ಬೆಂಗಳೂರಿನಲ್ಲಿ ಕಾರ್ಮಿಕನನ್ನು ಕೊಂದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿ: ಇಂದು ಅದೇ ಜಾಗದಲ್ಲಿ ಚಿರತೆ ಪ್ರತ್ಯಕ್ಷ! Elephant

ಬೆಂಗಳೂರು ನಗರದ ಕೆಂಗೇರಿ ಸಮೀಪದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಹಿಂಭಾಗದ ಅಂಚೆಪಾಳ್ಯದಲ್ಲಿ ಕಾಡಾನೆ ದಾಳಿ ನಡೆಸಿತ್ತು. ಅಂಚೆಪಾಳ್ಯ ಗ್ರಾಮದ ನಾಗರಾಜ್ ಎಂಬ ಕಾರ್ಮಿಕ ಮೃತಪಟ್ಟ ದುರ್ದೈವಿಯಾಗಿದ್ದು, ನಿನ್ನೆ (ಸೆ. 28) ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ದಾರುಣ ಘಟನೆ ಸಂಭವಿಸಿತು.
Elephant
ಬೆಂಗಳೂರಿನಲ್ಲಿ ಆನೆ ದಾಳಿಗೆ ಕಾರ್ಮಿಕ ನಾಗರಾಜ್​ ಸಾವು
Published on: 

ಬೆಂಗಳೂರು: ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಹಿಂಭಾಗದ ಅಂಚೆಪಾಳ್ಯ ಪ್ರದೇಶದಲ್ಲಿ ಕಾರ್ಮಿಕನೊಬ್ಬನ ಮೇಲೆ ದಾಳಿ ನಡೆಸಿ ಕೊಂದು ಹಾಕಿ ಆತಂಕ ಸೃಷ್ಟಿಸಿದ್ದ ಕಾಡಾನೆಯನ್ನು ( Elephant ) ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಕಾಡಿಗೆ ಅಟ್ಟಿದ್ದಾರೆ. ನಗರದ ಜನವಸತಿ ಪ್ರದೇಶಕ್ಕೆ ನುಗ್ಗಿ ಭೀತಿ ಮೂಡಿಸಿದ್ದ ಈ ಕಾಡಾನೆಯನ್ನು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ನಗರದ ಕೆಂಗೇರಿ ಸಮೀಪದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಹಿಂಭಾಗದ ಅಂಚೆಪಾಳ್ಯದಲ್ಲಿ ಕಾಡಾನೆ ದಾಳಿ ನಡೆಸಿತ್ತು. ಅಂಚೆಪಾಳ್ಯ ಗ್ರಾಮದ ನಾಗರಾಜ್ ಎಂಬ ಕಾರ್ಮಿಕ ಮೃತಪಟ್ಟ ದುರ್ದೈವಿಯಾಗಿದ್ದು, ನಿನ್ನೆ (ಸೆ. 28) ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ದಾರುಣ ಘಟನೆ ಸಂಭವಿಸಿತು. ವಾಕಿಂಗ್‌ಗೆ ತೆರಳಿದ್ದ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ಘಟನಾ ಸ್ಥಳದಲ್ಲಿ ಕಾಂಪೌಂಡ್‌ಗಳು ಉರುಳಿಬಿದ್ದಿರುವುದು ಆನೆಯ ಅಬ್ಬರಕ್ಕೆ ಸಾಕ್ಷಿಯಾಗಿದೆ.

Also Read
ರೇಣುಕಾಸ್ವಾಮಿ ಮರ್ಮಾಂಗಕ್ಕೆ 2 ಬಾರಿ ಒದ್ದ ದರ್ಶನ್​... ಇಂದಿನ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಹೇಳಿಕೆ ನೀಡಿದ ಪ್ರದೋಶ್! Actor Darshan
Elephant

ಕಾಡಾನೆ ಪತ್ತೆಗಾಗಿ ಅರಣ್ಯ ಸಿಬ್ಬಂದಿ ತಂತ್ರಜ್ಞಾನದ ಮೊರೆ ಹೋಗಿದ್ದು, ಥರ್ಮಲ್ ಡ್ರೋನ್‍ಗಳ ನೆರವಿನಿಂದ ಆನೆಯ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಿದ್ದರು. ಈ ವೇಳೆ ಆನೆಯು ಬಿ.ಎಂ. ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವುದು ಪತ್ತೆಯಾಯಿತು. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಯಾವುದೇ ಪ್ರಾಣಾಪಾಯವಾಗದಂತೆ ಎಚ್ಚರಿಕೆ ವಹಿಸಿ ಆನೆಯನ್ನು ನಿಯಂತ್ರಣಕ್ಕೆ ತಂದರು.

