ಗ್ರಾಪಂ ಅಭಿವೃದ್ಧಿ ಮೇಲೆ ಕಾಮೋರ್ಡ!

ಬಿಡುಗಡೆಯಾಗದ 15ನೇ ಹಣಕಾಸು ಆಯೋಗದ ಅನುದಾನ- ರಾಜ್ಯದ ಗ್ರಾಪಂಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ
Kamord on Gram Panchayat Development!
ಎಐ ಚಿತ್ರ
Published on: 

ಗಂಗಾಧರ್​ ಬೈರಾಪಟ್ಟಣ ರಾಮನಗರ

ಗ್ರಾಮ ಪಂಚಾಯಿತಿಗಳ ಆದಾಯಮೂಲಗಳಲ್ಲಿ ಒಂದಾಗಿರುವ ಕೇಂದ್ರ ಹಣಕಾಸು ಆಯೋಗದ ಅನುದಾನ ಬಹುತೇಕ ಎರಡು ವರ್ಷಗಳಿಂದ ಬಿಡುಗಡೆಯಾಗದಿರುವುದು ಅಭಿವೃದ್ಧಿ ಕಾರ್ಯಗಳ ಮೇಲೆ ಕಾಮೋರ್ಡ ಆವರಿಸುವಂತೆ ಮಾಡಿದ್ದು, ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ 2025&26ನೇ ಸಾಲಿನ ಅನುದಾನ ಮತ್ತು 2026&27ನೇ ಸಾಲಿನ 16ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಆಗದ ಕಾರಣ ಬೆಂಗಳೂರು ದಕ್ಷಿಣ ಸೇರಿ ರಾಜ್ಯದ ಗ್ರಾಮ ಪಂಚಾಯಿತಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅತಿ ಹೆಚ್ಚು ಕರ ವಸೂಲಿ ಮಾಡುವ ಎ ಗ್ರೇಡ್​ ಪಂಚಾಯಿತಿಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಪಂಚಾಯಿತಿಗಳು ಬಾಗಿಲು ಮುಂಚುವ ಹಂತಕ್ಕೆ ತಲುಪಿದ್ದು, ಪಿಡಿಒಗಳು ನಿರುತ್ತರರಾಗುವಂತೆ ಮಾಡಿದೆ.

ಏನೀ ಅನುದಾನ?: ಪ್ರತಿ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ ಹಣಕಾಸು ಆಯೋಗವು, ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಅನುದಾನ ಪ್ರಮಾಣ ಪ್ರತಿ ಗ್ರಾಮ ಪಂಚಾಯಿತಿಗೂ ವ್ಯತ್ಯಾಸವಿರುತ್ತದೆ. ನೀಡುವ ಅನುದಾನವನ್ನು ಪ್ರತಿ ವರ್ಷ 2&3 ಕಂತುಗಳಲ್ಲಿ ಸರ್ಕಾರದಿಂದ ಬಿಡುಗಡೆ ಆಗುತ್ತದೆ. ಇದರಲ್ಲಿ ರ್ನಿಬಂಧಿತ ಮತ್ತು ಅರ್ನಿಬಂಧಿತ ಅನುದಾನವಾಗಿದ್ದು, ರ್ನಿಬಂಧಿತ ಅನುದಾನವನ್ನು ಕೇಂದ್ರ ಸೂಚಿಸುವ ಕಾಮಗಾರಿಗಳಿಗಷ್ಟೇ ಬಳಕೆ ಮಾಡಿಕೊಳ್ಳಬೇಕು. ಅರ್ನಿಬಂಧಿತ ಅನುದಾನವನ್ನು ಗ್ರಾಪಂ ತನ್ನ ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವಿದೆ.

ಸಂಕಷ್ಟಕ್ಕೆ ಕಾರಣವೇನು? : ಹಿಂದಿನ ಕಂತಿನ ಅನುದಾನದ ಬಳಕೆ ಪ್ರಮಾಣಪತ್ರ (ಯುಸಿ) ಸಲ್ಲಿಕೆಯಲ್ಲಿನ ವಿಳಂಬ ಹಾಗೂ ತಂತ್ರಾಂಶಗಳಲ್ಲಿನ ತಾಂತ್ರಿಕ ದೋಷಗಳು, ಸ್ಥಳಿಯ ಹಂತದಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದೇ ಇರುವುದು ಅನುದಾನ ಬಿಡುಗಡೆಗೆ ತೊಡಕಾಗಿದೆೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಆಡಳಿತ ಯಂತ್ರ ಸಂಪೂರ್ಣ ಕುಸಿಯುವ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಿ ಬಾಕಿ ಇರುವ 15 ಮತ್ತು 16ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡಿಕೊಡಬೇಕಿದೆ.

