ಜಿಪಂ- ತಾಪಂ ಮೀಸಲು ನಿಗಧಿ

*ಹೊಸ ಆದೇಶ ಹೊರಡಿಸಿದ ಪಂಚಾಯತ್ ರಾಜ್ ಇಲಾಖೆ *ಶೇ.50ರಷ್ಟು ಮಹಿಳೆಯರಿಗೆ ಮೀಸಲು
ಜಿಪಂ ಭವನ
ರಾಮನಗರ ಜಿಪಂ ಭವನ
Published on: 

ರಾಮನಗರ: ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗೆ ಪೂರ್ವಸಿದ್ದತೆಯನ್ನು ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಮೀಸಲಾತಿ ಅಧಿಸೂಚನೆಯನ್ನು ಹೊರಡಿಸಿದೆ.

ರಾಮನಗರ ಜಿಲ್ಲೆಯಲ್ಲಿ ಒಟ್ಟು 28 ಸದಸ್ಯ ಬಲದ ಜಿಲ್ಲಾ ಪಂಚಾಯತಿಯಲ್ಲಿ ಶೇ.50ರಂತೆ 14 ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಟ್ಟಿದ್ದು, ಉಳಿದಂತೆ ಎಸ್‌ಸಿ, ಎಸ್‌ಟಿ, ಬಿಸಿಎಂ ಹೀಗೆ ಪ್ರತಿಯೊಂದು ವರ್ಗಕ್ಕೂ ಸ್ಥಾನದಲ್ಲಿ ಮೀಸಲಾತಿಯನ್ನು ನೀಡಿ ವರ್ಗೀಕರಣ ಮಾಡಿದೆ.

ಅಲ್ಲದೆ, ಈ ಹಿಂದೆ ಮೀಸಲಾತಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಎಲ್ಲಾ ಆದೇಶಗಳನ್ನು ರದ್ದುಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಕೆ ಪದನಿಮಿತ್ತ ಉಪ ಕಾರ್ಯದರ್ಶಿ ಅ.7ರ ಬುಧವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ರಾಮನಗರ ಜಿಪಂನಲ್ಲಿ 28 ಸ್ಥಾನಗಳಲ್ಲಿ ಎಸ್‌ಸಿಗೆ 6 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಇದರಲ್ಲಿ 3 ಸ್ಥಾನಗಳು ಎಸ್ಸಿ ಮಹಿಳೆಯರಿಗೆ ಕಾಯ್ದಿರಿಸಿದೆ. ಎಸ್ಟಿಗೆ ಮೀಸಲಿಟ್ಟಿರುವ ಒಂದು ಸ್ಥಾನವೂ ಆ ವರ್ಗದ ಮಹಿಳಗೆ ಮೀಸಲಾಗಿದೆ. ಹಿಂದುಳಿದ ವರ್ಗ ‘ಎ’ಗೆ ಮಹಿಳೆರಿಗೆ 3 ಸ್ಥಾನಗಳು ಸೇರಿದಂತೆ ಒಟ್ಟು 6, ಹಿಂದುಳಿದ ವರ್ಗ ‘ಬ’ಗೆ ಒಂದು ಸ್ಥಾನ ನೀಡಲಾಗಿದ್ದು, ಇದನ್ನು ಮಹಿಳೆಗೆ ಮೀಸಲಿರಿಸಲಾಗಿದೆ. ಸಾಮಾನ್ಯ ವರ್ಗದ 14 ಸ್ಥಾನಗಳಲ್ಲಿ 6 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ರಾಮನಗರ ತಾಪಂ 14 ಸ್ಥಾನಗಳಲ್ಲಿ 7 ಮಹಿಳೆಯರಿಗೆ, ಚನ್ನಪಟ್ಟಣದ 19 ಸ್ಥಾನಗಳಲ್ಲಿ ಮಹಿಳೆಯರಿಗೆ 10, ಕನಕಪುರದ 21 ಸ್ಥಾನಗಳಲ್ಲಿ 11 ಮಹಿಳೆಯರಿಗೆ ಹಾಗೂ ಮಾಗಡಿಯ 14 ಸ್ಥಾನಗಳಲ್ಲಿ ಮಹಿಳೆಯರಿಗೆ 7 ಸ್ಥಾನಗಳು ಮೀಸಲಾಗಿವೆ.ನೂತನವಾಗಿ ರಚನೆ ಆಗಿರುವ ಹಾರೋಹಳ್ಳಿ ತಾಲೂಕಿನ ಒಟ್ಟು 9 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಮಹಿಳೆಗೆ ಮೀಸಲಿರಲಾಗಿದೆ.

ಜಿಲ್ಲೆಯ ಮೀಸಲಾತಿ ವಿವರ ( ಮಹಿಳೆಯರಿಗೆ ಮೀಸಲು ಸ್ಥಾನಗಳ ಸಂಖ್ಯೆ)

ಜಿ ಪಂ ಸ್ಥಾನಗಳು ಎಸ್‌ಸಿ ಎಸ್‌ಟಿ ಬಿಸಿಎಂ (ಎ) ಬಿಸಿಎಂ (ಬಿ) ಸಾಮಾನ್ಯ

28 (14) 06(03) 01(01) 06(03) 01(01) 14(06)

=========================================================

ತಾಪಂಗಳು ಸ್ಥಾನಗಳು ಎಸ್‌ಸಿ ಎಸ್‌ಟಿ ಬಿಸಿಎಂ (ಎ) ಬಿಸಿಎಂ (ಬಿ) ಸಾಮಾನ್ಯ

ಹಾರೋಹಳ್ಳಿ 09(05) 02(01) 01(01) 01(01) 00(00) 05(02)

ರಾಮನಗರ 14(07) 03(02) 01(01) 02(01) 01(00) 07(02)

ಮಾಗಡಿ 14(07) 03(02) 01(01) 02(01) 01(00) 07(02)

ಚನ್ನಪಟ್ಟಣ 19(10) 04(02) 01(01) 03(02) 01(00) 10(05)

ಕನಕಪುರ 21(11) 04(02) 01(01) 04(02) 01(01) 11(05)

============================================================

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net