ಅಂತಿಮವಾಗಿ ಅರಣ್ಯ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯು ಫಲಪ್ರದವಾಗಿದ್ದು, ರಾತ್ರಿ ಇಡೀ ಶ್ರಮಿಸಿ ಆನೆಯನ್ನು ಸುರಕ್ಷಿತವಾಗಿ ಎಲಿಫೆಂಟ್ ಕಾರಿಡಾರ್ ಮೂಲಕ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ರವಾನಿಸಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಆನೆ ವೇಗವಾಗಿ ಓಡಾಡಿರುವುದು ಮತ್ತು ಕೆಲವೇ ಸೆಕೆಂಡ್‌ಗಳಲ್ಲಿ ಸ್ಥಳೀಯರೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವುದು ದಾಖಲಾಗಿದ್ದು, ಆನೆಯನ್ನು ಕಾಡಿಗೆ ಓಡಿಸಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕಾರ್ಮಿಕನ ಕುಟುಂಬಕ್ಕೆ ಪರಿಹಾರ

ಆನೆ ದಾಳಿಗೆ ಅಂಚೆಪಾಳ್ಯ ಗ್ರಾಮದ ನಾಗರಾಜ್ ಎಂಬುವರು ಬಲಿಯಾದ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿಬಂದಿದ್ದಾರೆ.

Also Read
ತನ್ನ ಡ್ರೆಸ್​ ಬಗ್ಗೆ ಕಾಮೆಂಟ್​ ಮಾಡಿದವರಿಗೆ ಬಿಗ್​ಬಾಸ್​ ಬ್ಯೂಟಿ ವೈಷ್ಣವಿ ಕೊಟ್ಟ ತಿರುಗೇಟು ಹೀಗಿದೆ... Vaishnavi v Koundinya
Elephant

ಇಂದು ಚಿರತೆ ಪ್ರತ್ಯಕ್ಷ

ಅಂಚೆಪಾಳ್ಯ ಭಾಗದಲ್ಲಿ ಕಾಡಾನೆಯ ಆರ್ಭಟದ ಬೆನ್ನಲ್ಲೇ, ಇದೀಗ ಅದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿರುವುದು ಸ್ಥಳೀಯ ಜನತೆಯನ್ನು ತೀವ್ರ ಭಯಭೀತರನ್ನಾಗಿ ಮಾಡಿದೆ. ಮಂಗಳವಾರ ಮುಂಜಾನೆ ಮೂರರ ಸುಮಾರಿಗೆ ನಿರ್ಜನ ವಲಯದಲ್ಲಿ ಚಿರತೆ ಓಡಾಡಿರುವ ಹೆಜ್ಜೆಗುರುತು ಹಾಗೂ ಚಲನವಲನಗಳು ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತೀಚೆಗಷ್ಟೇ ಆನೆ ದಾಳಿಗೆ ಸಿಲುಕಿ ಕಾರ್ಮಿಕನೊಬ್ಬ ಪ್ರಾಣ ಕಳೆದುಕೊಂಡ ಕಹಿ ಘಟನೆಯ ಮಾಸುವ ಮುನ್ನವೇ ಚಿರತೆ ಪ್ರತ್ಯಕ್ಷವಾಗಿರುವುದು ಜನರನ್ನು ಇನ್ನಿಲ್ಲದಂತೆ ಆಘಾತಕ್ಕೆ ದೂಡಿದೆ. ಒಂದೆಡೆ ಕಾಡಾನೆ ಹಾವಳಿಯಿಂದ ತತ್ತರಿಸಿರುವ ನಾಗರಿಕರು, ಮತ್ತೊಂದೆಡೆ ಚಿರತೆಯ ಭೀತಿಯಿಂದಾಗಿ ರಾತ್ರಿ ಹಾಗೂ ಮುಂಜಾನೆ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಅರಣ್ಯ ಇಲಾಖೆಯು ಕೂಡಲೇ ಈ ನರಭಕ್ಷಕ ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಿ ತಮ್ಮ ಜೀವಕ್ಕೆ ರಕ್ಷಣೆ ಒದಗಿಸಬೇಕೆಂದು ಗೋಗರೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net