ಇಂದಿನಿಂದ ಅರ್ಹತಾ ಸುತ್ತು: ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಶನಿವಾರ ಮತ್ತು ಸೋಮವಾರ ನಡೆಯಲಿವೆ. ಭಾರತದ ರಾಮ್ಕುಮಾರ್ ರಾಮನಾಥನ್, ಮನೀಷ್ ಸುರೇಶ್ ಕುಮಾರ್, ಆದಿತ್ಯ ಬಲಶೇಕರ್ ಮತ್ತು ಕನ್ನಡಿಗ ಆದಿಲ್ ಕಲ್ಯಾಣ್ಪುರ್ ಅರ್ಹತಾ ಸುತ್ತಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದಾರೆ. ದೇವ್ ಜವಿಯಾ, ನಿತಿನ್ ಕುಮಾರ್ ಸಿನ್ಹಾ, ಸಿದ್ಧಾರ್ಥ್ ರಾವತ್ ಅರ್ಹತಾ ಸುತ್ತಿನಲ್ಲಿ ಆಡಲಿರುವ ಇತರ ಭಾರತೀಯರಾಗಿದ್ದಾರೆ.