ್​, ಮಾಜಿ ಅಧ್ಯಕ್ಷ ಎನ್​.ಜಿ.ನಾಗರಾಜು, ಸಿ.ಜಿ.ಮಂಜುನಾಥ್​ಗೌಡ, ನಿರ್ದೇಶಕ ರವಿಕುಮಾರ್​, ಆರ್​.ನಾಗರಾಜು, ಶಿವಶಂಕರ್​ಪ್ರಸಾದ್​, ರುದ್ರೇಗೌಡ, ಉಮಾನಾರಾಯಣ್​, ಸುಜಾತಾ, ವನಿತಾ, ಅಕ್ಷತಾ, ವಿಶ್ವನಾಥ್​, ಹೊನ್ನೇಗೌಡ, ವಿನೋದ್​ಕುಮಾರ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net