ಏತಕ್ಕೆ ಬಳಕೆ ಆಗುತಿತ್ತು? : ಕೇಂದ್ರ ಹಣಕಾಸು ಆಯೋಗದ ಅರ್ನಿಬಂಧಿತ ಅನುದಾನ ಇದ್ದರೆ ಇದನ್ನು ಗ್ರಾಪಂಗಳಲ್ಲಿ ಎದುರಾಗುವ ಪ್ರತಿ ದಿನ ಸಾರ್ವಜನಿಕ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿತ್ತು. ಇದು ಗ್ರಾಪಂ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುತ್ತಿತ್ತು. 50 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚು ಕರ ಸಂಗ್ರಹ ಮಾಡುವ ಗುರಿಯನ್ನು ಹೊಂದಿರುವ ಗ್ರಾಪಂಗಳ ಸಿಬ್ಬಂದಿ ವೇತನವನ್ನು ಸರ್ಕಾರ ನೀಡುವುದಿಲ್ಲ. ಸಂಗ್ರಹವಾಗುವ ಕರದಲ್ಲಿಯೇ ವೇತನ ನೀಡಬೇಕು. ಅಲ್ಲದೆ, 50 ಲಕ್ಷ ರೂ. ಸಂಗ್ರಹವಾಗುವ ಕರಕ್ಕೆ ಶೇ.24 ತೆರಿಗೆಯನ್ನು ಸರ್ಕಾರಕ್ಕೆ ಗ್ರಾಮ ಪಂಚಾಯಿತಿಗಳು ನೀಡಬೇಕು.

ಗುರಿ 50 ಲಕ್ಷ ರೂ. ಇದ್ದರೂ ಕರ ವಸೂಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಆಗುವುದಿಲ್ಲ. ಸಂಗ್ರಹವಾಗುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಂಡರೆ ಸಿಬ್ಬಂದಿಗೆ ಸಂಬಳವಿಲ್ಲ, ಸಂಬಳ ಕೊಡದಿದ್ದರೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣಕಾಸು ಆಯೋಗದ ಅನುದಾನ ಇದ್ದರೆ, ಎಲ್ಲವನ್ನೂ ಸರಿದೂಗಿಸಬಹುದಿತ್ತು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಮೂಲಸೌಕರ್ಯ ಮತ್ತು ಸ್ವಚ್ಛತೆಗೆ ಅಡ್ಡಿ: 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಸಿಂಹಪಾಲು ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ (ಸ್ವಚ್ಛತೆ) ನಿರ್ವಹಣೆಗೆ ಮೀಸಲಾಗಿರುತ್ತದೆ. ಆದರೆ, ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕೊಳವೆಬಾವಿಗಳ ತುರ್ತು ದುರಸ್ತಿ, ಪೈಪ್​ಲೈನ್​ ನಿರ್ವಹಣೆ ಹಾಗೂ ನತ್ಯಾಜ್ಯ ವಿಲೇವಾರಿ ಟಕಗಳ ನಿರ್ವಹಣೆಗೆ ಪಂಚಾಯಿತಿಗಳು ಪರದಾಡುವಂತಾಗಿದೆ. ಇದರೊಂದಿಗೆ ಬೀದಿ ದೀಪಗಳು ಮತ್ತು ಕುಡಿಯುವ ನೀರಿನ ಪಂಪ್​ಸೆಟ್​ಗಳ ವಿದ್ಯುತ್​ ಬಿಲ್​ ಪಾವತಿಸಲೂ ಹಣವಿಲ್ಲದಂತಾಗಿದೆ.

ಸಾಲದ ಸುಳಿಯಲ್ಲಿ ಪಿಡಿಒಗಳು : ಹಣದ ಕೊರತೆಯಿಂದಾಗಿ ಗ್ರಾಮಗಳಲ್ಲಿ ರಸ್ತೆ ದುರಸ್ತಿ, ಚರಂಡಿ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಆಗಾಗ್ಗೆ ಪಿಡಿಒಗಳನ್ನು ಸಾರ್ವಜನಿಕರ ಎದುರೇ ತರಾಟೆಗೆ ತೆಗೆದುಕೊಳ್ಳುವ ಜನಪ್ರತಿನಿಧಿಗಳು, ಸಾರ್ವಜನಿಕರ ಕೆಲಸ ಮಾಡಿಕೊಡುವಂತೆ ಒತ್ತಡ ಹೇರುತ್ತಾರೆ. ಈ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಆಗಬಹುದು ಎಂಬ ಆಶಾಭಾವನೆಯೊಂದಿಗೆ ಗೊತ್ತಿರುವ ಗುತ್ತಿಗೆದಾರನಿಂದ ಕೆಲಸ ಮಾಡಿಸುವ ಪಿಡಿಒಗಳು, ನಂತರ ಬಿಲ್​ ಪಾವತಿಗೆ ಒತ್ತಡ ಹೆಚ್ಚಿದಾಗ ಸಾಲ ಮಾಡಿ ಬಿಲ್​ ಪಾವತಿ ಮಾಡುತ್ತಿರುವ ಉದಾಹರಣೆ ಇವೆ. ಇದರಿಂದಾಗಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಗದಷ್ಟು ಅಧಿಕಾರಿಗಳು ಅಸಹಾಯಕರಾಗಿದ್ದಾರೆ.

ಅನುದಾನದ ಕೊರತೆ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಕೆಳ ಹಂತದಲ್ಲಿ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ನಮಗೆ ಏನು ಮಾಡಬೇಕು ಎಂದು ತೋಚದಾಗಿದೆ. ಸರ್ಕಾರ ಗ್ರಾಪಂಗಳ ನೆರವಿಗೆ ಧಾವಿಸಬೇಕಿದೆ.

- ಹೆಸರು ಹೇಳಲಿಚ್ಚಿಸದ ಪಿಡಿಒ