ಗ್ರಂಥಪಾಲಕರ ನೇಮಕಾತಿಗೆ ಒತ್ತಾಯಿಸಿ ಅ.5ರಂದು ಮೌನ ಪ್ರತಿಭಟನೆ

ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ವಿಶ್ವವಿದ್ಯಾಲಯಗಳು ಸೇರಿ ಅಂದಾಜು ಒಟ್ಟು 10ರಿಂದ 12 ಸಾವಿರ ವೃತ್ತಿಪರ ಗ್ರಂಥಪಾಲಕರ ಹುದ್ದೆಗಳು ಖಾಲಿ ಇವೆ. ಅಲ್ಲದೆ, ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ವಹಿಸುತ್ತಿರುವ ಗ್ರಂಥಾಲಯಗಳಲ್ಲಿ ಸರ್ಕಾರವು 12ಸಾವಿರ ವೇತನ ನೀಡುತ್ತಿದೆ. ಜತೆಗೆ ಪಂಚಾಯಿತಿಗಳು 6 ಸಾವಿರ ರೂ. ನೀಡಬೇಕು. ಅದನ್ನು ಪಂಚಾಯಿತಿಗಳು ನೀಡದ ಕಾರಣ ಆರ್ಥಿಕವಾಗಿಯೂ ಅನ್ಯಾಯವಾಗುತ್ತಿದೆ
Public Library
ಸಾರ್ವಜನಿಕ ಗ್ರಂಥಾಲಯAI
Published on: 

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರಂಥಪಾಲಕರ ನೇಮಕಾತಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘವು ಅ.5ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಎಸ್.ಎಲ್. ಕಾಡದೇವರಮಠ, ಕಳೆದ 18 ವರ್ಷಗಳಿಂದ ಗ್ರಂಥ ಪಾಲಕರ ನೇಮಕಾತಿ ನಡೆದಿಲ್ಲ. ಹೀಗಾಗಿ, ಇದೇ ಮೊದಲ ಬಾರಿಗೆ ಪ್ರತಿಭಟನೆ ನಡೆಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ವಿಶ್ವವಿದ್ಯಾಲಯಗಳು ಸೇರಿ ಅಂದಾಜು ಒಟ್ಟು 10ರಿಂದ 12 ಸಾವಿರ ವೃತ್ತಿಪರ ಗ್ರಂಥಪಾಲಕರ ಹುದ್ದೆಗಳು ಖಾಲಿ ಇವೆ. ಅಲ್ಲದೆ, ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ವಹಿಸುತ್ತಿರುವ ಗ್ರಂಥಾಲಯಗಳಲ್ಲಿ ಸರ್ಕಾರವು 12ಸಾವಿರ ವೇತನ ನೀಡುತ್ತಿದೆ. ಜತೆಗೆ ಪಂಚಾಯಿತಿಗಳು 6 ಸಾವಿರ ರೂ. ನೀಡಬೇಕು. ಅದನ್ನು ಪಂಚಾಯಿತಿಗಳು ನೀಡದ ಕಾರಣ ಆರ್ಥಿಕವಾಗಿಯೂ ಅನ್ಯಾಯವಾಗುತ್ತಿದೆ ಎಂದರು.

ಲೈಬ್ರರಿ ಸೈನ್ಸ್‌ನಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದಿರುವ ಸಾವಿರಾರು ಮಂದಿ ಉದ್ಯೋಗವಿಲ್ಲದೆ, ಪರದಾಡುತ್ತಿದ್ದಾರೆ. ಆದ್ದರಿಂದ ಗ್ರಂಥಪಾಲಕ ಹುದ್ದೆಯನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಜೇಂದ್ರಕುಮಾರ್, ಶೇಖರ್, ಸಿದ್ಧಮಲ್ಲಯ್ಯ ಸೇರಿ ಹಲವರು ಉಪಸ್ಥಿತರಿದ್ದರು.

ಸಂಘದ ಬೇಡಿಕೆಗಳು

  • - ಆರ್‌ಡಿಪಿಆರ್ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು.

  • - ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವೃತ್ತಿಗೆ ಸಂಬಂಧಿಸಿದ ಬಹುಕಾಲದಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮತ್ತು ಸಂಘದ ಪ್ರತಿನಿಧಿಗಳ ನಡುವೆ ವ್ಯವಸ್ಥಿತ ಸಂವಾದ ಏರ್ಪಡಿಸಬೇಕು.

  • - ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ವೃತ್ತಿಪರ ಗ್ರಂಥಾಲಯ ಸೇವೆಗಳನ್ನು ಬಲಪಡಿಸಲು ಸಮಗ್ರ ಸರ್ಕಾರಿ ನೀತಿಯನ್ನು ರೂಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net