ತೀವ್ರ ಪೈಪೋಟಿಯ ಶಿಕ್ಷಣ ಕ್ಷೇತ್ರದಲ್ಲಿ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಮಿತ್ರ ಸಹಕಾರಿ : ಶಾಸಕ ಎಸ್ ಮುನಿರಾಜು ಸಲಹೆ

ಶಾಸಕ ಎಸ್ ಮುನಿರಾಜು ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಹಾಗೂ ಉದ್ಯೋಗ ಮಿತ್ರ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಶಾಸಕ ಎಸ್ ಮುನಿರಾಜು ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಹಾಗೂ ಉದ್ಯೋಗ ಮಿತ್ರ ಸಂಚಿಕೆಯನ್ನು ಬಿಡುಗಡೆ ಮಾಡಿದರು.
Published on

ಪೀಣ್ಯ,ದಾಸರಹಳ್ಳಿ: ಇಂದಿನ ದಿನಗಳ ತೀವ್ರ ಪೈಪೋಟಿಯ ಶಿಕ್ಷಣ ಕ್ಷೇತ್ರದಲ್ಲಿ ಪರೀಕ್ಷೆಗಳನ್ನು ಎದುರಿಸಲು ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿಮಿತ್ರ ಪತ್ರಿಕೆಯು ಸಹಕಾರಿಯಾಗಲಿದೆ. ಸಾಮಾಜಿಕ ಬದ್ಧತೆಯುಳ್ಳ ವಿಜಯವಾಣಿ ಪತ್ರಿಕೆಯು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಿದೆ’, ಎಂದು ಶಾಸಕ ಎಸ್ ಮುನಿರಾಜು ಹೇಳಿದರು.

ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಹಾಗೂ ಉದ್ಯೋಗ ಮಿತ್ರ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡುವಾಗ ನನಗೆ ನನ್ನ ಬಾಲ್ಯದ ದಿನಗಳು ನೆನಪಾಗುತ್ತಿವೆ. ನಾನು ಸಹ ಸರ್ಕಾರಿ ಶಾಲೆಯ ಮಕ್ಕಳ ಮಧ್ಯೆ ಬೆಳೆದವನು. ನನಗೆ ಲಭ್ಯವಿರುವ ಎಲ್ಲ ರೀತಿಯ ನೆರವುಗಳನ್ನು ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ ಬಹುತೇಕರು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಕೆಲವರು ವಿಜ್ಞಾನಿಗಾಗಿ ಇನ್ನು ಕೆಲವರು ಕ್ರೀಡಾಪಟುಗಳಾಗಿ ಬೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಸರ್ಕಾರಿ ಶಾಲೆಯ ಮಕ್ಕಳಲ್ಲಿ ನಾಯಕತ್ವ ಗುಣ, ಹೊಸ ಆವಿಷ್ಕಾರಗಳ ಸಾಮರ್ಥ್ಯ ಮತ್ತು ಜವಾಬ್ದಾರಿ ಮನೋಭಾವವನ್ನು ಬೆಳೆಸುವಲ್ಲಿ ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನೀವು ಯಾವುದೇ ಸಂದರ್ಭದಲ್ಲೂ ನಿಮ್ಮ ಕನಸುಗಳನ್ನು ಬಿಟ್ಟುಕೊಡಬೇಡಿ. ಸರ್ಕಾರಿ ಶಾಲೆ ನಿಮಗೆ ಪ್ರೇರಣೆಯಾಗಲಿ’, ಎಂದು ಸಲಹೆ ನೀಡಿದರು.
ಚಿತ್ರ ಶೀರ್ಷಿಕೆ: ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿ ಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮ. ಈ ಸಂದರ್ಭದಲ್ಲಿ ಶಾಸಕ ಎಸ್ ಮುನಿರಾಜು, ಬಿಬಿಎಂಪಿ ಮಾಜಿ ಸದಸ್ಯರು ಭಾಗ್ಯಮ್ಮ ಕೃಷ್ಣಯ್ಯ ವಾರ್ಡ್ ಅಧ್ಯಕ್ಷ ಕೃಷ್ಣಪ್ಪ ಶಿವಪುರ ವಾರ್ಡ್ ಅಧ್ಯಕ್ಷ ಶಿವಲಿಂಗಯ್ಯ ಪ್ರಧಾನ ಕಾರ್ಯದರ್ಶಿಗಳಾದ ಪುಟ್ಟಸ್ವಾಮಿ ಲಕ್ಷ್ಮಣಪ್ಪ ಹರೀಶ್ ವಾಚ್ ರಾಮಣ್ಣ ಹಿಂದುಳಿದ ವರ್ಗದ ಅಧ್ಯಕ್ಷ ರಾಜಣ್ಣ ವಿಜಯ್ ಕುಮಾರ್ ಶಿವಾನಂದ ನಗರದ ಮುನಿರಾಜು ಪರಮೇಶ್, ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net