ಇಎಸ್‌ಐಸಿ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವ

ರಾಜಾಜಿನಗರದ ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ. ಗಣ್ಯರು ಉಪಸ್ಥಿತಿ.
ರಾಜಾಜಿನಗರದ ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ. ಗಣ್ಯರು ಉಪಸ್ಥಿತಿ.
Published on: 

ಬೆಂಗಳೂರು: ಕನ್ನಡ ಭಾಷೆ, ನಾಡು, ನುಡಿ ಹಾಗೂ ಶ್ರೀಮಂತ ಸಂಸ್ಕೃತಿಯ ಹಿರಿಮೆ ಮತ್ತು ಪರಂಪರೆಯನ್ನು ಸಾರುವ ಉದ್ದೇಶದಿಂದ ರಾಜಾಜಿನಗರದ ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆಗೊಂಡಿತು.

ಇಎಸ್‌ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಮನರಂಜನಾ ಕೂಟದ ವತಿಯಿಂದ ನಡೆದ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಗಮನ ಸೆಳೆದವು. ಹಾಸ್ಯ ಸಾಹಿತಿ ಪ್ರೊ. ಎಂ. ಕೃಷ್ಣೇಗೌಡ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ಇಎಸ್‌ಐಸಿ ಆಸ್ಪತ್ರೆಯ ಡೀನ್ ಡಾ. ಜೆ.ಎಂ. ಜಿತೇಂದ್ರ ಕುಮಾರ್, ವೈದ್ಯಕೀಯ ಅಧೀಕ್ಷಕಿ ಡಾ. ವಿ. ವಿಜಯಕುಮಾರಿ, ರೇಣುಕಾ ಪ್ರಸಾದ್, ಡಾ. ಅಶಿಕ್ ಮುಲ್ಲಿಕ್ , ಗೌರವಾಧ್ಯಕ್ಷ ಡಾ. ಎಂ.ಎಸ್. ಗಿರೀಶ್, ಅಧ್ಯಕ್ಷ ಸುಧಾಕರ್, ಜಂಟಿ ಕಾರ್ಯದರ್ಶಿ ಎಸ್. ಶಿವಣ್ಣ , ಬ್ರಿಜೇಶ್, ರಾಮ್ ರಾಜ್ ಮೀನಾ, ಮನೋಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.